ಜಿಟಿಡಿಗೆ ಆಹ್ವಾನ ನೀಡಿದ್ದೇವೆ: ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ
ಮೈಸೂರು

ಜಿಟಿಡಿಗೆ ಆಹ್ವಾನ ನೀಡಿದ್ದೇವೆ: ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ

September 21, 2019

ಮೈಸೂರು, ಸೆ.20(ಎಸ್‍ಬಿಡಿ)- ಸಿದ್ದ ರಾಮಯ್ಯರನ್ನು ಸೋಲಿಸಿದರೆಂದು ಜಿಟಿಡಿ ಅವರನ್ನು ಸಿಎಂ ಮಾಡಬೇಕಿತ್ತಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಶುಕ್ರವಾರ ಮೈಸೂರಿನಲ್ಲಿರುವ ಮಾಜಿ ಸಚಿವ ಸಾ.ರಾ.ಮಹೇಶ್ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರನ್ನು ಸೋಲಿಸಿ ಬಿಟ್ಟರು ಎಂದು ಜಿ.ಟಿ.ದೇವೇಗೌಡರನ್ನು ಮುಖ್ಯ ಮಂತ್ರಿ ಮಾಡಬೇಕಿತ್ತೇ?. ಅವರನ್ನು ಮಂತ್ರಿ ಮಾಡಿದ್ದು ಮುಗಿಸಿದಂತಾಗುತ್ತದೆಯೇ?. ನಾನು ಮೈಸೂರನ್ನೇ ನೋಡಿರಲಿಲ್ಲ. ನನಗೆ ಮೈಸೂರು ತೋರಿಸಿದ್ದೇ ಜಿಟಿಡಿಯವರ ಲ್ಲವೇ?. ಅವರು ದೊಡ್ಡ ನಾಯಕರು. ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

ಶನಿವಾರ ಮೈಸೂರು ಗ್ರಾಮಾಂತರ ಮುಖಂ ಡರ ಸಭೆ ಕರೆದಿದ್ದೇವೆ. ಸಭೆಗೆ ನಮ್ಮ ಅಧ್ಯ ಕ್ಷರು ಜಿಟಿಡಿಯವರನ್ನು ಆಹ್ವಾನಿಸಿದ್ದಾರೆ. ಪಾಪ, ಈಗ ವಿಶ್ರಾಂತಿ ಬೇಕೆಂದು ಜಿಟಿಡಿ ಯವರೇ ಹೇಳಿದ್ದಾರೆ. ಅವರು ವಿಶ್ರಾಂತಿ ತೆಗೆದುಕೊಳ್ಳಲಿ ಬಿಡಿ. ನಾವ್ಯಾಕೆ ತೊಂದರೆ ಕೊಡೋಣ. ಸಭೆಗೆ ಬರುವುದು, ಇಲ್ಲ ಬಿಡು ವುದು ಅವರಿಗೆ ಬಿಟ್ಟ ವಿಚಾರ. ಅವರೀಗ ಬೆಳೆದಿದ್ದಾರೆ. ಅವರ ಬಗ್ಗೆ ಮಾತನಾಡುವು ದಿಲ್ಲ ಎಂದು ಜಿಟಿಡಿಗೆ ಟಾಂಗ್ ನೀಡಿದ ಹೆಚ್‍ಡಿಕೆ, ಜೆಡಿಎಸ್ ಪಕ್ಷ ಕಟ್ಟಲು ಸಿದ್ದ ರಾಮಯ್ಯ ಬಿಡಿಗಾಸು ಕೊಟ್ಟಿಲ್ಲ. ಸಾಲ ಸೋಲ ಮಾಡಿ ಪಕ್ಷ ಉಳಿಸಿದ್ದು ದೇವೇಗೌಡರ ಕುಟುಂಬ. ಪಕ್ಷದ ಕಾರ್ಯಕರ್ತರ ಕಷ್ಟ-ಸುಖದಲ್ಲಿ ಭಾಗಿಯಾಗೋದು ಸಹ ದೇವೇ ಗೌಡರ ಕುಟುಂಬವೇ. ಮಾತನಾಡುವವರು ಪಕ್ಷ ಸಂಘಟನೆಗೆ ಸಿದ್ದರಾಮಯ್ಯರ ಆದಿ ಯಾಗಿ ಯಾರು ಒಂದು ಬಿಡಿಗಾಸು ಕೊಟ್ಟಿಲ್ಲ. ಅಧಿಕಾರ ಸಿಗುವಾಗ ಮಾತ್ರ ಪಕ್ಷ ಸಂಘ ಟನೆ ಮಾಡಿದ್ದೀವಿ ಎಂದು ಮುಂದೆ ಬಂದು ನಿಲ್ಲುತ್ತಾರೆ. ಪಕ್ಷದ ಆರ್ಥಿಕ ಪರಿಸ್ಥಿತಿ ನಮಗೆ ಮಾತ್ರ ಗೊತ್ತಿರೋದು ಎಂದು ಸಿದ್ದರಾಮ ಯ್ಯರ ವಿರುದ್ಧವೂ ಹರಿಹಾಯ್ದರು.

ತನಿಖಾ ಸಂಸ್ಥೆಗಳ ದುರುಪಯೋಗ: ಜಮೀನಿನಲ್ಲಿ ಡಿ.ಕೆ.ಶಿವಕುಮಾರ್, ಚಿನ್ನ ಬೆಳೆದ್ರಾ ಅಥವಾ ಭತ್ತ ಬೆಳೆದ್ರಾ ಎಂದು ಪ್ರಶ್ನಿ ಸುತ್ತಿದ್ದಾರೆ. ಆದರೆ 20 ವರ್ಷಗಳಿಂದ ಅವರು ತೆರಿಗೆ ಕಟ್ಟುವಾಗ ಜಮೀನಿನಲ್ಲಿ ಏನು ಬೆಳೆದಿದ್ದಾರೆ ಎಂಬುದು ಆದಾಯ ತೆರಿಗೆ ಅಧಿ ಕಾರಿಗಳಿಗೆ ತಿಳಿಯುತ್ತಿರಲಿಲ್ಲವೇ?. ಕೇಂದ್ರದ ತನಿಖಾ ಸಂಸ್ಥೆಗಳನ್ನ ದುರುಪಯೋಗ ಮಾಡಿ ಕೊಳ್ಳುತ್ತಿರುವುದು ಡಿಕೆಶಿ ಪ್ರಕರಣದಲ್ಲೇ ಸ್ಪಷ್ಟವಾಗಿ ತಿಳಿಯುತ್ತಿದೆ ಎಂದು ಆರೋಪಿ ಸಿದ ಹೆಚ್‍ಡಿಕೆ, ದೇಶದಲ್ಲಿ ಕಡುಭ್ರಷ್ಟರಿರು ವುದು ಇಬ್ಬರೇ. ಒಬ್ಬರು ಪಿ.ಚಿದಂಬರಂ, ಮತ್ತೊಬ್ಬರು ಡಿಕೆಶಿ. ಪಾಪ ಇಡಿ ಕಣ್ಣಿಗೆ ಮತ್ತ್ಯಾರೂ ಕಾಣಿಸಿಲ್ಲ. ನೋಡೋಣ ಮುಂದೆ ಇನ್ಯಾರು ಇಡಿಗೆ ಕಾಣಿಸುತ್ತಾ ರೆಂದು ವಿಡಂಬನೆ ಮಾಡಿದರು.

ನನ್ನನ್ನು ಏನೂ ಮಾಡೋಕಾಗಲ್ಲ: ಫೋನ್ ಟ್ಯಾಪಿಂಗ್‍ಗೂ ನನಗೂ ಸಂಬಂ ಧವೇ ಇಲ್ಲ. ನನ್ನನ್ನ ಇಡಿ, ಐಟಿ, ಸಿಬಿಐ ಯಾರು ಏನೂ ಮಾಡೋಕಾಗಲ್ಲ. ಗುಪ್ತ ವಾರ್ತೆ ನನ್ನ ಬಳಿ ಇದ್ದ ಮಾತ್ರಕ್ಕೆ ಫೋನ್ ಟ್ಯಾಪಿಂಗ್ ಅಧಿಕಾರ ಇರುವುದಿಲ್ಲ. ಇಂಟೆ ಲಿಜೆನ್ಸ್ ಬ್ಯೂರೋದವರು ಪ್ರಧಾನಿಗೆ ಮಾಹಿತಿ ನೀಡುವಂತೆ ಮುಖ್ಯಮಂತ್ರಿಗಳಿಗೂ ತಿಳಿಸು ತ್ತಾರೆ. ಆ ಮಾಹಿತಿ ಮೂಲವನ್ನು ಕೇಳುವು ದಾಗಲೀ, ಹೇಳುವುದಾಗಲೀ ಸರಿಯಲ್ಲ. ವ್ಯವಸ್ಥೆಯ ದುರುಪಯೋಗ ಮಾಡಿಕೊಂಡಿ ದ್ದರೆ ನನ್ನ ಸರ್ಕಾರ ಬಿಳೋಕೆ ಬಿಡ್ತಿದ್ನಾ?. ವಿರೋಧ ಪಕ್ಷದಲ್ಲಿ ಕುಳಿತು ನನ್ನ ವಿರುದ್ದ ಮಾಡಿದ ಪಿತೂರಿಗಳನ್ನು ಕೇಳಿಕೊಂಡು ಸುಮ್ಮನೆ ಕೂರ್ತಿದ್ನಾ?. ಯಾವ ಫೋನ್ ಟ್ಯಾಪಿಂಗು ಇಲ್ಲ, ಬ್ಲಾಕ್ ಟ್ಯಾಪಿಂಗ್ ಇಲ್ಲ, ವೈಟ್ ಟ್ಯಾಪಿಂಗು ಇಲ್ಲ. ಈ ವಿಚಾರ ವಾಗಿ ಯಾರೂ ನನ್ನನ್ನು ಏನೂ ಮಾಡಲು ಸಾಧ್ಯ ವಿಲ್ಲ. ಸಿಬಿಐ ದುರ್ಬಳಕೆ ಮಾಡಿಕೊಂಡರೂ ಆತಂಕವಿಲ್ಲ. ಮುಂದೆ ಏನಾಗುತ್ತೆ ಅನ್ನೋ ದನ್ನ ಕಾದು ನೋಡೋಣ ಎಂದರು.

2-3 ತಿಂಗಳು ಕಾಯಿರಿ: ರಾಜ್ಯದಲ್ಲಿ ಮಧ್ಯಂ ತರ ಚುನಾವಣೆ ವಿಚಾರವಾಗಿ ಮಾತನಾ ಡಿದ ಅವರು, ನಾನು ನಿರಾಶವಾದಿಯಲ್ಲ, ಆಶಾವಾದಿ. 224 ಕ್ಷೇತ್ರದಲ್ಲೂ ಚುನಾವಣೆ ತಯಾರಿ ನಡೆಸುತ್ತಿದ್ದೇನೆ. ಇನ್ನು 2-3 ತಿಂಗ ಳಲ್ಲಿ ಈ ಸರ್ಕಾರ ಏನೇನಾಗುತ್ತೆ ಎಂಬುದನ್ನು ಕಾದು ನೋಡಿ. ಇದೇ ತಿಂಗಳ 30ರ ಸಭೆ ಯಲ್ಲಿ ಹುಣಸೂರು ಸೇರಿದಂತೆ 130 ಕ್ಷೇತ್ರ ಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇನೆ. ದೇವೇಗೌಡರು ಒಂದು ಕಡೆ ಪಕ್ಷ ಸಂW Àಟನೆ ಮಾಡಿದ್ರೆ, ನಾನೊಂದು ಕಡೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಜೆಡಿಎಸ್ ಪಕ್ಷ ಬೆಳೆದಿ ರೋದು ಕಾರ್ಯಕರ್ತರಿಂದ. ನಾನೇ ನಾಯಕ ಅಂತ ಹೋದವರ ಪರಿಸ್ಥಿತಿ ಏನಾಗಿದೆ ಅಂತ ಗೊತ್ತಿದೆ. ನಮ್ಮನ್ನ ಬೆಳೆಯೋಕೆ ಬಿಡಲಿಲ್ಲ ಎನ್ನುವವರು ಪಕ್ಷ ಸಂಘಟನೆ ಬಗ್ಗೆಯೂ ಹೇಳ ಬೇಕು. ಸರ್ಕಾರದಲ್ಲಿ ಅಧಿಕಾರ ಹಂಚಿಕೊಳ್ಳು ವಾಗ ಬಹಳ ತ್ಯಾಗ ಮಾಡಿದ್ದೀವಿ ಎಂದು ಬರುತ್ತಾರೆ. ದೇವರಿದ್ದಾನೆ ಎಲ್ಲವನ್ನು ನೋಡಿ ಕೊಳ್ತಾನೆ ಎಂದು ಹೆಚ್‍ಡಿಕೆ ಹೇಳಿದರು.

Translate »