ವಿರಾಜಪೇಟೆ: ಸಂವಿಧಾನದ ತಳ ಹದಿಯ ಮೇಲೆ ಅಭಿವೃದ್ಧಿಯ ಭಾರತ ಕಟ್ಟುವ ಮೂಲಕ ಪ್ರಜೆಗಳಿಂದ ಪ್ರಜೆಗಳಿ ಗಾಗಿ ಪ್ರಜೆಗಳಿಗೋಸ್ಕರ ಇರುವ ಸರಕಾರ ಸಂವಿಧಾನದ ಹೃದಯವಾಗಿದೆ ಎಂದು ತಹ ಶೀಲ್ದಾರ್ ಡಿ.ಎಂ.ಗೋವಿಂದರಾಜು ಹೇಳಿದರು.
ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತದ ಆಶ್ರಯದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯ ಅಂಗ ವಾಗಿ ಪಟ್ಟಣದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಧ್ವಜಾ ರೋಹಣ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಮಾತನಾಡಿದ ತಹಶೀಲ್ದಾರ್ ಗೋವಿಂದ ರಾಜು, ಭಾರತವನ್ನು ರಚನಾತ್ಮಕವಾಗಿ ಕಟ್ಟುವು ದರೊಂದಿಗೆ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಪ್ರಜಾಸತ್ತಾತ್ಮಕ ವ್ಯೆವಸ್ಥೆಯಲ್ಲಿ ಶಾಸ ಕಾಂಗ ಕಾರ್ಯಾಂಗ ನ್ಯಾಯಾಂಗದ ಮಹತ್ವ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಇಂದಿನ ಪ್ರಜೆಗಳ ಕರ್ತವ್ಯವೇನು ಎಂಬು ದನ್ನು ಅರಿತುಕೋಳ್ಳಬೇಕು ಎಂದರು.
ಭಾರತದಲ್ಲಿ ಜನಸಂಖ್ಯೆ, ನಿರುದ್ಯೋಗ, ಅನ ಕ್ಷರತೆ, ಬಡತನಗಳಿದ್ದರೂ ಭಾರತ ಅಭಿ ವೃದ್ಧಿಯ ಮುಂಚೂಣಿಯಲ್ಲಿದೆ. ಭಾರತದ ಪ್ರಜೆಗಳಾದ ನಾವು ಭ್ರಷ್ಟಾಚಾರ, ಬಡತನ, ಭಯೋತ್ಪಾದನೆ, ಜಾತಿಯತೆ ಮತ್ತು ಕೋಮುವಾದ ಮುಕ್ತವಾದ ನವಭಾರತ ನಿರ್ಮಾ ಣಕ್ಕಾಗಿ ಜೋತೆಯಾಗಿ ನಡೆಯೋಣ ಎಂದು ತಹಶೀಲ್ದಾರ್ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಹಾಗೂ ವಿಶೇಷ ಆಹ್ವನಿತರಾಗಿ ತೂಕ್‍ಬೊಳಕ್ ಸಾಹಿತ್ಯ ಅಕಾಡೇಮಿಯ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಮಾತನಾಡಿದರು. ವೇದಿಕೆಯಲ್ಲಿ ಡಿವೈಎಸ್‍ಪಿ ನಾಗಪ್ಪ, ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ, ತಾಪಂ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಪ್ರೀತಿ ಚಿಕ್ಕಮಾದಯ್ಯ, ಪಪಂ ಮುಖ್ಯಾ ಧಿಕಾರಿ ಎ.ಎಂ.ಶ್ರೀಧರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮದೋಶ್ ಪೂವಯ್ಯ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗಣೇಶ್ ನಂಜಪ್ಪ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಾಶಿ ಕಾವೇರಪ್ಪ ಮುಂತಾದವರು ಉಪಸ್ಥಿತರಿದ್ದರು. ಪ್ರಭಾರ ಕ್ಷೇತ್ರ ಶಿಕ್ಷಣಾಧಿ ಕಾರಿ ಕೆ.ಕೆ.ಅಂಬುಜ ಸ್ವಾಗತಿಸಿದರು. ಉಪ ನ್ಯಾಸಕ ಚಾಲ್ಸ್‍ಡಿಸೋಜ ನಿರೂಪಿಸಿ, ಶಿಕ್ಷಕ ಎ.ವಿ.ಮಂಜುನಾಥ್ ವಂದಿಸಿದರು.
ಪೊಲೀಸ್ ಇಲಾಖೆ, ಎನ್‍ಸಿಸಿ ಸ್ಕೌಟ್ಸ್, ಗೈಡ್ಸ್, ಭಾರತ್ ಸೇವಾದಳ ಇವರಿಂದ ಕವಾಯತು ಪ್ರದರ್ಶನ ನಡೆಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಶಾಂತಾ ಚಿತ್ರ ಮಂದಿರದಿಂದ ಮೆರವಣಿಗೆ ಹೊರಟು ದೊಡ್ಡಟ್ಟಿ ಚೌಕಿ, ಮುಖ್ಯ ರಸ್ತೆಗಾಗಿ ಗಡಿ ಯಾರ ಕಂಬದ ಮೂಲಕ ತಾಲೂಕು ಮೈದಾನದವರೆಗೆ ಸಾಗಿದರು. ಮೆರವಣಿಗೆ ಯಲ್ಲಿ ವಿನಾಯಕ ಶಾಲೆ, ಪ್ರಗತಿಶಾಲೆ, ರೋಲಿಕ್ಸ್ ಶಾಲೆ, ಜಯಪ್ರಕಾಶ್ ನಾರಾ ಯಣ ಶಾಲೆ, ರೋಟರಿ ಶಾಲೆ ಬಿಟ್ಟಂಗಾಲ, ಕಾವೇರಿ ಶಾಲೆ ವಿದ್ಯಾರ್ಥಿಗಳಿಂದ ಸ್ಥಬ್ಧ ಚಿತ್ರಗಳು ಭಾಗವಹಿಸಿದ್ದವು.
ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.