ವಿಜ್ಞಾನ ಬೆಳವಣಿಗೆಗೆ ಕರ್ನಾಟಕದಲ್ಲಿ ನಿರಾಶಾದಾಯಕ ಪ್ರತಿಕ್ರಿಯೆ
ಮೈಸೂರು

ವಿಜ್ಞಾನ ಬೆಳವಣಿಗೆಗೆ ಕರ್ನಾಟಕದಲ್ಲಿ ನಿರಾಶಾದಾಯಕ ಪ್ರತಿಕ್ರಿಯೆ

January 10, 2019

ಮೈಸೂರು: ಜೀವ ವೈವಿಧ್ಯತೆ ಕುರಿತು ಸಂಪನ್ಮೂಲ ವ್ಯಕ್ತಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ, ಚರ್ಚೆಗಳ ನಡೆಸುವ ಮೂಲಕ ವಿಜ್ಞಾನ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆ ಹಾಗೂ ಸಂಶೋಧನೆಗೆ ದೇಶದ ಮೂರು ವಿಜ್ಞಾನ ಅಕಾಡೆಮಿಗಳು ಒತ್ತು ನೀಡಿ, ನಡೆಸುತ್ತಿ ರುವ ಕಾರ್ಯಕ್ರಮಗಳಿಗೆ ಕರ್ನಾಟಕದಲ್ಲಿ ನಿರಾಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗಿ ರುವುದಕ್ಕೆ ಹಿರಿಯ ವಿಜ್ಞಾನಿ ಡಾ.ಕೆ.ಆರ್. ಶಿವಣ್ಣ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನ ಇಂಡಿಯನ್ ಅಕಾ ಡೆಮಿ ಆಫ್ ಸೈನ್ಸಸ್, ನ್ಯೂಡೆಲ್ಲಿಯ ಇಂಡಿ ಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ, ಅಲಹಾಬಾದ್‍ನ ದಿ ನ್ಯಾಷನಲ್ ಅಕಾ ಡೆಮಿ ಆಫ್ ಸೈನ್ಸಸ್ ಜಂಟಿ ಆಶ್ರಯದಲ್ಲಿ ಬುಧವಾರ ಮೈಸೂರಿನ ಜೆಎಸ್‍ಎಸ್ ಮಹಿಳಾ ಕಾಲೇಜಿನಲ್ಲಿ `ಜೀವ ವೈವಿಧ್ಯತೆ ಯಲ್ಲಿ ಇತ್ತೀಚಿನ ಪ್ರವೃತ್ತಿಗಳು ಮತ್ತು ಮಾನವ ಕಲ್ಯಾಣ’ ಕುರಿತು ಮೈಸೂರಿನ ಜೆಎಸ್‍ಎಸ್ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಉಪ ನ್ಯಾಸ ಕಾರ್ಯಾ ಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ ವಿದ್ಯಾರ್ಥಿಗಳನ್ನು ಆಕರ್ಷಿಸಿ, ಅವರನ್ನು ಉತ್ತಮ ಸಂಶೋಧನೆಗೆ ಪ್ರೇರೇಪಿಸುವ ನಿಟ್ಟಿನಲ್ಲಿ ಮೂರು ವಿಜ್ಞಾನ ಅಕಾಡೆಮಿಗಳು ಕೆಲವು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನಾನಾ ಉಪನ್ಯಾಸ, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸುತ್ತಿದೆ. ಇದಕ್ಕೆ ತಮಿಳು ನಾಡು, ಕೇರಳ ರಾಜ್ಯಗಳಲ್ಲಿ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿಲ್ಲ ಎಂದು ವಿಷಾದಿಸಿದರು.

ಭವಿಷ್ಯದಲ್ಲಿ ವಿಜ್ಞಾನದ ಉಪಯೋಗ ಕುರಿತು ತಿಳಿಸುವ ಇಂತಹ ಕಾರ್ಯಕ್ರಮ ಗಳಿಗೆ ರಾಜ್ಯದ ಕಾಲೇಜು, ವಿದ್ಯಾರ್ಥಿಗಳು ಸ್ಪಂದಿಸಬೇಕು. ವಿಜ್ಞಾನದ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿಯ ಡಾ.ಶಿವಾನಂದಪ್ಪ, ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಕಾಲೇಜಿನ ಪ್ರಾಂಶು ಪಾಲ ಡಾ.ಕೆ.ವಿ.ಸುರೇಶ, ಡೀನ್ ಡಾ. ಹೆಚ್.ಬಿ.ಸುರೇಶ್, ಸಂಚಾಲಕ ಎಂ.ಎಂ. ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Translate »