ಅನ್ನದಾತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು
ಕೊಡಗು

ಅನ್ನದಾತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು

January 28, 2019

ಸೋಮವಾರಪೇಟೆ: ಇಲ್ಲಿನ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ 70ನೇ ಗಣರಾಜೋತ್ಸವ ಕಾರ್ಯಕ್ರಮ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲಾ ಮೈದಾನದಲ್ಲಿ ಆರ್ಥ ಪೂರ್ಣವಾಗಿ ಆಚರಿಸಲಾಯಿತು.

ಪೊಲೀಸ್ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್, ಹೊಂಗಾಡ್ರ್ಸ್, ಜೈ ಜವಾನ್ ಮಾಜಿ ಸೈನಿಕರ ಸಂಘ, ಸಾಂದೀಪನಿ, ಕುವೆಂಪು, ಓಎಲ್‍ವಿ, ಜ್ಞಾನವಿಕಾಸ ಶಾಲೆಗಳು ಹಾಗೂ ವಿದ್ಯಾರ್ಥಿ ಪೊಲೀಸ್ ಘಟಕದಿಂದ ಆಕ ರ್ಷಕ ಪಥಸಂಚಲನ ನಡೆಯಿತು. ತಹಶೀ ಲ್ದಾರ್ ಪಿ.ಎಸ್.ಮಹೇಶ್ ಧ್ವಜಾರೋ ಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶವನ್ನು ನೀಡಿದರು.

ಬಡತನ, ನಿರುದ್ಯೋಗ ನಿವಾರಣೆಗಾಗಿ ಹಲವಾರು ಜನಕಲ್ಯಾಣ ಯೋಜನೆಗಳು ಸ್ವಾತಂತ್ರ್ಯದ ನಂತರ ಜಾರಿಗೆ ಬಂದಿದೆ. ರೈತರ ಜ್ವಲಂತ ಸಮಸ್ಯೆಗಳನ್ನು ಪರಿಹರಿ ಸುವಲ್ಲಿ ಸರ್ಕಾರಗಳು ವೈಜ್ಞಾನಿಕ ಯೋಜ ನೆಗಳನ್ನು ಜಾರಿಗೆ ತರಬೇಕಾಗಿದೆ. ಅನ್ನದಾ ತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಾಗಿದೆ. ಮಕ್ಕಳಲ್ಲಿ ದೇಶಪ್ರೇಮ ಮೂಡಿಸುವ ಕೆಲಸವಾಗಬೇಕಿದೆ ಎಂದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್ ಮಾತನಾಡಿದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಚೌಡ್ಲು ಗ್ರಾಪಂ ಅಧ್ಯಕ್ಷೆ ರಮ್ಯ ಕರುಣಾಕರ, ಜಿಪಂ ಸದಸ್ಯೆ ಪೂರ್ಣಿಮಾ ಗೋಪಾಲ್, ತಾಪಂ ಸದಸ್ಯೆ ತಂಗಮ್ಮ. ರಾಷ್ಟ್ರೀಯ ಹಬ್ಬಗಳ ಸಮಿತಿ ಸದಸ್ಯರಾದ ಎಸ್.ಮಹೇಶ್, ಜೆ.ಸಿ.ಶೇಖರ್, ಬಿಇಒ ಸಿ.ಆರ್.ನಾಗರಾ ಜಯ್ಯ, ಪಪಂ ಮುಖ್ಯಾಧಿಕಾರಿ ನಟ ರಾಜ್, ಮೀನುಗಾರಿಕೆ ಇಲಾಖೆಯ ಸಹಾ ಯಕ ನಿರ್ದೇಶಕಿ ಮಿಲನಾ ಭರತ್ ಇದ್ದರು.

ಇದೇ ಸಂದರ್ಭ ಮಾಜಿ ಸೈನಿಕರಾದ ಗೋಣಿಮರೂರಿನ ಬಿ.ಎಸ್.ಕುಂಞಪ್ಪ, ಜಿಪಂ ಎಇಇ ಜಯರಾಂ, ಅಸಾಧಾರಣ ಪ್ರತಿಭೆ ಮಾ. ಆನ್ಷ್ ಅಶ್ವಿನ್ ಅವರುಗಳನ್ನು ಸನ್ಮಾನಿಸಲಾಯಿತು. ಸಾಂಸ್ಕøತಿಕ ಸ್ಪರ್ಧೆ ಯಲ್ಲಿ ಓಎಲ್‍ವಿ, ವಿಶ್ವಮಾನವ ಕುವೆಂಪು ಶಾಲೆ, ಮಸಗೋಡು ಚನ್ನಮ್ಮ ಶಾಲೆ, ಸಾಂಧೀಪನಿ, ಜ್ಞಾನವಿಕಾಸ ಶಾಲೆ, ಎಸ್‍ಜೆಎಂ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ತಂಡಗಳು ಬಹುಮಾನ ಗಳಿಸಿದರು.

Translate »