ಚಾಮರಾಜನಗರ: ಲಿಂಗೈಕ್ಯ ರಾದ ತುಮಕೂರು ಶ್ರೀಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮಿಗಳು ಇಡೀ ವಿಶ್ವಕ್ಕೆ ಪ್ರಸಿದ್ಧವಾದ ದಾಸೋಹ ಮಾಡಿದ್ದಾರೆ. ಬಡಮಕ್ಕಳಿಗೆ ಆಶ್ರಯ ಕೊಟ್ಟ ಹೆಗ್ಗಳಿಕೆ ಶ್ರೀಗಳಿಗೆ ಸಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹೇಳಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿ ರುವ ವಿಶ್ವಹಿಂದು ಪರಿಷತ್ ಶಾಲೆಯ ಸಮೀಪದ ಮೈದಾನದಲ್ಲಿ ಡಾ. ವಿಷ್ಣು ವರ್ಧನ್ ಅಭಿಮಾನಿಗಳ ಸ್ನೇಹ ಬಳಗದ ವತಿಯಿಂದ ನಡೆದ ಡಾ. ಶ್ರೀ ಶಿವಕುಮಾರ ಸ್ವಾಮಿಗಳವರ ಗುರುನಮನ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಡಾ. ಶಿವಕುಮಾರ ಸ್ವಾಮಿಜಿ ತಿಳಿದುಕೊಂಡು ವಿದ್ಯಾದಾನ, ಅನ್ನದಾನ ಸೇವೆಯನ್ನು ನಿರಂತರವಾಗಿ ಮಾಡುವ ಮೂಲಕ ಯಾವುದೇ ಜಾತಿ, ಧರ್ಮ ನೋಡದೆ ಅಪಾರ ಸೇವೆ ಮಾಡಿ ದ್ದಾರೆ. ಅಂತಹ ಶ್ರೇಷ್ಠ ಸಂತರ ಗುರುನ ಮನ ಕಾರ್ಯಕ್ರಮವನ್ನು ಚಾಮರಾಜ ನಗರದಲ್ಲಿ ಡಾ. ವಿಷ್ಣುವರ್ಧನ್ ಅಭಿ ಮಾನಿಗಳ ಸ್ನೇಹ ಬಳಗದ ಮಾಡು ತ್ತಿರುವುದು ಬಹಳ ಅರ್ಥಪೂರ್ಣ ವಾಗಿದೆ ಎಂದರು.
ರಾಷ್ಟ್ರಪತಿ ಯುವ ಪ್ರಶಸ್ತಿ ಪುರಸ್ಕøತ ಸುರೇಶ್‍ಎನ್.ಋಗ್ವೇದಿ ಮಾತನಾಡಿ, ಡಾ ಶಿವಕುಮಾರಸ್ವಾಮಿಗಳು ತಮ್ಮ ಸೇವಾ ಕಾರ್ಯಕ್ರಿಯೆ ಮೂಲಕ ಭಗವಂತವನ್ನು ಕಾಣುವ ಚಿಂತನೆ ಹೊಂದಿದ್ದರು. ಶ್ರೀಗಳು ಮಹಾನ್ ಸಂತರು, ಜ್ಞಾನಿಗಳು, ಚಿಂತಕ ರಾಗಿ ಶ್ರೇಷ್ಠ ಕಾಲಘಟ್ಟದಲ್ಲಿ ಬದುಕಿದ್ದರು. 77 ವರ್ಷ ಪೀಠಾಧ್ಯಕ್ಷರಾಗಿ 111 ವರ್ಷ ಗಳ ಕಾಲ ಬದುಕಿದ ಶ್ರೇಷ್ಠ ಕಾಯಕ ತತ್ವ ಮಾಡಿ ಖಾವಿಗೆ ಬೆಲೆಕೊಟ್ಟು ಒಂದು ಪೀಠ, ಒಂದು ಕ್ಷೇತ್ರಕ್ಕೆ ವಿಶ್ವಮನ್ನಣೆ ಗಳಿಸಿಕೊಟ್ಟಿದ್ದಾರೆ ಎಂದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಮಾತನಾಡಿ, ಡಾ. ಶಿವಕುಮಾರಸ್ವಾಮಿಗಳು ದೇವರ ಪ್ರತಿರೂಪವಾಗಿ ನಾಡಿಗೆ ಬಂದು ಬಸ ವಣ್ಣ ಕಾಯಕ ತತ್ವದಡಿಯಲ್ಲಿ ವಿದ್ಯಾ ದಾನ, ಅನ್ನದಾನ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ ಮಾಡಿದ್ದಾರೆ. ಇಡೀ ವಿಶ್ವಾದ್ಯಂತ ಶ್ರೀಗಳ ಸ್ಮರಣೆ ಕಾರ್ಯಕ್ರಮ ನಡೆಯುತ್ತಿದೆ. ಶ್ರೀಗಳ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿ ಸಿಕೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್ ಮಾತನಾಡಿ, ಲಿಂಗೈಕ್ಯರಾದ ಡಾ.ಶಿವ ಕುಮಾರಸ್ವಾಮಿಗಳಿಗೆ ಭಾರತರತ್ನ ನೀಡಲು ಕೇಂದ್ರ ಸರ್ಕಾರ ನಿಯಮದ ತೊಡಕಾಗಿದೆ. ಪದ್ಮವಿಭೂಷಣ ಪ್ರಶಸ್ತಿ ದೊರೆತ 5 ವರ್ಷ ಗಳ ನಂತರ ಭಾರತರತ್ನ ಪ್ರಶಸ್ತಿ ನೀಡಲು ಅವಕಾಶವಿದೆ. ಆದರೂ ಸಹ ಕೇಂದ್ರ ನಿಯಮ ಸಡಿಲಿಕೆ ಮಾಡಿ ಶ್ರೀಗಳಿಗೆ ಭಾರತರತ್ನ ನೀಡಬಹುದಿತ್ತು. ಮುಂದಿನ ದಿನಗಳಲ್ಲಿ ಶ್ರೀಗಳಿಗೆ ಭಾರತರತ್ನ ಕೊಡಲಿ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರ ಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಕೊಡ ಸೋಗೆ ಶಿವಬಸಪ್ಪ, ಕರ್ನಾಟಕ ರೇಷ್ಮೆ ಕೈಗಾ ರಿಕ ನಿಗಮದ ಮಾಜಿ ಅಧ್ಯಕ್ಷ ನೂರೊಂದು ಶೆಟ್ಟಿ, ಚೂಡಾ ಮಾಜಿ ಅಧ್ಯಕ್ಷ ಆರ್.ಸುಂದರ್, ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಶಾಂತಶ್ರೀ, ಬಿಎಸ್ಪಿ ತಾಲೂಕು ಅಧ್ಯಕ್ಷ ಆಲೂರು ಮಲ್ಲು, ಸಾಧನ ಸಂಸ್ಥೆ ಟಿ.ಜೆ.ಸುರೇಶ್, ಡಾ.ಸುಗಂಧರಾಜು, ಜ.ಸುರೇಶ್‍ನಾಗ್, ಶಿವು, ಹರಿಪ್ರಸಾದ್, ಸಿ.ಡಿ.ಪ್ರಕಾಶ್, ಕರಿ ನಂಜನಪುರಕೂಸಣ್ಣ, ಅಂಬಳೆನಂಜುಂಡ ಸ್ವಾಮಿ, ಜನ್ನೂರುಪುಟ್ಟು ಹೊಸೂರು ಬಸವಣ್ಣ ಇತರರು ಹಾಜರಿದ್ದರು.