ನಾಲೆ ಒತ್ತುವರಿ ಮಾಡಿ ಅಮರಾವತಿ ಹೋಟೆಲ್ ನಿರ್ಮಾಣ
ಮಂಡ್ಯ

ನಾಲೆ ಒತ್ತುವರಿ ಮಾಡಿ ಅಮರಾವತಿ ಹೋಟೆಲ್ ನಿರ್ಮಾಣ

March 5, 2020

ಮಂಡ್ಯ,ಮಾ.4(ನಾಗಯ್ಯ)- ವಿಶ್ವೇಶ್ವ ರಯ್ಯ ನಾಲೆಯ ಜಾಗವನ್ನು ಅತೀಕ್ರಮಿಸಿ ಕೊಂಡು ಅಮರಾವತಿ ಹೋಟೆಲ್ ನಿರ್ಮಿಸಿ ಕೊಂಡಿರುವ ಕಾಂಗ್ರೆಸ್ ಮುಖಂಡ ಅಮ ರಾವತಿ ಚಂದ್ರಶೇಖರ್ ಮತ್ತು ಕುಟುಂ ಬಕ್ಕೆ ಒತ್ತುವರಿ ತೆರವಿಗಾಗಿ ನೀರಾವರಿ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಅಮರಾವತಿ ಚಂದ್ರಶೇಖರ್, ಮತ್ತು ಕುಟುಂಬದವರು, ಉಮ್ಮಡಹಳ್ಳಿ ಗ್ರಾಮದ ಸರ್ವೆ ನಂಬರ್ 129 ಮತ್ತು 130. ಬೂದನೂರು ಹಾಗೂ ಗುತ್ತಲು ಗ್ರಾಮಗಳ ವ್ಯಾಪ್ತಿಯಲ್ಲಿ, ಸುಮಾರು 60 ಎಕರೆ ವಿಸ್ತೀರ್ಣದಲ್ಲಿ ಐದು ಎಕರೆ ನಾಲೆ ಯನ್ನು, ಮುಚ್ಚಿ ಅತೀಕ್ರಮಣ ಮಾಡಿರುವ ಬಗ್ಗೆ, ಹಾಗೂ ನಾಲೆಯನ್ನು ಮುಚ್ಚಿ ಹೋಟೆಲ್ ಕಟ್ಟಡ ನಿರ್ಮಾಣ ಮಾಡಿರುವ ಬಗ್ಗೆ ಮಾಡಲಾಗಿದ್ದ ಆರೋಪದಂತೆ ಒತ್ತುವರಿ ಮಾಡಿರು ವುದು ಸಾಬೀತಾಗಿದ್ದು ಅಮರಾವತಿ ಚಂದ್ರಶೇಖರ್ ಮತ್ತು ಕುಟಂಬದವರಿಗೆ ನೀರಾವರಿ ಇಲಾಖೆ ಅಧಿಕಾರಿಗಳು ಒತ್ತುವರಿಯನ್ನು ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ವಿಶ್ವೇಶ್ವರಯ್ಯ ನಾಲೆ ಜಾಗದಲ್ಲಿ ನಾಲೆ ಮುಚ್ಚಿ ಜಾಗ ಅತಿಕ್ರಮಣ ಮಾಡಿರುವ ದೂರು ಮತ್ತು ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಉಮ್ಮಡಹಳ್ಳಿ ಗ್ರಾಮದ ಸರ್ವೆ ನಂಬರ್ 129 ಮತ್ತು 130. ಬೂದನೂರು ಹಾಗೂ ಗುತ್ತಲು ಗ್ರಾಮಗಳ ವ್ಯಾಪ್ತಿಯಲ್ಲಿ ಹಾದು ಹೋಗಿದ್ದ ವಿಸಿ ನಾಲಾ ಜಾಗವನ್ನು ಸರ್ವೆ ಮೂಲಕ ಗುರ್ತಿಸಿಕೊಂಡುವಂತೆ ತಹಸೀಲ್ದಾರ್ ಗೆ ನೀರಾವರಿ ಇಲಾಖಾ ಇಂಜಿನಿಯರ್ ಮನವಿ ಮಾಡಿದ್ದರು.

ಸಾರ್ವಜನಿಕ ದೂರು ಮತ್ತು ನಿರಾವರಿ ಇಲಾಖೆಯ ಮನವಿಯಂತೆಯೇ ಸರ್ವೆ ಕಾರ್ಯ ನಡೆಸಿದಾಗ ಈ ಜಾಗದಲ್ಲಿ ಒತ್ತುವರಿ, ಜೊತೆಗೆ ನಾಲೆಯನ್ನೂ ಮುಚ್ಚಲಾಗಿದ್ದು ಅಮರಾವತಿ ಹೋಟೆಲ್, ಹಾಗೂ ಲೇಔಟ್ ನಿರ್ಮಾಣ ಮಾಡಿರು ವುದು ಸಾಬೀತಾಗಿದೆ, ಈ ಹಿನ್ನೆಲೆಯಲ್ಲಿ ನೋಟೀಸ್ ಜಾರಿ ಮಾಡಲಾಗಿದೆ.

Translate »