ಡಿಸಿಎಂ ಡಾ.ಅಶ್ವಥ್‍ನಾರಾಯಣ್ ಭೇಟಿ, ಮೈಸೂರಲ್ಲಿ ಕಾರ್ಯಕರ್ತರ ಸಂಭ್ರಮ
ಮೈಸೂರು

ಡಿಸಿಎಂ ಡಾ.ಅಶ್ವಥ್‍ನಾರಾಯಣ್ ಭೇಟಿ, ಮೈಸೂರಲ್ಲಿ ಕಾರ್ಯಕರ್ತರ ಸಂಭ್ರಮ

September 21, 2019

ಮೈಸೂರು, ಸೆ.20(ಆರ್‍ಕೆಬಿ)- ಮೈಸೂ ರಿಗೆ ಭೇಟಿ ನೀಡಿದ್ದ ಐಟಿ-ಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಅಶ್ವಥ್‍ನಾರಾಯಣ್ ಅವರಿಗೆ ಶುಕ್ರವಾರ ಮೈಸೂರು-ಬೆಂಗ ಳೂರು ರಸ್ತೆ ಕೊಲಂಬಿಯಾ ಏಷಿಯಾ ವೃತ್ತದ ಬಳಿ ಅದ್ಧೂರಿ ಸ್ವಾಗತ ದೊರೆಯಿತು.

ಬಿಜೆಪಿ ಕಾರ್ಯಕರ್ತರು ಭಾರೀ ಸಂಖ್ಯೆ ಯಲ್ಲಿ ಸೇರಿದ್ದರಿಂದ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಉಪಮುಖ್ಯಮಂತ್ರಿ ಗಳು ಆಗಮಿಸುತ್ತಿದ್ದಂತೆ ನಾ ಮುಂದು ತಾ ಮುಂದು ಎಂದು ಕಾರ್ಯಕರ್ತರು ಹೂ ಗುಚ್ಛ ನೀಡಲು ಮುಂಗಿಬಿದ್ದರು. ಈ ವೇಳೆ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀ ಸರು ಪರದಾಡುವಂತಾಯಿತು. ಕಾರ್ಯಕರ್ತ ರನ್ನು ನೋಡಿ ಕಾರಿನಿಂದ ಡಿಸಿಎಂ ಇಳಿ ಯುತ್ತಿದ್ದಂತೆ ಜನಸಂದಣಿ ಹೆಚ್ಚಾದ್ದರಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂ ಡಿತು. ಈ ವೇಳೆ ಕೆಲವರು ಪೊಲೀಸ ರೊಂದಿಗೆ ವಾಗ್ವಾದಕ್ಕೂ ಇಳಿದರು. ಬಳಿಕ ಪೊಲೀಸರ ಭದ್ರತೆಯೊಂದಿಗೆ ಡಿಸಿಎಂ ಮೈಸೂರು ಸರ್ಕಾರಿ ಅತಿಥಿಗೃಹಕ್ಕೆ ತೆರಳಿದರು.

Translate »