ಮನುಷ್ಯನ ಸ್ವಾರ್ಥದಿಂದ ಅರಣ್ಯ ನಾಶ
ಮಂಡ್ಯ

ಮನುಷ್ಯನ ಸ್ವಾರ್ಥದಿಂದ ಅರಣ್ಯ ನಾಶ

September 13, 2018

ಪಾಂಡವಪುರ: ‘ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ ಮರಗಳನ್ನು ಕತ್ತರಿಸಿ ಅರಣ್ಯ ಪ್ರದೇಶವನ್ನು ನಾಶ ಮಾಡು ತ್ತಿದ್ದಾನೆ’ ಎಂದು ಮಂಡ್ಯ ವಿ.ಸಿ.ಫಾರಂನ ತೋಟಗಾರಿಕೆ ಇಲಾಖೆಯ ವಿಜ್ಞಾನಿ ಡಾ.ನಾಗರಾಜ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿ ಶಿಂಡಭೋಗನಹಳ್ಳಿ ಗ್ರಾಮ ದಲ್ಲಿ ಸಮಾಜ ಸುಧಾರಕಿ ಮದರ್ ತೆರೇಸಾ ಅವರ ಜನ್ಮ ದಿನದ ಅಂಗವಾಗಿ ಶಿಂಡ ಭೋಗನಹಳ್ಳಿ ಗ್ರಾಮಸ್ಥರು, ಅರಣ್ಯ ಇಲಾಖೆ ಯ ಸಹಯೋಗದಲ್ಲಿ ಸಮಾಜ ಸೇವಕ ಲವ ಕುಮಾರ್ ಅವರು ಹಮ್ಮಿಕೊಂಡಿದ್ದ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮದರ್ ತೆರೇಸಾ ಅವರ ಜನ್ಮ ದಿನದ ನೆನೆಪಿನಾರ್ಥವಾಗಿ ಗ್ರಾಮಸ್ಥರಿಗೆ ಸಸಿ ಗಳನ್ನು ವಿತರಣೆ ಮಾಡುತ್ತಿರುವುದು ಅರ್ಥ ಪೂರ್ಣವಾಗಿದೆ. ಸಮಾಜದಲ್ಲಿ ಪ್ರತಿ ಯೊಬ್ಬರು ಒಂದೊಂದು ಗಿಡವನ್ನು ನೆಟ್ಟಿ ಬೆಳೆಸಬೇಕು ಎನ್ನುವ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ ಮರಗಳನ್ನು ಕತ್ತರಿಸಿ ಅರಣ್ಯ ಪ್ರದೆÉೀಶವನ್ನು ನಾಶ ಮಾಡು ತ್ತಿದ್ದಾರೆ. ಇದರಿಂದಾಗಿ ಹಲವಾರು ಪ್ರಾಕೃತಿಕ ವಿಕೋಪಗಳು ಸಹ ಸಂಭವಿಸುತ್ತಿವೆ. ಕೊಡಗಿನ ಪ್ರಾಕೃತಿಕ ವಿಕೋಪಕ್ಕೂ ಸಹ ಪರಸರ ನಾಶವೇ ಕಾರಣವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜಮೀನು ಗಳಲ್ಲಿ, ಮನೆಯ ಸುತ್ತಮುತ್ತಲಿನ ಪ್ರದೇ ಶಗಳಲ್ಲಿ ಗಿಡಗಳನ್ನು ನೆಟ್ಟಿ ಬೆಳಸಬೇಕು ಎಂದು ಸಲಹೆ ನೀಡಿದರು.

ಸಮಾಜ ಸೇವಕ ಲವಕುಮಾರ್ ಮಾತನಾಡಿ, ಮದರ್ ತೆರೇಸಾ ಅವರು ಸಮಾಜದ ಅತಿದೊಡ್ಡ ಮಹಿಳಾ ಸಮಾಜ ಸುಧಾರಕಿಯಾಗಿದ್ದಾರೆ. ಇವರು ಸಮಾಜದ ಸಾಕಷ್ಟು ಬಡ ಸಮುದಾ ಯದ ಜನರಿಗೆ ನೆರವಾಗಿದ್ದಾರೆ. ಇವರ ಸಮಾಜ ಸೇವೆಯನ್ನು ಕಂಡು ಭಾರತ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಸಮಾಜ ಸೇವೆ ಮಾಡು ವಂತ ವ್ಯಕ್ತಿಗಳ ಸಂಖ್ಯೆ ಕಡಿಮೆ ಯಾಗು ತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅರಣ್ಯವನ್ನು ಕಡ್ಡಾಯವಾಗಿ ನಾವೆಲ್ಲ ರು ಸಂರಕ್ಷಣೆ ಮಾಡಬೇಕಾಗಿದೆ. ಅಂತ ರ್ಜಲ ರಕ್ಷಣೆಗೆ ಕೆರೆಕಟ್ಟೆಗಳನ್ನು ನಿರ್ಮಾಣವನ್ನು ಸಹ ನಾವೆಲ್ಲರು ಒಗ್ಗೂಡಿ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಟಿ.ನಾಗಣ್ಣ, ಸದಸ್ಯ ನರಸಿಂಹೇಗೌಡ, ಸತೀಶ್, ಎಸ್‍ಡಿಎಂಸಿ ಅಧ್ಯಕ್ಷ ನಾಗೇಂದ್ರ, ಮುಖ್ಯಶಿಕ್ಷಕ ಗೋಪಾಲ ಸ್ವಾಮಿ, ಮುಖಂಡ ರಾದ ಗೋವಿಂದಯ್ಯ, ಎಸ್.ಎಸ್.ಜಗ ದೀಶ್, ಎಸ್.ಸಿ.ಲೋಕೇಶ್ ಹಾಜರಿದ್ದರು.

Translate »