ಶಾಸಕ ನಾಗೇಂದ್ರರಿಂದ ವಿವಿಧ ಕಾಮಗಾರಿಗೆ ಚಾಲನೆ
ಮೈಸೂರು

ಶಾಸಕ ನಾಗೇಂದ್ರರಿಂದ ವಿವಿಧ ಕಾಮಗಾರಿಗೆ ಚಾಲನೆ

January 8, 2019

ಮೈಸೂರು: ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದ ಅನುದಾನದಲ್ಲಿ ಡಿ.ದೇವರಾಜ ಅರಸು ರಸ್ತೆ ಹಿಂಭಾಗದಲ್ಲಿರುವ ಸಮುದಾಯ ಭವನದ ಮೊದಲ ಮಹಡಿ, ಸ್ಟೇರ್ಕೇಸ್, ಶೌಚಾಲಯ ನಿರ್ಮಾಣ ಸೇರಿದಂತೆ 20 ಲಕ್ಷ ರೂ. ಅಂದಾಜಿನ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಎಲ್.ನಾಗೇಂದ್ರ, ಸುಮಾರು 22 ಲಕ್ಷ ರೂ. ಅಂದಾಜು ಮೊತ್ತದಲ್ಲಿ ಕುಂಬಾರ ಕೊಪ್ಪಲಿನ ಆಶ್ರಯ ಬಡಾವಣೆಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ, ವಾಣಿವಿಲಾಸ ನೀರು ಸರಬರಾಜು ಕಾರ್ಯಾಲಯ ವ್ಯಾಪ್ತಿಯ ವಿವಿ ಮೊಹಲ್ಲಾ ಸೇವಾಕೇಂದ್ರದಿಂದ ಜಯ ಲಕ್ಷ್ಮೀಪುರಂ ಓಹೆಚ್‍ಟಿ ಟ್ಯಾಂಕ್‍ವರೆಗೆ ಕೊಳವೆ ಮಾರ್ಗ ಸರಿಪಡಿಸುವ ಕಾಮ ಗಾರಿ(ಅಂದಾಜು 29ಲಕ್ಷ ರೂ.)ಗೆ ಚಾಲನೆ ನೀಡಿ, ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.Translate »