ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಕೊಡಗು

ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

February 10, 2019

ಕುಶಾಲನಗರ: ಕೊಡಗು ಜಿಲ್ಲೆ ಯಲ್ಲಿ ಎಲ್ಲಾ ಅರ್ಹತೆ ಹೊಂದಿರುವ ಕುಶಾ ಲನಗರ ಕಾವೇರಿ ತಾಲೂಕು ಅನ್ನು ನೂತನ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವ ಸರ್ಕಾರ ಕ್ರಮವನ್ನು ಖಂಡಿಸಿ ಶನಿವಾರ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿ ಭಟನೆ ನಡೆಸಿದರು.

ನಗರ ಬಿಜೆಪಿ ಘಟಕದ ಅಧ್ಯಕ್ಷ ಕೆ.ಜಿ. ಮನು ನೇತೃತ್ವದಲ್ಲಿ ಜಮಾಯಿಸಿದ ಕಾರ್ಯ ಕರ್ತರು ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ದಶಕಗಳಿಂದಲೂ ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಾ ಸರ್ಕಾರಕ್ಕೆ ಮನವಿ ಸಲ್ಲಿಸುತ್ತ ಬಂದಿದ್ದರೂ ಕೂಡ ಇದುವರೆ ಗಿನ ಸರ್ಕಾರಗಳು ನಮ್ಮ ಬೇಡಿಕೆಗೆ ಮನ್ನಣೆ ನೀಡದಿರುವುದು ದೃರಾದೃಷ್ಟಕರ ಎಂದು ಕೆ.ಜಿ.ಮನು ದೂರಿದರು. ರಾಜ್ಯ ಸಮ್ಮಿಶ್ರ ಸರ್ಕಾರ ಘೋಷಣೆ ಮಾಡಿರುವ ನಾಲ್ಕು ನೂತನ ತಾಲೂಕುಗಳ ಪಟ್ಟಿಗೆ ಕಾವೇರಿ ತಾಲೂಕು ಸೇರ್ಪಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭ ಪಪಂ ಸದಸ್ಯರಾದ ಅಮೃತ್ ರಾಜ್, ಡಿ.ಕೆ.ತಿಮ್ಮಪ್ಪ, ಕೂಡುಮಂಗಳೂರು ಗ್ರಾಪಂ ಸದಸ್ಯ ಭಾಸ್ಕರ್ ನಾಯಕ್, ಮುಳ್ಳು ಸೋಗೆ ಗ್ರಾಪಂ ಸದಸ್ಯರಾದ ದೊಡ್ಡಣ್ಣ, ರುದ್ರಾಂಬಿಕೆ, ಮಾಜಿ ಪಪಂ ಸದಸ್ಯರಾದ ಎನ್. ಎನ್.ಚರಣ್, ಪುಂಡಾರೀಕಾಕ್ಷ, ನಗರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಡಿ. ಶಿವಾಜಿರಾವ್, ತಾಲೂಕು ಯುವ ಘಟಕದ ಕಾರ್ಯಾಧ್ಯಕ್ಣ ಎಂ.ಡಿ.ಕೃಷ್ಣಪ್ಪ ಮುಖಂಡ ರಾದ ಜಿ.ಎಲ್.ನಾಗರಾಜು, ಪಿ.ಪಿ. ಸತ್ಯನಾರಾ ಯಣ್, ಭರತ್ ಮಾಚಯ್ಯ, ಶಿವಕುಮಾರ್, ಶಿವರಾಜ್, ಪಾಪು, ಅಣ್ಣಯ್ಯ ಇತರರಿದ್ದರು.

Leave a Reply

Your email address will not be published. Required fields are marked *