ಮೈಸೂರು: ಸೋಮವಾರಪೇಟೆ ತಾಲೂಕಿನ ಬೆಟ್ಟದಗುಡಿ ಬೆಟ್ಟದಲ್ಲಿ ಹಲ್ಲೆಗೊಳಗಾಗಿ ತೀವ್ರ ಗಾಯಗಳಾಗಿರುವ ರಾಕೇಶ್‍ಗೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಇಂದು ಸಂಜೆ ಶಸ್ತ್ರ ಚಿಕಿತ್ಸೆ ನಡೆಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ತಲೆಗೆ ತೀವ್ರವಾಗಿ ಗಾಯಗಳಾಗಿರುವ ರಾಕೇಶ್‍ನನ್ನು ಆಸ್ಪತ್ರೆಯ ಐಸಿಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಂದು ಸಂಜೆ ಆಪರೇಷನ್ ಮಾಡಲಾಯಿತು ಎಂದು ಕುಟುಂಬದವರು ತಿಳಿಸಿದರು.
ಮೈಸೂರಿನ ಟಿ.ಕೆ.ಲೇಔಟ್‍ನಲ್ಲಿ ಬಾಡಿಗೆ ಕೊಠಡಿ ಮಾಡಿ ಕೊಂಡು ವಾಸಿಸುತ್ತಿದ್ದ ರಾಕೇಶ್, ಸರಸ್ವತಿಪುರಂನಲ್ಲಿರುವ ಎಸ್‍ಬಿಐ ಲೈಫ್‍ನಲ್ಲಿ ವ್ಯವಸ್ಥಾಪಕ ನಾಗಿ ಕೆಲಸ ಮಾಡುತ್ತಿದ್ದ. ಸೋಮವಾರಪೇಟೆ ತಾಲೂಕಿಗೆ ಹೋಗಿದ್ದೇಕೆ, ಹಲ್ಲೆ ನಡೆಸಲು ಕಾರಣ ಏನು ಎಂಬುದು ಗೊತ್ತಿಲ್ಲ ಎಂದು ಆಸ್ಪತ್ರೆ ಬಳಿ ಸಂಬಂಧಿಕರು ತಿಳಿಸಿದ್ದಾರೆ.
ಸದ್ಯಕ್ಕೆ ರಾಕೇಶ್ ಸ್ಥಿತಿ ಸ್ಥಿರವಾಗಿದ್ದು, ಪ್ರಜ್ಞೆ ಮಾತ್ರ ಬಂದಿಲ್ಲ. ಆದ ಕಾರಣ ಹೇಳಿಕೆ ಪಡೆಯಲು ಬಂದಿದ್ದ ಪೊಲೀಸರು ವಾಪಸ್ ಹೋದರು ಎಂದು ಅವರು ತಿಳಿಸಿದರು.