ಕೆ.ಆರ್.ನಗರದಲ್ಲಿ ಭಕ್ತರಿಂದ ಅಂತಿಮ ನಮನ
ಮೈಸೂರು

ಕೆ.ಆರ್.ನಗರದಲ್ಲಿ ಭಕ್ತರಿಂದ ಅಂತಿಮ ನಮನ

January 22, 2019

ಕೆ.ಆರ್.ನಗರ: ನಡೆ ದಾಡುವ ದೇವರೆಂದೇ ಪ್ರಖ್ಯಾತ ಹೊಂದಿದ ಸಿದ್ಧಗಂಗಮಠದ ಶ್ರೀ ಶಿವಕುಮಾರಸ್ವಾಮಿ ಗಳ ಲಿಂಗೈಕ್ಯ ಸುದ್ದಿ ಹೊರಬೀಳುತ್ತ್ತಿದ್ದಂತೆ ಸಹಸ್ರಾರು ಭಕ್ತಾದಿಗಳು ಅಲ್ಲಲ್ಲಿ ಭಾವಚಿತ್ರ ವನ್ನಿಟ್ಟು ಅಗಲಿದ ದೇವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಪಟ್ಟಣದಲ್ಲಿರುವ ವರ್ತಕರು ಲಿಂಗೈಕ್ಯ ಸುದ್ದಿ ತಿಳಿಯುತ್ತಿದ್ದಂತೆ ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ಸೂಚಿಸಿದರು. ಅಖಿಲ ವೀರಶೈವ ಮಹಾ ಸಭಾದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಜಿಪಂ ಮಾಜಿ ಅಧ್ಯಕ್ಷ ಎ.ಎಸ್.ಚನ್ನ ಬಸಪ್ಪ ಮತ್ತು ಜಿಪಂ ವಿಪಕ್ಷ ನಾಯಕ ಡಿ.ರವಿ ಶಂಕರ್, ಪುರಸಭಾ ಸದಸ್ಯ ಪ್ರಭುಶಂಕರ್ ನೇತೃತ್ವದಲ್ಲಿ ಪಟ್ಟಣದ ಗರಡುಗಂಭ ವೃತ್ತದಲ್ಲಿ ಬೃಹತ್ ಸಭೆ ಸೇರಿ ಡಾ.ಶಿವ ಕುಮಾರಸ್ವಾಮಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಂಬನಿ ಮಿಡಿದರು.

ನಂತರ ನೆರೆದಿದ್ದ ಭಕ್ತಾದಿಗಳನ್ನು ಉದ್ದೇ ಶಿಸಿ ಮಾತನಾಡಿದ ಅಖಿಲ ವೀರಶೈವ ಮಹಾಸಭಾದ ರಾಜ್ಯ ಕಾರ್ಯದರ್ಶಿ ರಾಜಶೇಖರ್, ನಮ್ಮನ್ನಗಲಿದ ಈ ನಾಡಿನ ನಡೆದಾಡುವ ದೇವರ ಭಾವಚಿತ್ರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಗೌರವ ಸಲ್ಲಿಸಿ ಬಸವೇಶ್ವರ ಬಡಾವಣೆಗೆ ತರಲಾಗುವುದು ಎಂದರು.
ಸಿದ್ಧಗಂಗಾಶ್ರೀಗಳ ಅಂತಿಮ ದರ್ಶನಕ್ಕೆ ತೆರಳಿರುವ ಸಚಿವ ಸಾ.ರಾ.ಮಹೇಶ್ ಅವರು ವಾಪಸ್ಸಾದ ನಂತರ ದಿನಾಂಕ ನಿಗದಿ ಮಾಡಿ ತಾಲೂಕಿನ ಎಲ್ಲಾ ಭಕ್ತಾದಿ ಗಳನ್ನು ಒಂದೆಡೆ ಸೇರಿಸಿ ಪಟ್ಟಣದ ರೇಡಿಯೋ ಮೈದಾನದಲ್ಲಿ ಡಾ.ಶಿವಕುಮಾರಸ್ವಾಮಿಗಳ ಶ್ರದ್ಧಾಂಜಲಿ ಸಭೆ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಹೊಸಳ್ಳಿ ವೆಂಕಟೇಶ್, ಸಾ.ರಾ. ರಮೇಶ್, ಪುರಸಭಾ ಅಧ್ಯಕ್ಷ ಹರ್ಷಲತಾ ರಾಜಾಶ್ರೀಕಾಂತ್, ಸದಸ್ಯರಾದ ಪ್ರಭು ಶಂಕರ್, ವಕೀಲರಾದ ಕೊಡಿಯಾಲಾ ಮಹೇಶ್, ಶಿವಕುಮಾರ್, ಲಾಲದೇವನ ಹಳ್ಳಿ ಉಮೇಶ್, ಎಸ್‍ವಿಎಸ್ ಸುರೇಶ್, ಉದ್ಯಮಿ ಪಂಚಾಕ್ಷರಿ, ಅರುಣ್ ನರಗುಂದ, ಗಡ್ಡಮಹೇಶ್, ಮಾಜಿ ಎಪಿಎಂಸಿ ಸದಸ್ಯ ಕುಮಾರ್, ಲಯನ್ಸ್ ಗಂಗಾಧರ್, ಸೈಯದ್ ಜಾಬೀರ್, ಪಿಎಲ್‍ಡಿ ಬ್ಯಾಂಕ್ ಮಹೇಶ್ ಇನ್ನಿತರರಿದ್ದರು.

Translate »