ಇನ್ನೂ ಪಂಜರದ ಹಕ್ಕಿಗಳಾಗಿರುವ ಕಾಂಗ್ರೆಸ್, ಜೆಡಿಎಸ್ ಶಾಸಕರು
ಮೈಸೂರು

ಇನ್ನೂ ಪಂಜರದ ಹಕ್ಕಿಗಳಾಗಿರುವ ಕಾಂಗ್ರೆಸ್, ಜೆಡಿಎಸ್ ಶಾಸಕರು

May 25, 2018

ಬೆಂಗಳೂರು:  ಶುಕ್ರ ವಾರ ನಡೆಯಲಿರುವ ವಿಶ್ವಾಸಮತ ಯಾಚನೆ ವೇಳೆ ಶಾಸಕರು ತಪ್ಪಿಸಿ ಕೊಳ್ಳಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕ ರನ್ನು ನಗರದ ರೆಸಾರ್ಟ್‍ವೊಂದರಲ್ಲಿ ಇರಿಸಲಾಗಿದೆ. ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ದೊರೆತ ನಂತರ ಕಳೆದ ಒಂಬತ್ತು ದಿನಗಳಿಂದಲೂ ಶಾಸಕರು ಅವರ ಕುಟುಂಬದಿಂದ ದೂರ ಉಳಿದಿದ್ದಾರೆ. ದೊಮ್ಮಲೂ ರಿನ ಹಿಲ್ಟನ್ ಎಂಬೆಸಿ ಗಲ್ಪ್ ಲಿಂಕ್ಸ್‍ನಲ್ಲಿ ಕಾಂಗ್ರೆಸ್ ಶಾಸಕರು ತಂಗಿದ್ದರೆ, ನಗರದ ಹೊರವಲಯ ದೇವನಹಳ್ಳಿಯ ಪ್ರಸ್ಟಿಜ್ ಗಲ್ಪ್ ಸೈರ್ ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ. ವಿಶ್ವಾಸಮತ ಯಾಚನೆವರೆಗೂ ಶಾಸಕರು ರೆಸಾರ್ಟ್‍ನಲ್ಲಿ ಇರುತ್ತಾರೆ. ಬಳಿಕ ಅವರ ಕುಟುಂದವರೊಂದಿಗೆ ಸೇರುತ್ತಾರೆ.

ನಮ್ಮ ಶಾಸಕರ ನಂಬಿಕೆ ಮೇಲೆ ತಪ್ಪಾದ ಅನಿಸಿಕೆ ವ್ಯಕ್ತಪಡಿಸಲಾಗುತ್ತಿದೆ. ಪಕ್ಷದ ನಿರ್ಧಾರವನ್ನು ಎಲ್ಲರೂ ಬೆಂಬಲಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ. ಶಾಸಕರ ಮೊಬೈಲ್ ಪೆÇೀನ್ ಕೂಡಾ ವಶಪಡಿಸಿಕೊಂಡಿದ್ದು, ಹೊರ ಜಗತ್ತಿನ ಸಂಪರ್ಕವೇ ಸಿಗದಂತೆ ಮಾಡಲಾಗಿದೆ. ಅವರಿಂದಲೇ ಪಡೆದು ಮನೆಯವರ ಜೊತೆ ಮಾತನಾಡಲಾಗುತ್ತದೆ. ವಿಶ್ವಾಸ ಮತ ಯಾಚನೆ ವೇಳೆ ಹೊಸ ಸರ್ಕಾರವನ್ನು ಬೀಳಿಸಲಾಗುತ್ತದೆ ಎಂದು ಕೆಲವರು ವದಂತಿ ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ರೆಸಾರ್ಟ್ ಹೊರಗಡೆ ಯಾರೊಂದಿಗೂ ಮಾತನಾಡದಂತೆ ಶಾಸಕರನ್ನು ನಿರ್ಬಂಧಿಸಲಾಗಿದೆ. ವಿಶ್ವಾಸಮತ ಬಳಿಕ ಅವರ ಮನೆಗಳಿಗೆ ತೆರಳಲಿದ್ದಾರೆ. ಯಾರೂ ಮೊಬೈಲ್ ಪೆÇೀನ್ ಬಳಸುವಂತಿಲ್ಲ. ಆದರೆ, ಅವರ ಮನೆಯವರೊಂದಿಗೆ ಮುಕ್ತವಾಗಿ ಮಾತನಾಡಬಹುದಾಗಿದೆ ಎಂದು ಜೆಡಿಎಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಸದಾನಂದ ಹೇಳಿದ್ದಾರೆ. ನೂತನ ಸಿಎಂ ಕುಮಾರಸ್ವಾಮಿ ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕರನ್ನು ಸಾಕಷ್ಟು ಬಿಗಿ ಭದ್ರತೆಯಲ್ಲಿ ವಿಧಾನಸೌಧದ ಬಳಿಗೆ ಕರೆತಂದು ಬಳಿಕ ರೆಸಾರ್ಟ್ ಹಾಗೂ ಹೋಟೆಲ್‍ಗಳಿಗೆ ಕರೆದೊಯ್ಯಲಾಯಿತು.

Translate »