ಕೊರೊನಾ ವೈರಸ್ ಪ್ರಭಾವ: ಕೃಷಿ ಉತ್ಪನ್ನಗಳ ಬೆಲೆ ಕುಸಿತ: ರೈತರು ಕಂಗಾಲು
ಮೈಸೂರು

ಕೊರೊನಾ ವೈರಸ್ ಪ್ರಭಾವ: ಕೃಷಿ ಉತ್ಪನ್ನಗಳ ಬೆಲೆ ಕುಸಿತ: ರೈತರು ಕಂಗಾಲು

March 22, 2020

ಮೈಸೂರು, ಮಾ. 21- ದೇಶಾದ್ಯಂತ ಕೊರೊನಾ ವೈರಸ್ ಪ್ರಭಾವದಿಂದ ಕೃಷಿ ಉತ್ಪನ್ನ ಗಳು, ತರಕಾರಿ, ಹಣ್ಣುಗಳ ಬೆಲೆಯಲ್ಲಿ ಇಳಿ ಮುಖವಾಗಿ ಮಾರುಕಟ್ಟೆಯಲ್ಲಿ ಖರೀದಿದಾರರು ಕಡಿಮೆಯಾಗಿ ಬೇಡಿಕೆ ಕುಸಿಯುತ್ತಿದೆ.

ಮೆಕ್ಕೆಜೋಳ ಬೆಳೆದ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಕುಕ್ಕುಟ ಉದ್ಯಮದ ಕೋಳಿ ಸಾಕಾ ಣಿಕೆಕಾರರು ಖರೀದಿ ನಿಲ್ಲಿಸಿರುವ ಕಾರಣ ಕ್ವಿಂಟಾಲ್‍ಗೆ 2200 ರೂ. ಬೆಲೆಯಿದ್ದ ಮೆಕ್ಕೆಜೋಳದ ಬೆಲೆ 1 ಸಾವಿರ ರೂಗಳಿಗೆ ಇಳಿಮುಖವಾಗಿದೆ. ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್‍ಗೆ 1760 ರೂ.ಗೆ ಸರ್ಕಾರ ನಿಗದಿ ಮಾಡಲಾಗಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ರೈತನ ರಕ್ಷಣೆಗೆ ರಾಜ್ಯ ಸರ್ಕಾರ ಧಾವಿಸಿ ಖರೀದಿ ಕೇಂದ್ರ ತೆರೆದು ಸರ್ಕಾರವೇ ಖರೀದಿಸುವ ತುರ್ತುಕ್ರಮಕ್ಕೆ ಮುಂದಾಗಬೇಕು.

ತರಕಾರಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಯನ್ನು ನಿಗದಿ ಮಾಡಿ ಎಪಿಎಂಸಿಗಳ ಮೂಲಕ ಹಾಗೂ ಹಾಪ್‍ಕಾಮ್ಸ್ ಮೂಲಕ ಸರ್ಕಾರ ಖರೀದಿ ಮಾಡುವಂತಹ ಕಾರ್ಯ ಕೈಗೆತ್ತಿಕೊಳ್ಳಬೇಕು. ಹೀಗೆ ಖರೀದಿ ಮಾಡಿದ ತರಕಾರಿಗಳನ್ನು ಜೈಲು, ಆಸ್ಪತ್ರೆ, ವಿದ್ಯಾರ್ಥಿ ನಿಲಯಗಳು, ಅಂಗನವಾಡಿ ಕೇಂದ್ರಗಳು ಮತ್ತಿತರ ಸರ್ಕಾರಿ ಸಂಸ್ಥೆಗಳಿಗೆ ಸರಬರಾಜು ಮಾಡು ವಂತಾಗಬೇಕು. ಇದರಿಂದ ಸರ್ಕಾರಕ್ಕೆ ಯಾವುದೇ ನಷ್ಟವಾಗುವುದಿಲ್ಲ. ರೈತನನ್ನು ಅಪಾಯದಿಂದ ರಕ್ಷಣೆ ಮಾಡಿದಂತಾಗುತ್ತದೆ. ಅನಿವಾರ್ಯವಾದರೆ ರೈತ ಉತ್ಪಾದಕ ಕಂಪನಿಗಳ ಸಹಕಾರದೊಂದಿಗೆ ಈ ಕಾರ್ಯಕ್ಕೆ ಮುಂದಾಗಬೇಕು. ಈ ಕಾರ್ಯಕ್ರಮವನ್ನು ಜಾರಿಗೆ ತರುವ ಎಫ್‍ಪಿಸಿಗಳಿಗೆ ಬಡ್ಡಿರಹಿತವಾಗಿ ಬ್ಯಾಂಕ್ ಮೂಲಕ ಸಾಲ ಕೊಡಿಸುವ ಯೋಜನೆ ಜಾರಿಯಾಗಿ ಈ ಯೋಜನೆ ಯಶಸ್ವಿಯಾಗಲು ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ನೀತಿ ಅನುಸರಿಸಿದರೆ ರೈತರ ಸಂಕಷ್ಟದ ಸರಮಾಲೆಯಲ್ಲಿ ಸಿಲುಕಿ ಆತ್ಮಹತ್ಯೆಯ ಹಾದಿ ಹಿಡಿಯುವ ಸಂಭವವಿದೆ ಎಂಬುದನ್ನು ತಾವು ಗಂಭೀರವಾಗಿ ಅರಿಯಬೇಕು.

ರಾಜ್ಯಾದ್ಯಂತ ಭತ್ತಖರೀದಿ ಕೇಂದ್ರಗಳನ್ನು ತೆರೆದು ಈ ಖರೀದಿ ಕೇಂದ್ರಗಳ ಮೂಲಕ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಅಂದಾಜು 37 ಸಾವಿರ ಮೆಟ್ರಿಕ್ ಟನ್ ಭತ್ತವನ್ನು ಸರ್ಕಾರ ಖರೀದಿಸಿರುತ್ತದೆ. ಈ ರೈತರಿಗೆ ಕನಿಷ್ಠ ಬೆಂಬಲ ಬೆಲೆಯಂತೆ ಕ್ವಿಂಟಾಲ್‍ಗೆ 1835 ಹಾಗೂ ಹೆಚ್ಚುವರಿ ಪ್ರೋತ್ಸಾಹಧನ 200 ರೂ ಗಳನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರೂ ಸಹ ಹೆಚ್ಚುವರಿ ಪ್ರೋತ್ಸಾಹಧನ 200 ರೂ ನೀಡುವ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಕಳೆದ ಜನವರಿ ತಿಂಗಳಿಂದಲೂ ಯಾವುದೇ ರೈತರಿಗೂ ಭತ್ತದ ಹಣ ಸರ್ಕಾರದಿಂದ ಪಾವತಿಯಾಗಿರುವುದಿಲ್ಲ. ಭತ್ತ ಬೆಳೆದ ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಭತ್ತ ಬೆಳೆಯಲು ಸಾಲ ಮಾಡಿದ್ದ ಹಣಕ್ಕೆ ಬಡ್ಡಿ ಏರಿಕೆಯಾಗುತ್ತಿದೆ. ರೈತನಿಗೆ ಇದು ಹೊರೆಯಾಗುತ್ತಿದೆ. ಆದ್ದರಿಂದ ಕೂಡಲೇ ರೈತ ರಿಗೆ ಹಣ ಪಾವತಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.

Translate »