ಮೈಸೂರು,ಆ.11(ಪಿಎಂ)-ಜಿಲ್ಲೆಯ ಸರಗೂರು ಹಾಗೂ ಬಿದರಹಳ್ಳಿಯ ಪ್ರವಾಹ ಸಂತ್ರಸ್ತರ ಕೇಂದ್ರಗಳಲ್ಲಿ ಮೈಸೂರಿನ ಕೆಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನು ಭಾನುವಾರ ವಿತರಿಸಲಾಯಿತು.
ಲೆಟ್ಸ್ ಡು ಇಟ್, ಜಿಎಸ್‍ಎಸ್ ಫೌಂಡೇ ಷನ್, ಆಸರೆ ಫೌಂಡೇಷನ್ ಸಂಯುಕ್ತಾ ಶ್ರಯದಲ್ಲಿ ದಾನಿಗಳಿಂದ ಸಂಗ್ರಹಿಸಿದ್ದ 2 ಸಾವಿರ ರಗ್ಗುಗಳು, 25 ಕೆಜಿಯ 25 ಅಕ್ಕಿ ಪೊಟ್ಟಣಗಳು ಸೇರಿದಂತೆ ಕಂಬಳಿ ಗಳು, ಲುಂಗಿ, ಟವಲ್, ಟೂತ್ ಪೇಸ್ಟ್, ಟೂತ್ ಬ್ರಷ್, ಸಾಬೂನು, ಚಪ್ಪಲಿ, ಸೊಳ್ಳೆ ಬತ್ತಿ, ಬಿಸ್ಕತ್, ಜ್ಯೂಸ್, ಹಾಲು, ಹಣ್ಣು ಸೇರಿದಂತೆ ಅಗತ್ಯ ಸಾಮಾಗ್ರಿ ಗಳನ್ನು ಸುಮಾರು 280 ಸಂತ್ರಸ್ತ ಕುಟುಂಬಗಳಿಗೆ ವಿತರಣೆ ಮಾಡಲಾಯಿತು.
ಇದೇ ವೇಳೆ ಶಾಸಕ ಎಸ್.ಎ.ರಾಮ ದಾಸ್ ಮಾತನಾಡಿ, ನಾವು ಪ್ರಕೃತಿಯ ವಿರುದ್ಧವಾಗಿ ಹೋದಾಗ ಇಂತಹ ಅನಾ ಹುತಗಳು ಸಂಭವಿಸುತ್ತದೆ. ಆದರೆ, ನೀವು ಯೋಚಿಸಬೇಡಿ ನಿಮ್ಮ ಜೊತೆ ನಾವು ಸದಾಇದ್ದೇವೆ ಎಂದು ಧೈರ್ಯ ತುಂಬಿದರು.
ಜಿಎಸ್‍ಎಸ್ ಫೌಂಡೇಷನ್ ಸಂಸ್ಥಾ ಪಕ ಶ್ರೀಹರಿ, ಸೇಫ್ ವೀಲ್ಸ್ ಮುಖ್ಯಸ್ಥ ಪ್ರಶಾಂತ್, ಮುಖಂಡ ಕಾಂತರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.