ಮಹತ್ವದ ಚಂದ್ರಯಾನಕ್ಕೆ ಕ್ಷಣಗಣನೆ
ಮೈಸೂರು

ಮಹತ್ವದ ಚಂದ್ರಯಾನಕ್ಕೆ ಕ್ಷಣಗಣನೆ

July 15, 2019

ಬೆಂಗಳೂರು,ಜು.14- ಭಾರತೀಯ ವಿಜ್ಞಾನಿಗಳ ಮಹತ್ಕಾರ್ಯಕ್ಕೆ ವೇದಿಕೆ ( chandrayaan ) ಸಿದ್ಧವಾಗಿದ್ದು ಕ್ಷಣಗಣನೆ ಆರಂಭವಾಗಿದೆ. ತಡರಾತ್ರಿ 3 ಗಂಟೆ ಸುಮಾರಿಗೆ ಚಂದ್ರಯಾನ-2 ಆರಂಭವಾಗಲಿದೆ. ಇದು ಭಾರ ತದ ಎರಡನೇ ಚಂದ್ರಯಾನವಾಗಿದ್ದು ಭಾರೀ ಕುತೂಹಲ ಮೂಡಿಸಿದೆ. ಈ ಬಾರಿ ಚಂದ್ರಯಾನ-2 ಗಗನನೌಕೆ ಈವ ರೆಗೆ ಯಾರೂ ಪಯಣಿಸದ ಚಂದ್ರದ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. 3840 ಕೆಜಿ ತೂಕದ ಈ ಗಗನನೌಕೆಯನ್ನು ಹೊತ್ತ gslv-mk3 ರಾಕೆಟ್ ಉಡಾ ವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ ಸುಸೂತ್ರವಾಗಿ ಕೈಗೂಡಿದರೆ ಭಾರ ತವು ಈ ಸಾಧನೆ
ಮಾಡಿರುವ ಅಮೆರಿಕ, ರಷ್ಯಾ ಮತ್ತು ಚೀನಾ ಸಾಲಿನಲ್ಲಿ ನಿಲ್ಲಲಿದೆ. ಭಾರತೀಯ ಬಾಹ್ಯಾಕಾಶ ಕೇಂದ್ರಿ ಇಸ್ರೋದ ಮಹತ್ವಾಕಾಂಕ್ಷೆಯ ಈ ಗಗನನೌಕೆ 3.84 ಲಕ್ಷ ಕಿಲೋಮೀಟರ್ ದೂರ ಸಾಗಬೇಕಿದ್ದು ಇದಕ್ಕಾಗಿ 2 ತಿಂಗಳು ತೆಗೆದುಕೊಳ್ಳಲಿದೆ. ನೌಕೆಯು ಸೆಪ್ಟೆಂಬರ್ ಮೊದಲ ವಾರದಲ್ಲಿ ಚಂದ್ರನ ಮೇಲೆ ಇಳಿಯುವ ನಿರೀಕ್ಷೆ ಇದೆ. ಚಂದ್ರನ ಮೇಲ್ಮೈನ ವೈಶಿಷ್ಟ್ಯ, ನೀರು ಇರುವ ಸಾಧ್ಯತೆ, ಯಾವೆಲ್ಲ ಖನಿಜಗಳಿವೆ ಎಂಬುದನ್ನೆಲ್ಲಾ ಈ ನೌಕೆ ಶೋಧಿಸಲಿದೆ. 980 ಕೋಟಿ ರೂ ವೆಚ್ಚದ ಈ ಯಾನಕ್ಕೆ ಬಳಸಲಾಗುತ್ತಿರುವ ಗಗನನೌಕೆಯಲ್ಲಿ ತಲಾ 1 ಲ್ಯಾಂಡರ್ ಹಾಗೂ ರೋವರ್ ಇವೆ. ಚಂದ್ರ ಮೇಲ್ಮೈ ಅನುಸಂಧಾನಕ್ಕೆ ವಿಕ್ರಂ ಲ್ಯಾಂಡರ್ ಬಳಕೆಯಾದರೆ, ಚಂದ್ರ ಸುತ್ತಲಿನ ಪರಿಸರವನ್ನು ಪ್ರಗ್ಯಾನ್ ರೋವರ್ ಶೋಧಿಸಲಿದೆ.

Translate »