ಅಗಸನಪುರ ಗ್ರಾ.ಪಂ. ಮುಂದೆ ಡಿಪಿಐಎಂ ಪ್ರತಿಭಟನೆ
ಮಂಡ್ಯ

ಅಗಸನಪುರ ಗ್ರಾ.ಪಂ. ಮುಂದೆ ಡಿಪಿಐಎಂ ಪ್ರತಿಭಟನೆ

March 5, 2020

ಮಳವಳ್ಳಿ.ಮಾ.4-ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮಪಂಚಾಯಿತಿಯ ಬಳಿ ಇಲ್ಲಿನ ಕುಡಿಯುವ ನೀರು ಸೇರಿ ದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು. ತ್ವರಿತವಾಗಿ ಈ ಭಾಗದ ಅಗಸನಪುರ, ಕೋಡಿಪುರ, ಜೋಗಿಪುರ, ಅಣ್ಣಹಳ್ಳಿ, ಸಾಹಳ್ಳಿ, ಕೆಂಭೂತಗೆರೆ ಗ್ರಾಮಗಳಿಗೆ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತು ಇಓ ಸತೀಶ್‍ರವರಿಗೆ ಮನವಿ ಪತ್ರ ಸಲ್ಲಿಸಿದರು ಮನವಿ ಸ್ವೀಕರಿಸಿದ ಇಓ ಸತೀಶ್ ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ವಹಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ತಿಮ್ಮೇಗೌಡ, ಮಂಜುಳ, ದೇವಿ ಸೇರಿದಂತೆ ಅನೇಕರು ಇದ್ದರು.

Translate »