ಗಿರೀಶ್ ಕಾರ್ನಾಡರಿಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಂತಾಪ
ಮೈಸೂರು

ಗಿರೀಶ್ ಕಾರ್ನಾಡರಿಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಂತಾಪ

June 11, 2019

ಮೈಸೂರು: ಸಾಹಿತಿ, ನಾಟಕಕಾರ, ನಟ, ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಗಿರೀಶ್ ಕಾರ್ನಾಡ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಸಂತಾಪ ಸೂಚಿಸಲಾಯಿತು.

ಈ ವೇಳೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ನೀಲಗಿರಿ.ಎಂ.ತಳ ವಾರ್ ಮಾತನಾಡಿ, ಗಿರೀಶ್ ಕಾರ್ನಾಡ್ ಅವರಂತಹ ಲೇಖಕರು ಒಂದು ನಾಡಿನಲ್ಲಿ ಹುಟ್ಟಿರುವುದು ವಿರಳ. ಅಪರೂಪಕ್ಕೆಂಬಂತೆ ಅಂತಹ ಮಹನೀಯರ ಜನ್ಮವಾಗುತ್ತದೆ. ಅವರ ಕಾರ್ಯಕ್ಷೇತ್ರ ಕರ್ನಾಟಕವಾದರೂ ಇಡೀ ದೇಶದಾದ್ಯಂತ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ತಮ್ಮ ಕೃತಿಗಳ ಮೂಲಕ ಸಂಚಾರ ಮಾಡಿದ್ದಾರೆ. ಆ ಮೂಲಕ ಕನ್ನಡಕ್ಕೆ ವಿಶೇಷ ಸ್ಥಾನಮಾನ ತಂದುಕೊಟ್ಟಿದ್ದಾರೆ ಎಂದರು.

ಪ್ರೊ.ಸಿ.ನಾಗಣ್ಣನವರು ಮಾತನಾಡಿ, ಗಿರೀಶ್ ಕಾರ್ನಾಡರದ್ದು ಬಹುಮುಖಿ ವ್ಯಕ್ತಿತ್ವ. ಕೇವಲ ಕನ್ನಡಕ್ಕಷ್ಟೇ ಅವರ ಪ್ರಭಾವ ಸೀಮಿತವಾಗಿರಲಿಲ್ಲ. ಅವರ ನಾಟಕಗಳು ಇಂದಿಗೂ ಉತ್ತರ ಭಾರತದಲ್ಲಿ ಪ್ರದರ್ಶನಗೊಳ್ಳುತ್ತಲೇ ಇವೆ. ಯುರೋಪಿಯನ್ ಭಾಷೆಗಳಿಗೆ ಅವರ ನಾಟಕಗಳು ತರ್ಜುಮೆಗೊಂಡಿವೆ. ಕನ್ನಡದ ಶ್ರೀಮಂತಿಕೆಯನ್ನು ಜಗತ್ತಿನಾದ್ಯಂತ ಪಸರಿಸಿದವರು ಕಾರ್ನಾಡರು. ಬಹಳ ವರ್ಷಗಳ ಹಿಂದೆ ಮೈಸೂರಿನ ನಜರ್‍ಬಾದಿನ ಹೋಟೆಲೊಂದರಲ್ಲಿ ಸ್ಮಿತಾ ಪಾಟೀಲ್ ಅವರೊಂದಿಗೆ ಉಪಾಹಾರ ಮಾಡುತ್ತಿದ್ದಾಗ ಹಾಲಿವುಡ್ ನಟನಂತೆ ಸ್ಫುರದ್ರೂಪಿಯಾಗಿ ಕಾಣುತ್ತಿದ್ದರು ಎಂದು ಸ್ಮರಿಸಿದರು.

ಪ್ರಾಧ್ಯಾಪಕಿ ಡಾ.ಪ್ರೀತಿ ಶ್ರೀಮಂಧರ್‍ಕುಮಾರ್ ಮಾತನಾಡಿದರು. ಬಳಿಕÀ ಮೌನಾ ಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಹಿರಿಯ ವಿದ್ವಾಂಸ ಹಿ.ಚಿ.ಬೋರ ಲಿಂಗಯ್ಯ, ಪ್ರೊ.ಚಂದ್ರಶೇಖರಯ್ಯ, ಸಾತನೂರು ದೇವರಾಜು, ಡಾ.ಎನ್.ಯೋಗೇಶ್, ಡಾ.ಛಾಯಾ, ಉಷಾ, ನಾಗರತ್ನ, ಮಂಜುನಾಥ, ನಟರಾಜು ಮತ್ತಿತರರು ಉಪಸ್ಥಿತರಿದ್ದರು.

Translate »