ರಸ್ತೆ ಅಗಲೀಕರಣಕ್ಕೆ ಸಹಕರಿಸಿ:ಎ.ಟಿ.ರಾಮಸ್ವಾಮಿ
ಹಾಸನ

ರಸ್ತೆ ಅಗಲೀಕರಣಕ್ಕೆ ಸಹಕರಿಸಿ:ಎ.ಟಿ.ರಾಮಸ್ವಾಮಿ

June 24, 2018

ರಾಮನಾಥಪುರ: ಕ್ಷೇತ್ರದ ಅಭಿವೃದ್ಧಿ ಹಾಗೂ ಭವಿಷ್ಯದ ಹಿತದೃಷ್ಟಿ ಯಿಂದ ಕೊಡಗು ಜಿಲ್ಲಾ ಗಡಿ ಬಾಣಾವರ ದಿಂದ ಹಾಸನ ಜಿಲ್ಲಾ ಗಡಿ ಕೇರಳಾಪುರ ದವರೆಗೆ 31 ಕಿ.ಮೀ. ದೂರದ ರಸ್ತೆ ಕಾಮಗಾರಿ ಅವಶ್ಯವಾಗಿದ್ದು, ಈ ಭಾಗದ ಗ್ರಾಮಸ್ಥರು ಸಹಕರಿಸಬೇಕು ಎಂದು ಶಾಸಕ ಡಾ. ಎ.ಟಿ.ರಾಮಸ್ವಾಮಿ ಮನವಿ ಮಾಡಿದರು.

ರಾಮನಾಥಪುರದ ಬಸವೇಶ್ವರ ವೃತ್ತ ದಲ್ಲಿ ರಸ್ತೆ ಅಗಲೀಕರಣದ ವಿಚಾರವಾಗಿ ಸಾರ್ವಜನಿಕರು ಹಾಗೂ ಕಾರ್ಯಕರ್ತರ ಜೊತೆ ಮಾತನಾಡಿದ ಅವರು, ರಸ್ತೆ ಅಗಲೀ ಕರಣಕ್ಕೆ ನೂರಾರು ಎಕರೆ ಜಮೀನು ಮತ್ತು 80 ಮನೆಗಳು ತೆರವಾಗಲಿದ್ದು, ಗ್ರಾಮಸ್ಥರು ಸಹಕರಿಸಬೇಕು ಎಂದು ಕೋರಿದರು.

ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಹಾಸನ ಜಿಲ್ಲಾ ಗಡಿ, ಕೇರಳಾಪುರ ದಿಂದ ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲೂಕಿನ ಬಾಣಾವರದವರೆಗೆ ಪ್ರಮುಖ ಮುಖ್ಯರಸ್ತೆ ಅಗಲೀಕರಣ ವಾಗಲಿದೆ. ಮೈಸೂರು ಜಿಲ್ಲೆ ಹಾಗೂ ಹಾಸನ ಜಿಲ್ಲಾ ಗಡಿ ಕೇರಳಾಪುರದಿಂದ ಹೊನ್ನೆನಹಳ್ಳಿ, ಕಾಳೇನಹಳ್ಳಿ, ಬಸವಾ ಪಟ್ಟಣ, ಮೂಲೆ ಹೊಸಹಳ್ಳಿ, ಶಿರದನ ಹಳ್ಳಿ, ರಾಮನಾಥ ಪುರ, ಕೊಣನೂರು, ಸಿದ್ದಾಪುರ ಗೇಟ್, ಮರಿಯನಗರ, ಬೆಟ್ಟಗಳಲೆ, ಬಾಣಾವರ, ಅರಕಲಗೂಡು ತಾಲೂಕು, ಕೊಡಗು ಗಡಿವರೆಗೆ ರಸ್ತೆ ಅಗಲೀಕರಣವಾಗಲಿದ್ದು, ಎಲ್ಲರೂ ಸಹ ಕರಿಸಬೇಕು ಎಂದರು.

ಮೈಸೂರು ಜಿಲ್ಲಾ ಗಡಿಯಿಂದ ಅರಕಲ ಗೂಡು ತಾಲೂಕಿನ ಗಡಿ ಕೇರಳಾಪುರದ ಅಂಚಿನಿಂದ 16 ಮೀ. ರಸ್ತೆ ಅಗಲೀಕರಣ ಗೊಳ್ಳಲಿದ್ದು, ರಸ್ತೆಯ ಮಧ್ಯಭಾಗದಿಂದ ಎರಡು ಕಡೆಗೆ 8 ಮೀ.ನಂತೆ ರಸ್ತೆ ವಿಸ್ತ ರಣೆಗೊಳ್ಳಲಿದೆ. ಕೇರಳಾಪುರ ಗ್ರಾಮದ ಒಳಭಾಗದಲ್ಲಿ ಎರಡು ವೃತ್ತಗಳನ್ನು ನಿರ್ಮಾಣವಾಗಲಿದೆ. ಗ್ರಾಮದ ಹೊರ ಭಾಗದಲ್ಲಿ 26 ಮೀ. ರಸ್ತೆ ಅಗಲೀಕರಣ ಗೊಳ್ಳಲಿದೆ. ಇದೇ ವೇಳೆ ಕೆಲವು ಕಡೆಗಳಲ್ಲಿ ತಿರುವು ರಸ್ತೆಗಳನ್ನು ನೇರಮಾಡಲಾಗು ವುದು. ಮನೆ ಕಳೆದುಕೊಳ್ಳುವ ಸಂತ್ರಸ್ಥರಿಗೆ 1.2 ಅನುಪಾತದಲ್ಲಿ ಪರಿಹಾರ ನೀಡಲಾ ಗುವುದು. ಅಲ್ಲದೆ ರಸ್ತೆ ಅಗಲೀಕರಣಕ್ಕೆ ಒಳಪಡುವ ಕೃಷಿ ಭೂಮಿ, ತೆಂಗಿನಮರ, ಅಡಿಕೆಮರ, ಪಂಪ್‍ಸೆಟ್‍ಗಳಿಗೂ ಸಹ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ರಸ್ತೆಯು 166 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಯಾಗಿದ್ದು, ಪ್ರತಿ ಕಿ.ಮೀ.ಗೆ 4.5 ಕೋಟಿ ರೂ.ನಂತೆ 745 ಕೋಟಿ ರೂ. ಬಿಡುಗಡೆಯಾಗಿದೆ. ಮಾಗಡಿಯಿಂದ ಅರಕಲಗೂಡು-ಸೋಮವಾರಪೇಟೆ ತಾಲೂಕಿನ ಗಡಿ ಅಂಚಿನವರೆಗೆ ನಿರ್ಮಾಣ ವಾಗಲಿದೆ. ಅರಕಲಗೂಡು ತಾಲೂಕಿನಲ್ಲಿ 31-6 ಕಿ.ಮೀ ರಸ್ತೆ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.

ಕೇರಳಾಪುರ, ಮೂಲೆಹೊಸಹಳ್ಳಿ, ರಾಮನಾಥಪುರ, ಕೊಣನೂರು ಗ್ರಾಮ ಗಳಲ್ಲಿ 20 ಮೀ.ರಸ್ತೆ ಗ್ರಾಮದ ಒಳಭಾಗ ದಲ್ಲಿ ನಿರ್ಮಾಣವಾಗಲಿದೆ. ಬಸವಾಪಟ್ಟಣ ಗ್ರಾಮದಲ್ಲಿ ರಸ್ತೆ ಅಗಲೀಕರಣದಿಂದ 74 ಮನೆಗಳನ್ನು ಭಾಗಶಃ ತೆರವಾಗಲಿದೆ. ಶೇ.75 ಭಾಗಮನೆ ಕಳೆದು ಕೊಂಡವರಿಗೆ 1.2 ಅಡಿ ಲೆಕ್ಕದಲ್ಲಿ ಸಂಪೂರ್ಣ ಪರಿಹಾರ ನೀಡಲಾಗುವುದು. ಶೇ.25 ಭಾಗಶಃ ಮನೆ ಕಳೆದುಕೊಂಡವರಿಗೆ ಅಡಿ ಲೆಕ್ಕದಲ್ಲಿ ಪರಿ ಹಾರ ನೀಡಲಾಗುವುದು. ಬಸವಾಪಟ್ಟಣ ಗ್ರಾಮದಲ್ಲಿ ಒಂದು ಸಣ್ಣವೃತ್ತ, ಕೇರಳಾ ಪುರದಲ್ಲಿ 2 ವೃತ್ತ, ರಾಮನಾಥಪುರ ಐಬಿ ವೃತ್ತ, ಬಸವೇಶ್ವರ ವೃತ್ತದಲ್ಲಿ ವೃತ್ತಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಎ.ಟಿ.ರಾಮಸ್ವಾಮಿಯವರು ತಿಳಿಸಿದರು.

ತಾಲೂಕು ಹಿಂದುಳಿದ ವರ್ಗದ ಅಧ್ಯಕ್ಷ ಸಾದಿಕ್, ವೀರಶೈವ ಮಹಾ ಸಭಾ ತಾಲೂಕು ಅಧ್ಯಕ್ಷ ರವಿಕುಮಾರ್, ತಾಪಂ ಮಾಜಿ ಸದಸ್ಯ ಬಿ.ಸಿ.ವೀರೇಶ್, ತಾಪಂ ಮಾಜಿ ಅಧ್ಯಕ್ಷ ಬಸವಪಟ್ಟಣ ಬಿ.ಅರ್. ಮಧುಕರ್, ಮಾಜಿ ಸದಸ್ಯ ಗಂಗೂರು ಸಂಜೀವೇಗೌಡ, ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ತಿಮ್ಮರಾಜ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಸವಾಪಟ್ಟಣ ಜೆ.ನಾಗರಾಜು, ಮುಖಂಡರಾದ ಎಂ.ಹೆಚ್.ಕೃಷ್ಣ ಮೂರ್ತಿ, ಉಪಾರಿಕೇಗೌಡ ವೆಂಕಟೇಶ್, ಉದ್ಯಮಿ ಚನ್ನೇಗೌಡ, ಬಸವಪಟ್ಟಣ ಕುಮಾರೇಗೌಡ, ನಂದಕುಮಾರ್, ದೇವ ರಾಜ್, ರಮೇಶ್, ಮುಂತಾದವರಿದ್ದರು. ಇದೇ ವೇಳೇ ಸ್ಥಳೀಯರು ಶಾಸಕ ರೊಂದಿಗೆ ಚರ್ಚಿಸಿ ತಮ್ಮ ಅನುಮಾನ ಗಳನ್ನು ಪರಿಹರಿಸಿಕೊಂಡರು.

Translate »