‘ರಣಂ’ ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟ; ಮಹಿಳೆ, ಮಗು ಸಾವು
ಮೈಸೂರು

‘ರಣಂ’ ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟ; ಮಹಿಳೆ, ಮಗು ಸಾವು

March 30, 2019

ಬೆಂಗಳೂರು: ಚಿರಂಜೀವಿ ಸರ್ಜಾ ಅಭಿನಯದ ‘ರಣಂ’ ಸಿನಿಮಾ ಚಿತ್ರೀಕರಣ ವೇಳೆ ಸಿಲಿಂಡರ್ ಸ್ಫೋಟಗೊಂಡು ಶೂಟಿಂಗ್ ವೀಕ್ಷಿಸುತ್ತಿದ್ದ ತಾಯಿ, ಮಗು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದಿದೆ.

ನಗರದ ಬಾಗಲೂರಿನ ಶೆಲ್ ಕಂಪನಿ ಬಳಿ ರೋಡ್ ಬ್ಲಾಕ್ ಮಾಡಿ ಚಿತ್ರದ ಫೈಟ್ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ಬಾಗಲೂರಿನಿಂದ ಸೂಲಿಬೆಲೆಗೆ ತೆರಳುತ್ತಿದ್ದ 28 ವರ್ಷದ ಸುಬೇನಾ ಹಾಗೂ 8 ವರ್ಷದ ಅಹೀರಾ ಇಬ್ಬರು ರಸ್ತೆ ಬದಿ ನಿಂತು ಶೂಟಿಂಗ್ ನೋಡುತ್ತಿದ್ದರು. ಈ ವೇಳೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ತಾಯಿ, ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮಹಿಳೆ ಮತ್ತು ಮಗುವಿನ ದೇಹಗಳು ಛಿದ್ರವಾಗಿವೆ ಎಂದು ತಿಳಿದುಬಂದಿದೆ.

Translate »