ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಕಾಂಗ್ರೆಸ್
ಮೈಸೂರು

ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಕಾಂಗ್ರೆಸ್

September 4, 2019

ಬೆಂಗಳೂರು, ಸೆ.3: ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ನವದೆಹಲಿಯಲ್ಲಿ ಮಂಗಳವಾರ ರಾತ್ರಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳ ಗಾದ ಬೆನ್ನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯ ಕರ್ತರು ಭಾರೀ ಪ್ರತಿಭಟನೆ ಆರಂಭಿಸಿದ್ದಾರೆ. ಇದೇ ವೇಳೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬುಧವಾರ ಇಡೀ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವಂತೆ ಕರೆ ನೀಡಿದೆ. ಪಕ್ಷದ ಕಾರ್ಯಕರ್ತರು ಇಂದು ರಾತ್ರಿಯಿಂದಲೇ ಪ್ರತಿಭಟನೆಗಿಳಿದಿದ್ದು, ಹಲವೆಡೆ ಬಸ್‍ಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಡಿ.ಕೆ.ಶಿವ ಕುಮಾರ್ ಅವರ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು, ಡಿಕೆಶಿ ಬೆಂಬಲಿಗರು ಬುಧ ವಾರ ರಾಮನಗರ, ಕನಕಪುರ ಬಂದ್‍ಗೆ ಕರೆ ನೀಡಿದ ಬೆನ್ನಲ್ಲೇ ಕೆಪಿಸಿಸಿ ರಾಜ್ಯಾದ್ಯಂತ ಪ್ರತಿ ಭಟನೆ ನಡೆಸಲು ಕರೆ ನೀಡಿತು. ಮಂಗಳವಾರ ರಾತ್ರಿ 10.45ರ ವೇಳೆಗೆ ಕರೆ ಹೊರಬಿದ್ದಿತು.

ಪ್ರತಿಭಟನೆ-ಆಕ್ರೋಶ: ಡಿಕೆಶಿ ಬಂಧನದ ಸುದ್ದಿ ಮಂಗಳವಾರ ರಾತ್ರಿ 9ರ ವೇಳೆ ಬಿತ್ತರ ಗೊಳ್ಳುತ್ತಿದ್ದಂತೆಯೇ ಆಕ್ರೋಶ ಗೊಂಡು ರಾಮನಗರ, ಕನಕಪುರದಲ್ಲಿ ಬೀದಿಗಿಳಿದ ಡಿಕೆಶಿ ಬೆಂಬಲಿಗರು, ಕಾಂಗ್ರೆಸ್ ಕಾರ್ಯ ಕರ್ತರು, ಪ್ರತಿಭಟನೆ ಆರಂಭಿಸಿದರು. ರಸ್ತೆಯಲ್ಲಿ ಟಯರ್‍ಗಳನ್ನಿಟ್ಟು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು.

ಬಸ್‍ಗೆ ಬೆಂಕಿ: ಡಿಕೆಶಿ ಬೆಂಬಲಿಗರು, ಕನಕ ಪುರದಲ್ಲಿ ಕೆಎಸ್‍ಆರ್‍ಟಿಸಿಯ 4 ಬಸ್‍ಗಳಿಗೆ ಕಲ್ಲೆಸೆದಿದ್ದು, ಅವು ಜಖಂಗೊಂಡಿವೆ. ರಾಮ ನಗರದ ಕಲ್ಲಹಳ್ಳಿ ಬಳಿ ಒಂದು ಬಸ್‍ಗೆ ಬೆಂಕಿ ಹಚ್ಚಲಾಗಿದೆ. ಇದರ ಬೆನ್ನಲ್ಲೇ, ಕನಕಪುರ ಮತ್ತು ಬೆಂಗಳೂರು ನಡುವಿನ ಬಸ್ ಸಂಚಾರ ಮಂಗಳ ವಾರ ರಾತ್ರಿ 10ರ ಬಳಿಕ ಸ್ಥಗಿತಗೊಂಡಿತು.

Translate »