ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಜಿಲ್ಲಾಡಳಿತದ ಕ್ರಮಕ್ಕೆ ಖಂಡನೆ
ಮೈಸೂರು

ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಜಿಲ್ಲಾಡಳಿತದ ಕ್ರಮಕ್ಕೆ ಖಂಡನೆ

January 8, 2019

ಮೈಸೂರು,ಜ.7-ಭಾರತ್ ಬಂದ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರುವ ಜಿಲ್ಲಾಡಳಿತದ ಕ್ರಮವನ್ನು ರಾಜ್ಯ ಖಾಸಗಿ ಸಿಬಿಎಸ್‍ಇ ಮತ್ತು ಐಸಿಎಸ್‍ಇ ಆಡಳಿತ ಮಂಡಳಿ ಸಂಘದ ಉಪಾಧ್ಯಕ್ಷರೂ ಆದ ಕೌಟಿಲ್ಯ ವಿದ್ಯಾಲಯದ ಅಧ್ಯಕ್ಷ ಆರ್.ರಘು ಖಂಡಿಸಿದ್ದಾರೆ.

ಕೆಲವು ಕಾರ್ಮಿಕ ಸಂಘಟನೆಗಳು ಜ.8 ಹಾಗೂ 9ರಂದು ಭಾರತ್ ಬಂದ್‍ಗೆ ಕರೆ ನೀಡಿವೆ. ಆದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಸಮೀಪಿಸುತ್ತಿದ್ದು, ಪಠ್ಯ ಬೋಧನೆ ಪೂರ್ಣಗೊಳಿಸಲು ಕಾಲಾವಕಾಶದ ಕೊರತೆ ಎದುರಾಗಿದೆ. ಹಾಗಾಗಿ ಮೈಸೂ ರಿನ ಖಾಸಗಿ ಶಾಲಾ ಕಾಲೇಜುಗಳನ್ನು ಬಂದ್ ದಿನಗಳಲ್ಲೂ ನಡೆಸಲು ನಿರ್ಧರಿಸಿ, ಸೂಕ್ತ ರಕ್ಷಣೆ ನೀಡುವಂತೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಪತ್ರ ಬರೆದು, ಮನವಿ ಮಾಡಲಾಗಿದೆ. ಆದರೆ ಬಂದ್ ಆಚರಣೆ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ವಿರುದ್ಧವಾಗಿ ಜಿಲ್ಲಾಧಿಕಾರಿಗಳು ಶಾಲಾ ಕಾಲೇಜಿಗೆ ರಜೆ ಘೋಷಿಸಿರುವುದನ್ನು ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಸ್ವಯಂಪ್ರೇರಿತವಾಗಿ ಶಾಲಾ, ಕಾಲೇಜು ನಡೆಸಲು ಮುಂದಾಗಿದ್ದ ನಮಗೆ ಜಿಲ್ಲಾಡಳಿತ ಪೂರಕ ಸಹಕಾರ ನೀಡದ ಕಾರಣ, ಮಕ್ಕಳು, ಪೆÇೀಷಕರಿಗೆ ಅನಾನುಕೂಲ, ಆತಂಕ ಉಂಟಾಗಬಹುದು ಎಂಬ ಕಾರಣಕ್ಕೆ ಅನಿವಾರ್ಯವಾಗಿ ಶಾಲೆಗಳನ್ನು ನಡೆಸದಿರಲು ನಿರ್ಧರಿಸಿದ್ದೇವೆ.

ಭಾರತ್ ಬಂದ್‍ಗೆ ವಿರೋಧ ವ್ಯಕ್ತಪಡಿಸುತ್ತಾ ಬೇಸರದಿಂದ ಶಾಲೆಗಳನ್ನು ಬಂದ್ ಮಾಡುತ್ತಿದ್ದೇವೆ ಎಂದು ಆರ್.ರಘು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Translate »