ಕೊಡಗಿನ ಯುವತಿ ಮೈಸೂರಲ್ಲಿ ನಾಪತ್ತೆ
ಮೈಸೂರು

ಕೊಡಗಿನ ಯುವತಿ ಮೈಸೂರಲ್ಲಿ ನಾಪತ್ತೆ

June 21, 2019

ಮೈಸೂರು, ಜೂ.20- ಕೊಡಗಿನಿಂದ ಮದುವೆ ಕಾರ್ಯದಲ್ಲಿ ಭಾಗವಹಿಸಲು ಮೈಸೂರಿಗೆ ಬಂದಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ಮೈಸೂರಿನ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗಿನ ಪೊನ್ನಂ ಪೇಟೆ ನಿವಾಸಿ ಶಿವಲಿಂಗೇ ಗೌಡ ಎಂಬುವರ ಪುತ್ರಿ ಬಿ.ಎಸ್.ದಿವ್ಯಾ (23) ನಾಪತ್ತೆಯಾದವರಾಗಿದ್ದು, ಇವರು ತಮ್ಮ ದೊಡ್ಡಪ್ಪ ಶಂಕರೇಗೌಡ ಅವರ ಮಗನ ಮದುವೆಯಲ್ಲಿ ಭಾಗವಹಿಸಲು ಕುಟುಂಬ ಸಮೇತರಾಗಿ ಮೈಸೂರಿನ ಹೆಬ್ಬಾಳ್‍ನ ಲಕ್ಷ್ಮಿ ಕಾಂತ್ ದೇವಸ್ಥಾನಕ್ಕೆ ಜೂ.19ರಂದು ಬಂದಿದ್ದು, ದೇವ ಸ್ಥಾನದಿಂದ ಯಾರಿಗೂ ಹೇಳದೆ ಹೊರ ಹೋದ ವರು ಈವರೆಗೆ ಬಂದಿಲ್ಲ ಎಂದು ಶಿವಲಿಂಗೇ ಗೌಡ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿ ದ್ದಾರೆ. ಈಕೆಯ ಬಗ್ಗೆ ಮಾಹಿತಿ ಇರುವವರು ಹೆಬ್ಬಾಳ್ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2418318 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 2418339ನ್ನು ಸಂಪರ್ಕಿ ಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.

Translate »