ಕೊರೊನಾ: ಮೈಸೂರಲ್ಲೂ ತೀವ್ರ ಕಟ್ಟೆಚ್ಚರ
ಮೈಸೂರು

ಕೊರೊನಾ: ಮೈಸೂರಲ್ಲೂ ತೀವ್ರ ಕಟ್ಟೆಚ್ಚರ

March 4, 2020

ಸಾರ್ವಜನಿಕರಿಗೆ ಆತಂಕ ಬೇಡ: ಜಿಲ್ಲಾ ವೈದ್ಯಾಧಿಕಾರಿ ಡಾ.ಆರ್.ವೆಂಕಟೇಶ್
ಮೈಸೂರು, ಮಾ.3(ಎಸ್‍ಬಿಡಿ)- ಕೊರೊನಾ ವೈರಸ್ ಭೀತಿ ಹಿನ್ನೆಲೆ ಮೈಸೂರಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮ ಗಳನ್ನು ಕೈಗೊಂಡಿದ್ದು, ಕೆಮ್ಮು, ಜ್ವರದಿಂದ ಬಳಲುತ್ತಿರುವವರನ್ನು ಉಳಿದ ರೋಗಿ ಗಳಿಗಿಂತ ಮುಂಚಿತವಾಗಿ ತಪಾಸಣೆಗೆ ಒಳ ಪಡಿಸಲಾಗುತ್ತಿದೆ. ಇದರಿಂದ ಸೋಂಕಿತರು ಇದ್ದಲ್ಲಿ ಅವರ ಪತ್ತೆಗೆ ಸಹಾಯವಾಗು ತ್ತದೆ. ಕೊರೊನಾ ಲಕ್ಷಣಗಳು ಕಂಡುಬಂದ ವರ ರಕ್ತ ಮಾದರಿ ಪಡೆದು ಪರೀಕ್ಷೆಗಾಗಿ ಬೆಂಗಳೂರು ವೈದ್ಯಕೀಯ ಕಾಲೇಜಿಗೆ ರವಾ ನಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಪರಿಶೀಲನೆ ಮಾಡುವುದು ಹಾಗೂ ಮೈಸೂರು ಅರಮನೆ, ಮೃಗಾಲಯ ಸೇರಿ ಪ್ರವಾಸಿ ತಾಣಗಳಲ್ಲಿ ಭಿತ್ತಿ ಪತ್ರ, ಫ್ಲೆಕ್ಸ್‍ಗಳ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲು ಜಿಲ್ಲಾ ವಿಶೇಷ ತಂಡ ಮುಂದಾ ಗಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಆರ್. ವೆಂಕಟೇಶ್ ತಿಳಿಸಿದ್ದಾರೆ.

ಪ್ರತ್ಯೇಕ ವಾರ್ಡ್: ಕೆ.ಆರ್.ಆಸ್ಪತ್ರೆಯಲ್ಲಿ ಕೊರಾನ ವೈರಸ್ ತೀವ್ರ ನಿಗಾ ಘಟಕ ಸಜ್ಜು ಗೊಳಿಸಲಾಗಿದೆ. ಹಳೆಯ ಜಯ ದೇವ ಆಸ್ಪತ್ರೆ ಮೇಲ್ಮಹಡಿ ಕೊಠಡಿಯಲ್ಲಿ 10 ಹಾಸಿಗೆಗಳ ವಿಶೇಷ ವಾರ್ಡ್ ನಿರ್ಮಿಸಲಾ ಗಿದೆ. ಈವರೆಗೆ ಕೊರೊನಾ ಪ್ರಕರಣ ಪತ್ತೆ ಯಾಗಿಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆಗೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಅರಮನೆಯಲ್ಲಿ ತೀವ್ರ ನಿಗಾ: ವಿದೇಶಿ ಪ್ರವಾಸಿಗರು ಹಾಗೂ ಕೊರೊನಾ ಪತ್ತೆ ಯಾಗಿರುವ ನೆರೆ ರಾಜ್ಯದ ಪ್ರವಾಸಿಗರು ಅರಮನೆಗೆ ಹೆಚ್ಚು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಇಲ್ಲಿ ಹೆಚ್ಚಿನ ನಿಗಾ ವಹಿಸಲಾ ಗಿದೆ. ಸೋಂಕು ತಡೆಯುವ ಮಾಸ್ಕ್ ಗಳನ್ನು ಸಿದ್ಧವಿಟ್ಟುಕೊಳ್ಳಲಾಗಿದೆ. ಕೊರೊನಾ ಗುಣ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡವರಿಗೆ ತಕ್ಷಣಕ್ಕೆ ಮಾಸ್ಕ್ ನೀಡಿ, ಮುಂದಿನ ತಪಾಸಣೆಗೆ ಒಳಪಡಿ ಸಲು ಸಿಬ್ಬಂದಿ ಸಜ್ಜಾಗಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಅರಮನೆ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕೆಮ್ಮು, ಜ್ವರ, ಅಸ್ತಮಾ ಇರುವ ಪ್ರವಾಸಿಗರಿಗೆ ಮುಂಜಾಗ್ರತೆಯಾಗಿ ಮಾಸ್ಕ್ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯೇ, `ಎಲ್ಲರಿಗೂ ಮಾಸ್ಕ್ ಧರಿಸುವಂತೆ ಹೇಳಲಾಗದು’ ಎಂದಿದೆ. ಹಾಗಾಗಿ ಸದ್ಯ ಕೆಮ್ಮು, ಜ್ವರ ಇದ್ದವರಿಗೆ ಮಾತ್ರ ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಲಕ್ಷಣಗಳು ಗೋಚರಿಸಿದರೆ ಮೊದಲು ಅರಮನೆ ಆವರಣದ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗೆ ಕೆ.ಆರ್.ಆಸ್ಪತ್ರೆಗೆ ಕಳುಹಿಸ ಲಾಗುವುದು ಎಂದು ತಿಳಿಸಿದ್ದಾರೆ.

Translate »