ನಳಿನಿ ಪರ ವಕಾಲತ್ತು ವಹಿಸಲು ಮುಂದಾದ ದಾವಣಗೆರೆ ವಕೀಲ
ಮೈಸೂರು

ನಳಿನಿ ಪರ ವಕಾಲತ್ತು ವಹಿಸಲು ಮುಂದಾದ ದಾವಣಗೆರೆ ವಕೀಲ

January 17, 2020

ಮೈಸೂರು, ಜ.16-ಜೆಎನ್‍ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮೈಸೂರು ವಿವಿಯ ಮಾನಸಗಂಗೋತ್ರಿಯಲ್ಲಿ ನಡೆದ ಪ್ರತಿಭಟನೆ ವೇಳೆ `ಫ್ರಿ ಕಾಶ್ಮೀರ್’ ಫಲಕ ಪ್ರದರ್ಶಿಸಿದ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸಲು ದಾವಣಗೆರೆಯ ವಕೀಲರೊಬ್ಬರು ಮುಂದೆ ಬಂದಿದ್ದಾರೆ. ಮೈಸೂರು ವಕೀಲರ ಸಂಘವು ನಳಿನಿ ಬಾಲಕುಮಾರ್ ಪರ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಎಂದು ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಮೈಸೂರಿನ ವಕೀಲರು ಆಕೆಯ ಪರವಾಗಿ ವಕಾಲತ್ತು ವಹಿಸುತ್ತಿಲ್ಲ. ಈ ಮಧ್ಯೆ ದಾವಣಗೆರೆಯ ಪೀಪಲ್ಸ್ ಲಾಯರ್ಸ್ ಗಿಲ್ಡ್ ಅಧ್ಯಕ್ಷ ಅನೀಸ್ ಪಾಷಾ ಅವರು ನಳಿನಿ ಒಪ್ಪಿದರೆ ತಾವು ಆಕೆಯ ಪರ ವಕಾಲತ್ತು ವಹಿಸಲು ಸಿದ್ಧವಾಗಿರುವುದಾಗಿ ತಿಳಿಸಿದ್ದಾರೆ.

Translate »