ಪ್ರತ್ಯೇಕ ಪ್ರತಿಭಟನೆ; ಬಿಜೆಪಿ ವಿರುದ್ಧ `ಕೈ’ ಆಕ್ರೋಶ, ಶಿಕ್ಷಣ ಸಚಿವರ ನೇಮಕಕ್ಕೆ ಸಂಘಟನೆ ಆಗ್ರಹ
ಚಾಮರಾಜನಗರ

ಪ್ರತ್ಯೇಕ ಪ್ರತಿಭಟನೆ; ಬಿಜೆಪಿ ವಿರುದ್ಧ `ಕೈ’ ಆಕ್ರೋಶ, ಶಿಕ್ಷಣ ಸಚಿವರ ನೇಮಕಕ್ಕೆ ಸಂಘಟನೆ ಆಗ್ರಹ

ಚಾಮರಾಜನಗರ: ರಾಜ್ಯದ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಆಪರೇಷನ್ ಕಮಲ ನಡೆಸುತ್ತಿರುವುದಾಗಿ ಆರೋಪಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಹಾಗೂ ಶಿಕ್ಷಣ ಸಚಿವರನ್ನು ನೇಮಿಸದೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳ ನಡೆ ಖಂಡಿಸಿ ನಗರದಲ್ಲಿಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯ ಕರ್ತರು ಪ್ರತ್ಯೇಕವಾಗಿ ಪ್ರತಿಭಟಿಸಿದರು.

ಕಾಂಗ್ರೆಸ್ ಆಕ್ರೋಶ: ರಾಜ್ಯದಲ್ಲಿ ಆಡ ಳಿತದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿ ಆಪರೇಷನ್ ಕಮಲ ನಡೆಸಿ ಪತನಗೊಳಿಸುವ ಹುನ್ನಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಕಾರ್ಯ ಕರ್ತರು ಆರೋಪಿಸಿದರು.

ನಗರದ ಸತ್ತಿ ರಸ್ತೆಯಲ್ಲಿ ಇರುವ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಜಮಾಯಿ ಸಿದ ಪಕ್ಷದ ಮುಖಂಡರು ಮತ್ತು ಕಾರ್ಯ ಕರ್ತರು ಘೋಷಣೆ ಕೂಗುತ್ತಾ ಪ್ರತಿಭಟನೆ ಆರಂಭಿಸಿದರು. ಕಚೇರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ-209 ರಸ್ತೆಗೆ ಆಗಮಿ ಸಿದ ಪ್ರತಿಭಟನಾಕಾರರು, ರಸ್ತೆಯಲ್ಲಿ ಕೆಲ ಕಾಲ ನಿಂತು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರಾ ಧ್ಯಕ್ಷ ಅಮಿತ್ ಷಾ ವಿರುದ್ಧ ಘೋಷಣೆ ಗಳನ್ನು ಕೂಗಿದರು. ಅನ್ಯ ಪಕ್ಷದ ಶಾಸಕ ರಿಗೆ ಕೋಟಿ-ಕೋಟಿ ರೂ. ಆಮಿಷ ತೋರಿ, ಆಪರೇಷನ್ ಕಮಲಕ್ಕೆ ಬಿಜೆಪಿ ಕೈ ಹಾಕಿದೆ. ಈ ಮೂಲಕ ಮೈತ್ರಿ ಸರ್ಕಾರ ಪತನಗೊಳಿಸಲು ಯತ್ನ ನಡೆಸಲಾಗುತ್ತಿದೆ ಎಂದು ಆಪಾದಿಸಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯ ಕ್ಷರಾದ ಮುನ್ನಾ, ಎ.ಎಸ್.ಗುರುಸ್ವಾಮಿ, ಮುಖಂಡರಾದ ಸಯ್ಯದ್ ರಫಿ, ಹೊಂಗ ನೂರು ಚಂದ್ರು, ಚೆನ್ನಮ್ಮ, ಆರ್.ಮಹ ದೇವು, ಸುಹೇಲ್ ಆಲಿ ಖಾನ್, ಎ.ಜಯ ಸಿಂಹ, ಮಹದೇವಶೆಟ್ಟಿ, ಭಾಗ್ಯಮ್ಮ, ನಾಗಶ್ರೀ, ರವಿಗೌಡ, ಸಿ.ಕೆ.ರವಿಕುಮಾರ್, ಆಲೂರು ಪ್ರದೀಪ್, ನಾಗಬಸವಣ್ಣ, ನಾಗೇಂದ್ರ, ಅಯ್ಯುಬ್ ಖಾನ್ ಇತರರಿದ್ದರು.

ಶಿಕ್ಷಣ ಸಚಿವರ ನೇಮಕಕ್ಕೆ ಆಗ್ರಹ: ರಾಜ್ಯ ಸರ್ಕಾರ ಶಿಕ್ಷಣ ಸಚಿವರನ್ನು ನೇಮಿಸದೇ ಬಜೆಟ್ ಮಂಡಿಸಿದ ಕ್ರಮಮನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಗರದಲ್ಲಿ ಪ್ರತಿಭಟಿಸಿತು.

ನಗರದ ಸುಲ್ತಾನ್ ಷರಿಫ್ ವೃತ್ತದಿಂದ ಪ್ರತಿಭಟನಾ ಮೆರವರಣಿಗೆ ಆರಂಭಿಸಿದ ಕಾರ್ಯಕರ್ತರು, ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ, ಕೆಲಕಾಲ ಧರಿಣಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇಲಾಖೆಗಳಲ್ಲಿ ಬಹುಮುಖ್ಯವಾಗಿರುವ ಶಿಕ್ಷಣ ಇಲಾಖೆಗೆ ಸರ್ಕಾರ ಸಚಿವರನ್ನು ನೇಮಿಸಿಲ್ಲ. ಕಳೆದ ನಾಲ್ಕು ತಿಂಗಳಿಂದ ಶಿಕ್ಷಣ ಸಚಿವರು ಇಲ್ಲದೆ ಇಲಾಖೆ ಸೊರಗಿದೆ. ಆದರೂ ಸಹ ಸರ್ಕಾರ ಬಜೆಟ್ ಮಂಡಿ ಸಿದ್ದು, ಇದು ಅಪರಿಪೂರ್ಣ ಬಜೆಟ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಶಿಕ್ಷಣ ಇಲಾಖೆಗೆ ಒತ್ತು ನೀಡ ಬೇಕು. ಈ ನಿಟ್ಟಿನಲ್ಲಿ ಅತೀ ಶೀಘ್ರದಲ್ಲಿ ಶಿಕ್ಷಣ ಸಚಿವರನ್ನು ನೇಮಕ ಮಾಡಬೇಕು. ರಾಜ್ಯ ಸರ್ಕಾರ ಉರ್ದು ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು. ವೈದ್ಯ ಕೀಯ ಶಿಕ್ಷಣಕ್ಕೆ ಅತೀ ಬೇಡಿಕೆ ಇರುವ ದಕ್ಷಣ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸ ಬೇಕು. ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಭಾಷೆಗಳನ್ನು ಕಲಿಕೆಗೆ ವಿಶೇಷ ಒತ್ತು ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಸುಹೇಲ್ ಪಾಷ, ಕಾರ್ಯದರ್ಶಿ ಕೆ.ಅಬ್ದುಲ್, ಉಪಾಧ್ಯಕ್ಷೆ ಜುóಹಾ, ಜಂಟಿ ಕಾರ್ಯದರ್ಶಿ ನಿದಾ ಫಾತೀಮ, ಸದಸ್ಯ ರಾದ ಮೊಹಮ್ಮದ್ ಮಸೂದ್, ಸುನೈನ್, ಸುಹೇಲ್, ಸೈಯದ್ ಸುಫೀಯಾನ್, ಆರೀಫ್, ಶುಹೇಬ್ ಖಾನ್ ಇತರರಿದ್ದರು.

February 10, 2019

Leave a Reply

Your email address will not be published. Required fields are marked *