ಬೆಂಗಳೂರು, ಜು. 18- ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಅಪಹರಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷ, ಬಿಜೆಪಿಯ ಮಾಜಿ ಸಚಿವ ಲಕ್ಷ್ಮಣ್ ಸವದಿ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.
ನಿನ್ನೆ ರಾತ್ರಿ ತಮ್ಮ ಜೊತೆ ಇದ್ದ ಶ್ರೀಮಂತ ಪಾಟೀಲ್ ಅವರು ಆರೋಗ್ಯವಾಗೇ ಇದ್ದರು. ಅವರನ್ನು ಲಕ್ಷ್ಮಣ್ ಸವದಿ ಅಪಹರಿಸಿ, ಚೆನ್ನೈ ಮತ್ತು ಅಲ್ಲಿಂದ ಮುಂಬೈಗೆ ಕೊಂಡೊಯ್ದು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಕಾಂಗ್ರೆಸ್ ದೂರು ಸಲ್ಲಿಸಿದೆ. ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಕಾಂಗ್ರೆಸ್ನ ದೂರನ್ನು ವಿಧಾನಸೌಧ ಪೊಲೀಸರು ಸ್ವೀಕರಿಸಿ ಲಕ್ಷ್ಮಣ್ ಸವದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಮೈಸೂರು