ಮಾಹಿತಿ ತಂತ್ರಜ್ಞಾನ ಪ್ರಸ್ತುತ ಅವಶ್ಯ
ಮೈಸೂರು

ಮಾಹಿತಿ ತಂತ್ರಜ್ಞಾನ ಪ್ರಸ್ತುತ ಅವಶ್ಯ

March 30, 2019

ಮೈಸೂರು: ಪ್ರಸ್ತುತ ಜಗತ್ತಿನಲ್ಲಿ ಗೂಗಲ್ ಯುಗ ಅದಿಪತ್ಯ ಸ್ಥಾಪಿಸಿದ್ದು, ಮಾಹಿತಿ ತಂತ್ರಜ್ಞಾನ ಹೆಚ್ಚು ಪ್ರಚಲಿತದಲ್ಲಿದೆ ಎಂದು ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಅಭಿಪ್ರಾಯಪಟ್ಟರು. ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂ ಗಣದಲ್ಲಿ ಮೈಸೂರು ವಿವಿ ಬಿ.ಎನ್. ಬಹ ದ್ದೂರ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸೈನ್ಸಸ್‍ನ (ಬಿಐ ಎಂಎಸ್) ವ್ಯವ ಹಾರ ಆಡಳಿತ ಅಧ್ಯಯನ ವಿಭಾಗದ ವತಿಯಿಂದ `ನಾಲ್ಕನೇ ಕೈಗಾ ರಿಕಾ ಕ್ರಾಂತಿ’ ಕುರಿತಂತೆ ಹಮ್ಮಿಕೊಂಡಿದ್ದ ಅಂತಾ ರಾಷ್ಟ್ರೀಯ ಸಮ್ಮೇಳನದ ಸಮಾ ರೋಪ ದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಜಗತ್ತಿನಲ್ಲಿ ಮಾಹಿತಿ ತಂತ್ರಜ್ಞಾನದ ದೊಡ್ಡ ಕ್ರಾಂತಿಯಾಗಿದ್ದು, ಮಾಹಿತಿ ಸ್ವೀಕಾರ ಮತ್ತು ಪ್ರಸರಣ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸಂಸ್ಕøತಿ, ಅರ್ಥವ್ಯವಸ್ಥೆ, ವ್ಯವ ಹಾರ ಎಲ್ಲದಕ್ಕೂ ಆಂತರಿಕ ಸಂಬಂಧ ವಿದೆ. ಇದರ ಪರಿಣಾಮ ವಿಶ್ವ ಜಾಗತಿಕ ಹಳ್ಳಿಯಾಗಿದೆ ಎಂದರು.

17ನೇ ಶತಮಾನದ ನಂತರ ನಗರೀ ಕರಣ, ಕೈಗಾರಿಕೀಕರಣ, ವಾಣಿಜ್ಯೀಕರಣ ಹಾಗೂ ಜಾಗತೀಕರಣ ಪ್ರಚಲಿತಕ್ಕೆ ಬಂದವು. ಇಂದು ಜಾಗತೀಕರಣ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಶಕ್ತಿ ಕೇಂದ್ರವಾಗಿದೆ. ಬೋಧನೆ, ಕಲಿಕೆ, ಸಂಶೋಧನೆ, ಪ್ರಕಟಣೆ ಎಲ್ಲಾ ಅಂಶಗಳು ತಂತ್ರಜ್ಞಾನ ಆಧಾರಿತ ವಾಗಿವೆ ಎಂದ ಅವರು, ಶಿಕ್ಷಣ ಮತ್ತು ಜ್ಞಾನದ ಗುರಿ ಜೀವನಾನಂದವಾಗಿರ ಬೇಕು ಎಂದರು. ಆಸ್ಟ್ರೇಲಿಯಾ ನಿವ್‍ಕ್ಯಾಸ್ಟಲ್ ವಿವಿಯ ಪ್ರೊ.ಆಂಥೋಣಿ ಜೆನ್‍ಸನ್, ಸಿಐಐ ಮೈಸೂರು ಅಧ್ಯಕ್ಷ ಭಾಸ್ಕರ್ ಕಳಲೆ, ಬೀಮ್ಸ್‍ನ (ಬಿಐಎಂಎಸ್) ಡೀನ್ ಪ್ರೊ. ಡಿ.ಆನಂದ್, ಪ್ರಾಧ್ಯಾಪಕಿ ಪ್ರೊ.ಆಯಿಶಾ ಎಂ.ಷರೀಫ್, ವಿಭಾಗದ ಮುಖ್ಯಸ್ಥ ಪ್ರೊ. ಆರ್.ಮಹೇಶ್, ಸಮ್ಮೇಳನ ಕಾರ್ಯದರ್ಶಿ ಗಳಾದ ಪ್ರೊ.ಎಸ್.ಜೆ.ಮಂಜುನಾಥ್, ಡಾ.ಎಂ.ಅಮೂಲ್ಯ ಉಪಸ್ಥಿತರಿದ್ದರು.

Translate »