80 ತುಂಬಿದ ಸಾಹಿತಿ ಡಾ.ಸಿಪಿಕೆ ಅವರಿಗೆ  ವಿವಿಧ ಸಂಘಟನೆಗಳಿಂದ ಅಭಿನಂದನೆ
ಮೈಸೂರು

80 ತುಂಬಿದ ಸಾಹಿತಿ ಡಾ.ಸಿಪಿಕೆ ಅವರಿಗೆ ವಿವಿಧ ಸಂಘಟನೆಗಳಿಂದ ಅಭಿನಂದನೆ

April 9, 2019

ಮೈಸೂರು: ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಅವರಿಗೆ 80 ತುಂಬಿದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಸೋಮವಾರ ಮೈಸೂ ರಿನ ಸರಸ್ವತಿಪುರಂನಲ್ಲಿರುವ ಅವರ ನಿವಾ ಸಕ್ಕೆ ತೆರಳಿ `ಕವಿ ಮನೆಯಲ್ಲಿ ಕವಿಗೆ ಸನ್ಮಾನ’ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಕನ್ನಡ ಚಳವಳಿಗಾರರ ಕೇಂದ್ರ ಸಮಿತಿ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್, ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಕಲಾಕೂಟ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸಿಪಿಕೆ ಅವರನ್ನು ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸಿಪಿಕೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಚಳ ವಳಿಗಳು ಸೊರಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ಕನ್ನಡದ ಸ್ಥಿತಿ ಮತ್ತು ಬೆಳವಣಿಗೆಗಳನ್ನು ಗಮನಿಸಿದರೆ ಹೋರಾಟ, ಚಳವಳಿ ಅತ್ಯವಶ್ಯಕ. ಕನ್ನಡ ಸಂಘಟನೆ ಮತ್ತು ಹೋರಾಟ ಕಾಣ ಸಿಗುತ್ತಿಲ್ಲ. ಹೀಗಾಗಿ ಎಲ್ಲರನ್ನೂ ಒಗ್ಗೂ ಡಿಸಿ ಕನ್ನಡದ ಹೋರಾಟ ಮರುಕಳಿಸ ಬೇಕಿದೆ. ಕನ್ನಡ ನಾಡು, ನುಡಿ ಉಳಿಸಿ, ಬೆಳೆಸಲು ಹೋರಾಟಗಳು ಇನ್ನಷ್ಟು ಗಟ್ಟಿಯಾಗಬೇಕಿದೆ ಎಂದು ಆಶಿಸಿದರು.

ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ 300 ಕೃತಿಗಳನ್ನು ನೀಡಿರುವ ಡಾ.ಸಿಪಿಕೆ, ಚುಟುಕು ಸಾಹಿತ್ಯ ರಚನೆಯ ಮೂಲಕ ಚುಟುಕು ಸಾಹಿತ್ಯದ ಬೆಳವಣಿಗೆ ಯಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ. ಇವರು ನೂರ್ಕಾಲ ಬದುಕಬೇಕು ಎಂದು ಹಾರೈಸಿದರು.

ಜೆಎಸ್‍ಎಸ್ ಮಹಾವಿದ್ಯಾಪೀಠದ ಪ್ರಕ ಟಣಾ ವಿಭಾಗದ ನಿರ್ದೇಶಕ ಪೆÇ್ರ.ಮೊರ ಬದ ಮಲ್ಲಿಕಾರ್ಜುನ, ದಾಸ್ತಿ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ, ರಾಜ ಶೇಖರ ಕದಂಬ, ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡ ಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಚಿಂತಕ ಹೆಳವರ ಹುಂಡಿ ಸಿದ್ದಪ್ಪ, ಎಂ.ಬಿ.ವಿಶ್ವನಾಥ್ ಇನ್ನಿತರರು ಉಪಸ್ಥಿತರಿದ್ದರು.

Translate »