ಕೇರಳದಿಂದ ತಂದು ಸಂಗ್ರಹಿಸಿದ್ದ ತ್ಯಾಜ್ಯ ಪಾಲಹಳ್ಳಿಯಲ್ಲಿ ವಶ: ಪ್ರಕರಣ ದಾಖಲು
ಮಂಡ್ಯ

ಕೇರಳದಿಂದ ತಂದು ಸಂಗ್ರಹಿಸಿದ್ದ ತ್ಯಾಜ್ಯ ಪಾಲಹಳ್ಳಿಯಲ್ಲಿ ವಶ: ಪ್ರಕರಣ ದಾಖಲು

March 5, 2020

ಶ್ರೀರಂಗಪಟ್ಟಣ,ಮಾ.4(ವಿನಯ್ ಕಾರೇಕುರ)- ತಾಲೂಕಿನ ಪಾಲಹಳ್ಳಿಯ ಗ್ರಾಮದಲ್ಲಿ ಕೇರಳದಿಂದ ತಂದಿದ್ದ ತ್ಯಾಜ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಪಾಲಹಳ್ಳಿ ಗ್ರಾಮದ ವೆಂಕಟೇಶ್ ಅವರ ಜಮೀನು ಮತ್ತು ಲೋಕೇಶ್ ಅವರ ಆಲೆಮನೆಯಲ್ಲಿ ಅಪಾರ ಪ್ರಮಾಣದ ತ್ಯಾಜ್ಯವನ್ನು ತಹಶೀಲ್ದಾರ್ ಎಂ.ವಿ.ರೂಪಾ ಅವರ ನಿರ್ದೇಶನದ ಮೇರೆಗೆ ಕಂದಾಯ ನಿರೀಕ್ಷಕ ಉಮೇಶ್ ಮಂಗಳವಾರ ಪತ್ತೆ ಮಾಡಿ ದಾಳಿ ಮಾಡಿದ್ದಾರೆ.

ವೆಂಕಟೇಶ್ ಅವರ ಜಮೀನಿನಲ್ಲಿ ಮೈಸೂ ರಿನ ರಿಜ್ವಾನ್ ಮತ್ತು ಲೋಕೇಶ್ ಅವರ ಆಲೆ ಮನೆಯಲ್ಲಿ ಸಲೀಂಖಾನ್ ಪ್ಲಾಸ್ಟಿಕ್ ಇತರ ತ್ಯಾಜ್ಯ ವನ್ನು ಸಂಗ್ರಹಿಸಿದ್ದರು ಎಂದು ತಿಳಿದು ಬಂದಿದೆ.

ರಬ್ಬರ್ ವಸ್ತುಗಳನ್ನು ಹಾಗೂ ಅಪಾರ ಪ್ರಮಾಣದಲ್ಲಿ ಚಪ್ಪಲಿಗೆ ಬಳಸುವ ವಸ್ತುಗಳನ್ನು ಸ್ಥಳೀಯ ಆಲೆಮನೆಗಳಿಗೆ ಮಾರಾಟ ಮಾಡುತ್ತಿರುವ ವ್ಯವಸ್ಥಿತ ಜಾಲ ಬೆಳಕಿಗೆ ಬಂದಿದೆ,

ಕೇರಳ ನೋಂದಣಿ ಸಂಖ್ಯೆಯ ಭರ್ತಿ ಲಾರಿ ಪಾಲಹಳ್ಳಿ ಕಡೆ ಹೋಗುತ್ತಿದ್ದುದನ್ನು ಕಂಡ ಕಂದಾಯ ನಿರೀಕ್ಷಕ ಉಮೇಶ್ ಪೆÇಲೀಸರ ಕಾರ್ಯಾಚರಣೆ ನಡೆಸಿ ತ್ಯಾಜ್ಯ ಸಂಗ್ರಹ ಘಟಕಗಳನ್ನು ಪತ್ತೆ ಮಾಡಿದ್ದಾರೆ.

ತಹಶಿಲ್ದಾರ್ ಎಂ.ವಿ.ರೂಪಾ ಮಾತ ನಾಡಿ, ಕೇರಳದಿಂದ ತ್ಯಾಜ್ಯ ತಂದು ಸಂಗ್ರಹಿದ್ದ ಎರಡು ಘಟಕಗಳನ್ನು ಪತ್ತೆ ಮಾಡಿದ್ದೇವೆ. ತ್ಯಾಜ್ಯ ಸಂಗ್ರಹಿಸಿದ್ದವರು ಮತ್ತು ಜಮೀನು ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಪ್ರಕರಣ ದಾಖಲಿಸುವಂತೆ ಪೆÇಲೀಸರಿಗೆ ಸೂಚಿಸ ಲಾಗಿದೆ. ಪರಿಸರ ಇಲಾಖೆಗೂ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು. ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕ ಉಮೇಶ್, ಎಲ್.ಪ್ರಭು, ದಫೇ ದಾರ್ ಸಿದ್ದೇಗೌಡ ಪಾಲ್ಗೊಂಡಿದ್ದರು.

Translate »