ನ.30ರಂದು ರೈತ ಸಂಘಟನೆಯಿಂದ ಸಿಎಂಗೆ ಕಪ್ಪು  ಬಾವುಟ ಪ್ರದರ್ಶಿಸಲು ನಿರ್ಧಾರ: ಹೊನ್ನೂರು ಪ್ರಕಾಶ
ಚಾಮರಾಜನಗರ

ನ.30ರಂದು ರೈತ ಸಂಘಟನೆಯಿಂದ ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಲು ನಿರ್ಧಾರ: ಹೊನ್ನೂರು ಪ್ರಕಾಶ

November 23, 2018

ಹನೂರು: ವಿವಿಧ ಕಾಮ ಗಾರಿಗಳ ಉದ್ಘಾಟನೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ನ. 30ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಗಮಿ ಸುತ್ತಿದ್ದು, ಅವರಿಗೆ ಕಪ್ಪು ಬಾವುಟ ತೋರಿ ಸಲಾಗುವುದು ಎಂದು ರೈತ ಸಂಘದ ಜಿಲ್ಲಾ ಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.

ಹನೂರು ಪಟ್ಟಣದ ಅರಣ್ಯ ಇಲಾಖೆ ವಸತಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹನೂರು ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಇಲ್ಲಿನ ಶಾಸಕರು ಕ್ಷೇತ್ರ ವನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲ ರಾಗಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಇಂದಿಗೂ ಮೂಲ ಸೌಲಭ್ಯಗಳ ಕೊರತೆ ಯಿಂದ ಜನರು ಪರದಾಡುತ್ತಿದ್ದಾರೆ. ಸೌಲಭ್ಯ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರೂ ಶಾಸ ಕರು ಬೇಜವಾಬ್ದಾರಿಯಿಂದ ವರ್ತಿಸುತ್ತಿ ದ್ದಾರೆ. ಇದರ ಪರಿಣಾಮ ರೈತ ಸಂಘ ಟನೆಯಿಂದ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ತೋರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದ ರ್ಶಿಸುವ ಸಂದರ್ಭದಲ್ಲಿ ರೈತರಿಗೆ ಅನಾ ಹುತ ಸಂಭವಿಸಿದರೆ ಅದಕ್ಕೆ ಸ್ಥಳೀಯ ಶಾಸಕರೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.

ಶಾಸಕರು ಒಂದು ಬಾರಿಯೂ ರೈತರ ಸಭೆ ನಡೆಸಿಲ್ಲ. ರೈತರ ಮನವಿಗೆÀ ಸ್ಪಂದಿ ಸುತ್ತಿಲ್ಲ. ಕೆರೆಗಳಿಗೆ ನೀರು ತುಂಬಿ ಸುವ ಯೋಜನೆಯಲ್ಲೂ ವಿಫಲರಾಗಿ ದ್ದಾರೆ. ಇದರಿಂದಾಗಿ ರೈತರಿಗೆ ಅನಾನು ಕೂಲವಾಗಿದೆ. ಇದರಿಂದ ಬೇಸತ್ತು ಅಂದು ಮಲೆಮಹದೇಶ್ವರ ಬೆಟ್ಟದಲ್ಲಿ 500ಕ್ಕೂ ಹೆಚ್ಚು ರೈತರು ಜಮಾವಣೆಗೊಂಡು ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದ ರ್ಶಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವಣ್ಣ, ಖಜಾಂಚಿ ಅಂಬಳೆ ಶಿವಕುಮಾರ್, ಚಾಮರಾಜ ನಗರ ತಾಲೂಕು ಅಧ್ಯಕ್ಷ ಮಹದೇವ ಸ್ವಾಮಿ, ಮುಖಂಡರಾದ ಕರಿಯಪ್ಪ, ಜಡೇಸ್ವಾಮಿ, ಶಾಂತಕುಮಾರ್, ಆರೋಗ್ಯ ರಾಜು, ಮಾದಯ್ಯ, ತಂಬಡಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »