ಡಾಕ್ಟರ್, ಇಂಜಿನಿಯರ್ ಆಗುವ ಮುನ್ನ ಒಳ್ಳೆಯ ಪ್ರಜೆಗಳಾಗಿ
ಮೈಸೂರು

ಡಾಕ್ಟರ್, ಇಂಜಿನಿಯರ್ ಆಗುವ ಮುನ್ನ ಒಳ್ಳೆಯ ಪ್ರಜೆಗಳಾಗಿ

January 10, 2019

ಮೈಸೂರು: ವಿದ್ಯಾರ್ಥಿ ಗಳು ಡಾಕ್ಟರ್, ಇಂಜಿನಿಯರ್ ಆಗುವುದ ಕ್ಕಿಂತ ಹೆಚ್ಚಾಗಿ ಒಳ್ಳೆಯ ಪ್ರಜೆಗಳಾಗಿ, ಮಾನ ವೀಯತೆಯ ಮೌಲ್ಯಗಳನ್ನು ಬೆಳೆಸಿಕೊಳ್ಳ ಬೇಕು ಎಂದು ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲೆ ಡಾ. ಧರಣಿದೇವಿ ಮಾಲಗತ್ತಿ ಹೇಳಿದರು.

ನಗರದ ಕಲಾಮಂದಿರದಲ್ಲಿ ಬುಧವಾರ ನಡೆದ ಮಾರ್‍ಥೋಮ ಎಜುಕೇಶನ್ ಸೊಸೈಟಿಯ ಸೈಂಟ್ ಥಾಮಸ್ ಶಿಕ್ಷಣ ಸಂಸ್ಥೆಗಳ 55ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾ ರ್ಥಿಯು ವಿಭಿನ್ನ ವ್ಯಕ್ತಿತ್ವ ಹೊಂದಿರುತ್ತಾರೆ. ಎಲ್ಲರನ್ನೂ ಒಂದೇ ಮಾದರಿಯಲ್ಲಿ ಅಳೆಯ ಬಾರದು. ಬೇರೆ ಮಕ್ಕಳೊಂದಿಗೆ ಹೋಲಿಸಿ ಮಾತನಾಡಬಾರದು. ಅದರಿಂದ ಅವರ ಸಾಧನಾ ಕ್ಷೇತ್ರವನ್ನು ಅವಗಣನೆ ಮಾಡಿ ದಂತಾಗುತ್ತದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವ ಭಿನ್ನತೆಯಿಂದ ಕೂಡಿದ್ದು, ಪೆÇೀಷಕರು ಮತ್ತು ಶಿಕ್ಷಕರು ಅರ್ಥಮಾಡಿಕೊಂಡು ವಿದ್ಯಾರ್ಥಿಗಳ ಆಸಕ್ತಿಗನುಸಾರವಾಗಿ ಪೆÇ್ರೀತ್ಸಾಹಿಸಬೇಕು. ಕೆಲವರು ದೃಶ್ಯ ಮಾಧ್ಯ ಮಗಳನ್ನು ಅವಲಂಬಿಸಿ ಹೊಂದಿ ಕೊಂಡರೆ, ಕೆಲವರು ಪ್ರಾಯೋಗಿಕವಾಗಿ ಕಲಿಯುವಲ್ಲಿ ಮುಂದಿರುತ್ತಾರೆ. ಅದರಿಂದ ಒಳ್ಳೆಯ ಶಿಕ್ಷಕರಾದವರು ವಿದ್ಯಾರ್ಥಿಗಳ ವ್ಯಕ್ತಿತ್ವ ಗುರುತಿಸಿ, ಅವರ ಪ್ರತಿಭೆ ಯಾವ ಕ್ಷೇತ್ರದಲ್ಲಿದೆ ಎಂಬುದನ್ನು ಅರಿತು ಸೂಕ್ತ ವಾತಾವರಣ ಒದಗಿಸಿಕೊಡಬೇಕು. ನೀರಲ್ಲಿ ಈಜುವ ಮೀನನ್ನು ಮರ ಏರಲು ಬಿಟ್ಟಂತಾಗ ಬಾರದು ಎಂದು ಸಲಹೆ ನೀಡಿದರು.

ಮಂಗಳೂರಿನ ಎಜೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಆನಂದ್ ಇಗ್ನೇಷಿಯಸ್ ಪೀಟರ್ ಮಾತನಾಡಿ, ವಿದ್ಯಾರ್ಥಿ ತನ್ನ ಜೀವನದಲ್ಲಿ ದೊಡ್ಡ ದೊಡ್ಡ ಕನಸು ಕಾಣಬೇಕು. ಎಲ್ಲರಿಗೂ ಒಂದಲ್ಲ ಒಂದು ದಿನ ಒಳ್ಳೆ ಕಾಲ ಬಂದೇ ಬರುತ್ತದೆ. ನಮ್ಮ ಬದುಕಿಗೆ ತಿರುವು ನೀಡು ತ್ತದೆ ಎಂಬುದನ್ನು ಮರೆಯಬಾರದು. ಈ ಒಂದು ಸಮಯದಲ್ಲಿ ಕಾಲ ಹರಣ ಮಾಡದೆ ಸದುಪಯೋಗ ಪಡಿಸಿಕೊಳ್ಳ ಬೇಕೆಂದು ಕಿವಿಮಾತು ಹೇಳಿದರು. ಪ್ರತಿ ಯೊಂದು ಕೆಲಸವನ್ನು ಮಾಡುವಾಗ ದೇವ ರನ್ನು ಸ್ಮರಿಸಬೇಕು. ತಪ್ಪುಗಳಾದ ಸಂದರ್ಭ ದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಒಮ್ಮೆ ಮಾಡಿದ ತಪ್ಪು ಪುನಃ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಸಾಧಿಸುವ ಗುರಿ ಇಟ್ಟುಕೊಂಡು ಮುಂದೆ ಸಾಗಬೇಕು. ಕಾರ್ಯ ಚಟುವಟಿಕೆಗಳಲ್ಲಿ ಶಿಸ್ತಿನಿಂದ ಸಕ್ರಿಯರಾಗ ಬೇಕು. ನಿಮ್ಮ ಜೀವನ ನಿಮಗೆ ತೃಪ್ತಿದಾಯಕ ವಾಗಿದೆ ಎಂದು ಅನಿಸಿದಾಗ ಮಾತ್ರ ಪಟ್ಟ ಶ್ರಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಬಳಿಕ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಗಳಾದ ಸ್ಪಂದನಾ ದೇವ್, ಅನೂಪ್‍ಗೌಡ, ಜೆ.ನಿಶಾಂತ್, ಪಿ.ಸುಮಂತ್, ಹಿತಚಂದ್ರನ್, ಟಿ.ಸುರೇಶ್‍ಕುಮಾರ್‍ಅವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.

ಸೈಂಟ್ ಥಾಮಸ್ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಪ್ರಕಾಶ್ ಅಬ್ರಹಾಂ, ಕಾರ್ಯದರ್ಶಿ ಸ್ಯಾಮ್ ಚೆರಿಯಾನ್ ಕುಂಭಕಟ್ಟು, ಖಜಾಂಚಿ ಸಿ.ಎ. ಇಬ್ಬಿ ಈಯಪ್ಪನ್, ವರ್ಗೀಸ್ ಜಾನ್ ಉಪಸ್ಥಿತರಿದ್ದರು.

Translate »