ನಲ್ಲಿಯಲ್ಲಿ ಕಲುಷಿತ ನೀರು, ಕೆಟ್ಟು ನಿಂತ ಬಸ್, ಪಾರ್ಕ್‍ನಲ್ಲಿ ಕುಡುಕರ ಹಾವಳಿ…
ಮೈಸೂರು

ನಲ್ಲಿಯಲ್ಲಿ ಕಲುಷಿತ ನೀರು, ಕೆಟ್ಟು ನಿಂತ ಬಸ್, ಪಾರ್ಕ್‍ನಲ್ಲಿ ಕುಡುಕರ ಹಾವಳಿ…

June 21, 2019

ಮೈಸೂರು, ಜೂ.20(ಆರ್‍ಕೆಬಿ)- ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಗುರು ವಾರ 42ನೇ ವಾರ್ಡ್‍ನ ಸರಸ್ವತಿಪುರಂನ ವಿವಿಧ ರಸ್ತೆಗಳಲ್ಲಿ ಪಾದಯಾತ್ರೆ ಕೈಗೊಂಡ ಸಂದರ್ಭದಲ್ಲಿ, ನಲ್ಲಿಗಳಲ್ಲಿ ಕಲುಷಿತ ನೀರು ಬರುತ್ತಿದೆ, ಕೆಟ್ಟು ನಿಂತಿರುವ ಬಸ್ ತೆರವುಗೊಳಿಸಿ, ಪಾರ್ಕಿಂಗ್‍ನಲ್ಲಿ ಕುಡುಕರ ಹಾವಳಿ ತಪ್ಪಿಸಿ ಇತ್ಯಾದಿ ಪ್ರಮುಖ ದೂರುಗಳು ಕೇಳಿ ಬಂದವು.

ಮಹಾನಗರಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸರಸ್ವತಿಪುರಂನ ಎಲ್ಲಾ ಮುಖ್ಯ ಹಾಗೂ ಅಡ್ಡರಸ್ತೆಗಳಿಗೂ ಪಾದಯಾತ್ರೆ ಯಲ್ಲಿ ತೆರಳಿದ ಶಾಸಕರು ಸಾರ್ವಜನಿಕರ ಅನೇಕ ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳುವಂತೆ ಅಧಿ ಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

ಸರಸ್ವತಿಪುರಂ 6ನೇ ಮುಖ್ಯ ರಸ್ತೆಯಲ್ಲಿ ಪ್ರತಿದಿನ ನಲ್ಲಿಗಳಲ್ಲಿ ಮಣ್ಣು ಮಿಶ್ರಿತ ಕಲುಷಿತ ನೀರು ಪೂರೈಕೆಯಾಗುತ್ತಿದೆ. ನಮಗೆ ಕಾವೇರಿ ನೀರು ಕೊಡಿ ಎಂದು ಅಲ್ಲಿನ ನಾಗರಿಕರು ಶಾಸಕರ ಗಮನಕ್ಕೆ ತಂದರು. ನೀರಿನ ಪೈಪ್ ಒಡೆದು ಕಲುಷಿತ ನೀರು ಸೇರಿ ಬರುತ್ತಿರ ಬಹುದು. ಈ ಬಗ್ಗೆ ತಕ್ಷಣ ಪರಿಶೀಲಿಸಿ ಶುದ್ಧ ನೀರು ಪೂರೈಸುವಂತೆ ಶಾಸಕ ಎಲ್.ನಾಗೇಂದ್ರ ಪಾಲಿಕೆ ಅಧಿಕಾರಿಗಳಿಗೆ ಆದೇಶಿಸಿದರು.

ಒಂದನೇ ಮುಖ್ಯ ರಸ್ತೆ, 2ನೇ ಕ್ರಾಸ್‍ನಲ್ಲಿ 15 ವರ್ಷದಿಂದ ಕೆಟ್ಟು ನಿಂತಿರುವ ಬಸ್‍ನಿಂದ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ನಿವಾಸಿಗಳು ಗಮನ ಸೆಳೆದರು. ಕೂಡಲೇ ಬಸ್ ತೆರವುಗೊಳಿಸಿ ನನಗೆ ಮಾಹಿತಿ ನೀಡುವಂತೆ ಶಾಸಕರು ಪೊಲೀಸ್ ಅಧಿಕಾರಿಗೆ ಸೂಚಿಸಿದರು.

ಒಂದನೇ ಮುಖ್ಯ ರಸ್ತೆಯಲ್ಲಿ ಫಾಸ್ಟ್ ಫುಡ್ ಗಾಡಿಗಳು ರಾತ್ರಿ 9 ಗಂಟೆಗೆ ಮುಚ್ಚಿಸಬೇಕು. ಈ ರಸ್ತೆಯ ಎರಡೂ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡಲಾಗುತ್ತಿದೆ. ಇದನ್ನು ಒಂದೇ ಬದಿಯಲ್ಲಿ ಪಾರ್ಕಿಂಗ್ ಮಾಡಲು ಕ್ರಮ ಕೈಗೊಳ್ಳು ವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.

4ನೇ ಮುಖ್ಯ ರಸ್ತೆ 5ನೇ ಅಡ್ಡ ರಸ್ತೆಯಲ್ಲಿ ಪಾರ್ಕ್‍ಗಳಲ್ಲಿ ರಾತ್ರಿ ಹೊತ್ತು ಕುಡುಕರ ಹಾವಳಿ ಕುರಿತು ಬಂದ ದೂರಿಗೆ ಶಾಸಕರು ಈ ಸಂಬಂಧ ರಾತ್ರಿ ಹೊತ್ತು ಪಾರ್ಕ್ ಬಂದ್ ಮಾಡಿಸಿ, ಬೀಟ್ ಹಾಕುವಂತೆ ಪೊಲೀಸರಿಗೆ ತಾಕೀತು ಮಾಡಿದರು. 16ನೇ ಮುಖ್ಯ ರಸ್ತೆ 3ನೇ ಅಡ್ಡ ರಸ್ತೆ ತಿರುವಿನಲ್ಲಿ ಹಲವು ವರ್ಷ ಗಳಿಂದ ಬೋರ್‍ವೆಲ್‍ಗೆಂದು ಅಳವಡಿಸಿದ್ದ ವಿದ್ಯುತ್ ಬೋರ್ಡ್ ಪ್ರಯೋಜನವಿಲ್ಲದೆ ತುಕ್ಕು ಹಿಡಿದಿರುವುದನ್ನು ನೋಡಿದ ಶಾಸಕರು, ಬಳಕೆ ಯಿಲ್ಲದಿರುವ ಇದನ್ನು ಶೀಘ್ರವೇ ತೆರವುಗೊಳಿಸು ವಂತೆ ಕೆಇಬಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಾದಯಾತ್ರೆ ಸಂದರ್ಭದಲ್ಲಿ ಶಾಸಕರೊಂದಿಗೆ ಪಾಲಿಕೆ ಸದಸ್ಯರಾದ ವೇದಾ ವತಿ, ಎಂ.ಶಿವ ಕುಮಾರ್, ಪಾಲಿಕೆ ಹೆಚ್ಚುವರಿ ಆಯುಕ್ತ ಶಿವಾ ನಂದಮೂರ್ತಿ, ವಾಣಿವಿಲಾಸ ನೀರು ಸರಬ ರಾಜು ಕೇಂದ್ರದ ಇಂಜಿನಿಯರ್ ಹರೀಶ್, ಎಇಇ ಹರ್ಷಿತಾ, ಯುಜಿಡಿ ಎಇಇ ರಂಜಿತ್, ಪಾಲಿಕೆ ತೋಟಗಾರಿಕೆ ಅಧಿಕಾರಿ ಸದಾಶಿವ ಚಟ್ನಿ, ಸಹಾಯಕ ಅಧಿಕಾರಿ ಪ್ರೀತಿ, ವಾರ್ಡ್ ಇಂಜಿ ನಿಯರ್ ಶ್ರೀಕಾಂತ್, ಪಾಲಿಕೆ ವಿದ್ಯುತ್ ಜೆಇ ನಿವೇದಿತಾ, ಪಾಲಿಕೆ ಇಂಜಿನಿಯರ್ ವೆಂಕಟೇಶ್, ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ದೇವರಾಜ್, ಮುಖಂಡರಾದ ಗೋಪಾಲ್, ಶಿವಕುಮಾರ್, ಶಿವಣ್ಣ, ಬಲರಾಂ, ಕೃಷ್ಣಪ್ಪ, ದಿನೇಶ್‍ಗೌಡ ಇನ್ನಿತರರು ಉಪಸ್ಥಿತರಿದ್ದರು.

Translate »