ಮೈಸೂರು ಮಹಾನಗರಪಾಲಿಕೆ 18ನೇ ವಾರ್ಡ್  ಕಾರ್ಪೊರೇಟರ್ ಗುರುವಿನಾಯಕ ಸದಸ್ಯತ್ವ ರದ್ದಿಗೆ ಆಗ್ರಹ
ಮೈಸೂರು

ಮೈಸೂರು ಮಹಾನಗರಪಾಲಿಕೆ 18ನೇ ವಾರ್ಡ್ ಕಾರ್ಪೊರೇಟರ್ ಗುರುವಿನಾಯಕ ಸದಸ್ಯತ್ವ ರದ್ದಿಗೆ ಆಗ್ರಹ

February 21, 2019

ಮೈಸೂರು: ಪರಿಶಿಷ್ಟ ಪಂಗಡಕ್ಕೆ ಮೀಸ ಲಿದ್ದ ಕ್ಷೇತ್ರದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಮೈಸೂರು ನಗರಪಾಲಿಕೆಗೆ 18ನೇ ವಾರ್ಡ್‍ನಿಂದ ಆಯ್ಕೆಯಾಗಿರುವ ಗುರು ವಿನಾಯಕ ವಿರುದ್ಧ ಕಠಿಣ ಕ್ರಮ ಜರುಗಿಸಿ, ಪಾಲಿಕೆ ಸದಸ್ಯತ್ವ ರದ್ದು ಗೊಳಿಸಬೇಕೆಂದು ಕರ್ನಾಟಕ ರಾಜ್ಯ ಬುಡಕಟ್ಟು ಹಿತರಕ್ಷಣಾ ಸಂಘದ ಅಧ್ಯಕ್ಷ ಎಸ್.ಹೆಚ್.ಸುಭಾಷ್ ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಪರಿವಾರ, ಬೆಸ್ತ ಜಾತಿಗೆ ಸೇರಿದವರು ಅಧಿಕಾರಿಗಳಿಗೆ ಲಂಚ ನೀಡಿ `ನಾಯಕ’ ಎಂಬ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ವಿವಿಧ ಸವಲತ್ತುಗಳನ್ನು ಕಬಳಿಸುತ್ತಿದ್ದಾರೆ. ಬೇಜವಾಬ್ದಾರಿತನ ಹಾಗೂ ಆಮಿಷಕ್ಕೆ ಒಳಗಾಗಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿ ಸದೆ ಅರ್ಜಿ ಸಲ್ಲಿಸಿದವರಿಗೆಲ್ಲಾ ನಾಯಕ ಎಂದು ಪ್ರಮಾಣ ಪತ್ರ ನೀಡುತ್ತಿದ್ದಾರೆ. ಸುಳ್ಳು ಪ್ರಮಾಣ ಪತ್ರಗಳನ್ನು ಪಡೆದವರು ಸರ್ಕಾರಿ ಉದ್ಯೋಗ, ವಿವಿಧ ಸೌಲಭ್ಯ ಗಿಟ್ಟಿಸಿಕೊಂಡು ನಿಜವಾದ ನಾಯಕ ಸಮುದಾಯದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ನಿವೃತ್ತ ಡಿಸಿಪಿ ಚೆಲುವರಾಜು ಅವರ ಪುತ್ರ ಮತ್ತು ಪಾಲಿಕೆ ವಾರ್ಡ್ ಸಂಖ್ಯೆ 18ರ ಸದಸ್ಯ ಗುರುವಿನಾಯಕ ಮತ್ತು ಸಹೋದರಿ ಗ್ರೀಷ್ಮ ಅವರಿಗೆ ನಾಯಕ ಎಂದು ನೀಡಿದ್ದ ಪ್ರಮಾಣಪತ್ರ ರದ್ದಾಗಿದೆ. ಅಲ್ಲದೆ, ಕುವೆಂಪು ವಿವಿ ಪೆÇ್ರಫೆಸರ್ ಆಗಿದ್ದ ಮಧುಸೂದನ್ ಅವರ `ನಾಯಕ’ ಜಾತಿ ಪ್ರಮಾಣ ಪತ್ರವೂ ತಮ್ಮೆಲ್ಲರ ಹೋರಾಟದ ಕಾರಣ ರದ್ದಾಗಿದೆ. ಇದೇ ರೀತಿ ಬೆಳಕಿಗೆ ಬಾರದ ಹಲವಾರು ಪ್ರಕರಣಗಳಿದ್ದು, ತಹಸೀಲ್ದಾರರು, ಗ್ರಾಮ ಲೆಕ್ಕಿಗರು ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಕೂಲಂಕುಶ ಪರಿಶೀಲನೆ ನಡೆಸದಿರುವುದ ರಿಂದಲೇ ಈ ರೀತಿ ಸುಳ್ಳು ಜಾತಿ ಪ್ರಮಾಣ ಪತ್ರಗಳು ಸುಲಭವಾಗಿ ಸಿಗುತ್ತಿವೆ ಎಂದು ದೂರಿದರು. ಗೋಷ್ಠಿಯಲ್ಲಿ ಗೋಕುಲ್ ಇದ್ದರು.

Translate »