ಮೈಸೂರಲ್ಲಿ ಇಂದು ಸಿದ್ಧಗಂಗಾ ಶ್ರೀಗಳಿಗೆ ನುಡಿ ನಮನ
ಮೈಸೂರು

ಮೈಸೂರಲ್ಲಿ ಇಂದು ಸಿದ್ಧಗಂಗಾ ಶ್ರೀಗಳಿಗೆ ನುಡಿ ನಮನ

February 21, 2019

ಮೈಸೂರು: ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ಅಮೃತೋ ತ್ಸವ ಭವನದಲ್ಲಿ ನಾಳೆ(ಫೆ.21) ಸಂಜೆ 5ಕ್ಕೆ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಗುರುನಮನ ಸಲ್ಲಿಸ ಲಾಗುವುದು ಎಂದು ಸಿದ್ಧಲಿಂಗೇಶ್ವರಸ್ವಾಮಿ ಯುವಕ ಮಂಡಲ್ ಅಧ್ಯಕ್ಷ ಪಿ.ಎಂ.ಮಂಜುನಾಥ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಲಿಂಗೇಶ್ವರಸ್ವಾಮಿ ಸಮಿತಿ ಟ್ರಸ್ಟ್ ಮತ್ತು ಸಿದ್ಧಲಿಂಗೇಶ್ವರಸ್ವಾಮಿ ಯುವಕ ಮಂಡಲ್ ವತಿಯಿಂದ ಸಿದ್ಧಗಂಗಾ ಸ್ವಾಮೀಜಿ ಅವರ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ಬೇಬಿಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಅರಮನೆ ಜಪದಕಟ್ಟೆ ಮಠದ ಮುಮ್ಮಡಿ ಚಂದ್ರ ಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ, ಪೆÇ್ರ.ಸಿ.ಜಿ.ಉಷಾದೇವಿ ನುಡಿನಮನ ಸಲ್ಲಿಸುವರು. ಕಾರ್ಯಕ್ರಮದಲ್ಲಿ ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯ ಬಿ.ವಿ.ಮಂಜು ನಾಥ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಗಾಯಕ ನಿತಿನ್ ರಾಜಾರಾಮ್ ಶಾಸ್ತ್ರಿ ಮತ್ತು ತಂಡದಿಂದ ವಚನ ಗಾಯನ ಆಯೋಜಿಸಲಾಗಿದ್ದು, ರಾತ್ರಿ 9ಕ್ಕೆ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಆಯೋಜಕರಾದ ವಿರೂಪಾಕ್ಷ, ಚಂದ್ರಶೇಖರ್, ವಿಜಯಕುಮಾರ್, ಆರ್.ಅರುಣ್ ಉಪಸ್ಥಿತರಿದ್ದರು.

Translate »