ಇಂದಿನಿಂದ ಮೈನವಿರೇಳಿಸುವ ದಸರಾ ಕುಸ್ತಿ
ಮೈಸೂರು, ಮೈಸೂರು ದಸರಾ

ಇಂದಿನಿಂದ ಮೈನವಿರೇಳಿಸುವ ದಸರಾ ಕುಸ್ತಿ

October 11, 2018

ಮೈಸೂರು:  ಮೈಸೂರು ದಸರಾ ಮಹೋ ತ್ಸವ-2018 ಅಂಗವಾಗಿ ದಸರಾ ಕುಸ್ತಿ ನಾಳೆಯಿಂದ 15ರವರೆಗೆ ನಡೆಯಲಿದೆ. ಮೈಸೂರು ದಸರಾ ಮಹೋ ತ್ಸವದ ಹತ್ತು ಹಲವು ಆಕರ್ಷಣೆಗಳಲ್ಲಿ ನಾಡಕುಸ್ತಿ ಮಹತ್ವದ್ದಾಗಿದೆ. ಮೈಸೂರು ವಿಭಾಗ ಮಟ್ಟದ, ರಾಜ್ಯ ಮಟ್ಟದ ಗ್ರೀಕೊ ರೋಮನ್, ರಾಜ್ಯಮಟ್ಟದ ಫ್ರೀಸ್ಟೈಲ್ ಮತ್ತು ರಾಜ್ಯಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುಸ್ತಿ ಪಟುಗಳ ದೇಹ ತೂಕ ತೆಗೆದುಕೊಳ್ಳುವ, ವೈದ್ಯಕೀಯ ಪರೀಕ್ಷೆ ನಡೆಸುವ ದಿನಾಂಕವನ್ನು ಕುಸ್ತಿ ಉಪಸಮಿತಿ ಬಿಡುಗಡೆಗೊಳಿಸಿದೆ. 2ನೇ ಮೈಸೂರು ವಿಭಾಗ ಮಟ್ಟದ ಫ್ರೀಸ್ಟೈಲ್ ಕುಸ್ತಿ ಪಂದ್ಯಾವಳಿ ದೇಹ ತೂಕ ಮತ್ತು ಕುಸ್ತಿ ಪಂದ್ಯಾವಳಿ ಅ.11ರಂದು ನಡೆಯಲಿದೆ. ಬೆಳಿಗ್ಗೆ 7.30ರಿಂದ ಟೋಕನ್ ನೀಡಿ ಪ್ರತಿಯೊಬ್ಬರಿಗೂ ದೇಹ ತೂಕ ತೆಗೆದುಕೊಳ್ಳಲಾಗು ವುದು.

ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು, ಮಧ್ಯಾಹ್ನ 2-30ರ ಬಳಿಕ ಕುಸ್ತಿ ಪಂದ್ಯಾವಳಿ ನಡೆಯಲಿದೆ. ರಾಜ್ಯಮಟ್ಟದ ಗ್ರೀಕೊ ರೋಮನ್ ಕುಸ್ತಿ ಪಂದ್ಯಾವಳಿ ಅ.12ರಂದು ನಡೆಯಲಿದ್ದು, ಇದಕ್ಕಾಗಿ ಅಂದೇ ಬೆಳಿಗ್ಗೆ 7.30ರಿಂದ 8 ಗಂಟೆವರೆಗೂ ಟೋಕನ್ ನೀಡಿ ಪ್ರತಿಯೊಬ್ಬರಿಗೂ ದೇಹ ತೂಕ ತೆಗೆದುಕೊಳ್ಳಲಾಗುವುದು, ಬೆಳಿಗ್ಗೆ 7.30ರಿಂದಲೇ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ತೂಕ ಮುಗಿದ 2 ಗಂಟೆಯ ನಂತರ ಕುಸ್ತಿ ಪಂದ್ಯಾವಳಿ ಆರಂಭವಾಗಲಿದ್ದು ಅಂತಿಮ ಕುಸ್ತಿ ಪಂದ್ಯಾವಳಿಗಳು ಮಧ್ಯಾಹ್ನ 2-30ರ ಬಳಿಕ ನಡೆಯಲಿವೆ.

ರಾಜ್ಯಮಟ್ಟದ ಮಹಿಳಾ ಫ್ರೀಸ್ಟೈಲ್ ಕುಸ್ತಿ ಪಂದ್ಯಾವಳಿ ಅ.13ರಂದು ನಡೆಯ ಲಿದ್ದು, ಇದಕ್ಕಾಗಿ ಅಂದೇ ಬೆಳಿಗ್ಗೆ 7.30ರಿಂದ 8 ಗಂಟೆವರೆಗೂ ಟೋಕನ್ ನೀಡಿ ಪ್ರತಿಯೊಬ್ಬರಿಗೂ ದೇಹ ತೂಕ ತೆಗೆದುಕೊಳ್ಳಲಾಗುವುದು, ಬೆಳಿಗ್ಗೆ 7.30ರಿಂದಲೇ ವೈದ್ಯ ಕೀಯ ಪರೀಕ್ಷೆ ನಡೆಸಲಾಗುವುದು ಮತ್ತು ಮಧ್ಯಾಹ್ನ 2.30ರ ಬಳಿಕ ಕುಸ್ತಿ ಪಂದ್ಯಾವಳಿ. ರಾಜ್ಯಮಟ್ಟದ ಪುರುಷರ ಫ್ರೀಸ್ಟೈಲ್ ಕುಸ್ತಿ ಪಂದ್ಯಾವಳಿ ಅ.14ರಂದು ನಡೆಯಲಿದ್ದು ಇದಕ್ಕಾಗಿ ಅಂದೇ ಬೆಳಿಗ್ಗೆ 7.30ರಿಂದ 8 ಗಂಟೆವರೆಗೂ ಟೋಕನ್ ನೀಡಿ ಪ್ರತಿಯೊಬ್ಬರಿಗೂ ದೇಹ ತೂಕ ತೆಗೆದುಕೊಳ್ಳಲಾಗುವುದು, ಬೆಳಿಗ್ಗೆ 7.30ರಿಂದಲೇ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಮತ್ತು ಮಧ್ಯಾಹ್ನ 2.30ರ ಬಳಿಕ ಕುಸ್ತಿ ಪಂದ್ಯಾ ವಳಿ ಆರಂಭವಾಗಲಿದೆ. 2ನೇ ಮೈಸೂರು ವಿಭಾಗಮಟ್ಟದ ಕುಸ್ತಿ ಪಂದ್ಯಾವಳಿಯ ದಸರಾ ಕುಮಾರ್ ಪ್ರಶಸ್ತಿಯ ಕುಸ್ತಿ ಪಂದ್ಯಾವಳಿಯನ್ನು ಅಂತಿಮ ದಿನವಾದ ಅ.15ರಂದು ನಡೆಸಲಾಗುತ್ತದೆ. ಅದೇ ದಿನ ರಾಜ್ಯಮಟ್ಟದ ಗ್ರೀಕೋ ರೋಮನ್ ಕುಸ್ತಿ ಪಂದ್ಯಾ ವಳಿಯ ಅತ್ಯುತ್ತಮ 2 ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ರಾಜ್ಯಮಟ್ಟದ ಮಹಿಳಾ ಫ್ರೀಸ್ಟೈಲ್ ಕುಸ್ತಿ ಪಂದ್ಯಾವಳಿಯ ದಸರಾ ಕಿಶೋರಿ ಪ್ರಶಸ್ತಿಯ ಕುಸ್ತಿ ಪಂದ್ಯಾವಳಿಯು ಅ.15ರಂದು ನಡೆಯ ಲಿದ್ದು, ಪ್ರಶಸ್ತಿಗಾಗಿ ಯುವ ಕುಸ್ತಿಪಟುಗಳು ಸೆಣಸಾಡಲಿದ್ದಾರೆ. ರಾಜ್ಯಮಟ್ಟದ ಪುರುಷರ ಫ್ರೀಸ್ಟೈಲ್ ಕುಸ್ತಿ ಪಂದ್ಯಾವಳಿಯ ದಸರಾ ಕಂಠೀರವ ಮತ್ತು ದಸರಾ ಕೇಸರಿ ಪ್ರಶಸ್ತಿಯ ಕುಸ್ತಿ ಪಂದ್ಯಾ ವಳಿಯು ಅಂತಿಮ ದಿನವಾದ ಅ.15ಕ್ಕೆ ನಡೆಯಲಿದ್ದು ಕುಸ್ತಿ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.

Translate »