ಜ.19ರಂದು ಮೈಸೂರಲ್ಲಿ ರಾಷ್ಟ್ರೀಯ ಯೋಗ ಕ್ರೀಡಾ ಸ್ಪರ್ಧೆ
ಮೈಸೂರು

ಜ.19ರಂದು ಮೈಸೂರಲ್ಲಿ ರಾಷ್ಟ್ರೀಯ ಯೋಗ ಕ್ರೀಡಾ ಸ್ಪರ್ಧೆ

January 17, 2020

1400ಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸುವ ನಿರೀಕ್ಷೆ
ಮೈಸೂರು, ಜ.16(ಆರ್‍ಕೆಬಿ)- ಎಸ್‍ಜಿಎಸ್ ಅಂತಾರಾಷ್ಟ್ರೀÀಯ ಯೋಗ ಪ್ರತಿಷ್ಠಾನ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯು ಜ.19ರಂದು ಮೈಸೂರಿನ ದಸರಾ ವಸ್ತು ಪ್ರದರ್ಶನದ ಗಾನಮಂಟಪ ಆವರಣದಲ್ಲಿ ಮೊದಲ ರಾಷ್ಟ್ರೀಯ ಯೋಗಾಸನ ಕ್ರೀಡಾ ಸ್ಪರ್ಧೆ ಆಯೋಜಿಸಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಆಚಾರ್ಯ ಡಾ.ಎಂ.ನಿರಂಜನಮೂರ್ತಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹಾಗೂ ಸ್ಥಳೀಯ ಯೋಗ ಸಂಸ್ಥೆಗಳ ಸಹಯೋಗ ದಲ್ಲಿ ನಡೆಯುವ ಯೋಗ ಕ್ರೀಡಾಸ್ಪರ್ಧೆಗೆ ದೇಶದ 1,400 ಯೋಗಪಟುಗಳು ನೋಂದಾಯಿಸಿಕೊಂಡಿದ್ದಾರೆ. 8 ವರ್ಷದಿಂದ 60 ವರ್ಷ ಮೇಲ್ಪಟ್ಟವರೆಗೆ 10 ವಿಭಾಗಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳಿರುತ್ತವೆ ಎಂದರು.

ಸ್ಪರ್ಧೆಯಲ್ಲಿ ವಿಜೇತರಾದವರನ್ನು ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆ ಮಾಡÀಲಾಗುವುದು. ಇದೇ ಸಂದರ್ಭದಲ್ಲಿ ನಿರ್ಣಾಯಕ ಸ್ಪರ್ಧೆಯನ್ನು ಹಮ್ಮಿ ಕೊಂಡಿದ್ದು, ರಾಷ್ಟ್ರೀಯ ಯೋಗ ಪತಂಜಲಿ, ರಾಷ್ಟ್ರೀಯ ಅತ್ಯುತ್ತಮ ಯೋಗ ಮಾಸ್ಟರ್ ಮತ್ತು ರಾಷ್ಟ್ರೀಯ ಯೋಗ ಜೂರಿ ಅವಾರ್ಡ್‍ಗಳನ್ನು ನೀಡಿ ಗೌರವಿಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಯೋಗ ಪ್ರವೀಣ ಶಿವಪ್ರಕಾಶ್, ಪತಂಜಲಿ ಯೋಗಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಕಲಾವತಿ, ಡಾ.ಚಂದ್ರಶೇಖರ್ ಉಪಸ್ಥಿತರಿದ್ದರು.

Translate »