ಬ್ರಾಹ್ಮಣ ಸಂಘದಿಂದ ನೆರೆ ಸಂತ್ರಸ್ತರಿಗೆ ನೆರವು
ಮೈಸೂರು

ಬ್ರಾಹ್ಮಣ ಸಂಘದಿಂದ ನೆರೆ ಸಂತ್ರಸ್ತರಿಗೆ ನೆರವು

August 12, 2019

ಮೈಸೂರು,ಆ.11(ಪಿಎಂ)-ನೆರೆ ಹಾವ ಳಿಗೆ ಸಿಲುಕಿ ಕಂಗಾಲಾಗಿರುವ ಸಂತ್ರಸ್ತರಿಗೆ ನೆರವು ನೀಡಲು ನಗರದ ವಿವಿಧ ಸಂಘ-ಸಂಸ್ಥೆಗಳು ಮುಂದಾಗಿದ್ದು, ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ತಲುಪಿಸುವ ಕಾರ್ಯ ನಡೆಸಿವೆ.

ಬ್ರಾಹ್ಮಣ ಸಂಘ: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ, ಉತ್ತರಾದಿ ಮಠದ ಜಂಟಿ ಆಶ್ರಯದಲ್ಲಿ 5 ಲಕ್ಷ ರೂ. ಮೌಲ್ಯದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡ ಲಾಯಿತು. ವಿಪ್ರ ಸಂಘ-ಸಂಸ್ಥೆಗಳು ಹಾಗೂ ಸಮುದಾಯದ ಜನತೆಯಿಂದ ಸಂಗ್ರಹಿ ಸಿದ್ದ ನಿತ್ಯ ಬಳಕೆ ವಸ್ತುಗಳು, ಅಡುಗೆ ಪದಾರ್ಥಗಳು ಹಾಗೂ ಬಟ್ಟೆ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಅವರ ನೇತೃತ್ವದಲ್ಲಿ ಕಳುಹಿಸಿಕೊಡಲಾಯಿತು.

ಮೈಸೂರಿನ ಚಾಮುಂಡಿಪುರಂನಲ್ಲಿ ರುವ ಉತ್ತರಾದಿಮಠದ ಪಾಠಶಾಲೆಯಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟು ಭಾನು ವಾರ ಕಳುಹಿಸಿಕೊಡಲಾಯಿತು.

ಇದೊಂದು ಅಭಿಯಾನ: ಇದೇ ವೇಳೆ ಡಿ.ಟಿ.ಪ್ರಕಾಶ್ ಮಾತನಾಡಿ, ಉತ್ತರ ಕರ್ನಾ ಟಕ, ಮೈಸೂರು ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ನೆರೆ ಪ್ರದೇಶಗಳಲ್ಲಿ ಸರ್ಕಾರದ ವತಿಯಿಂದ ತೆರೆದಿರುವ ಕೇಂದ್ರಗಳಿಗೆ ಸಾಮಗ್ರಿಗಳು ತಲುಪಲಿವೆ. ನೆರವು ನೀಡುವ ಕಾರ್ಯ ಇಷ್ಟಕ್ಕೆ ನಿಲ್ಲುವುದಿಲ್ಲ. `ಬ್ರಾಹ್ಮಣರ ನಡಿಗೆ ನೆರೆ ಸಂತ್ರಸ್ತರ ಕಡೆಗೆ’ ಶೀರ್ಷಿಕೆಯಡಿ ಅಭಿಯಾನವನ್ನೇ ಆರಂಭಿಸಿದ್ದು, ನೆರವಿನ ಕಾರ್ಯ ನಮ್ಮ ಸಂಘಟನೆಗಳ ಮೂಲಕ ಮುಂದುವರೆ ಯಲಿದೆ ಎಂದು ತಿಳಿಸಿದರು.

ನೆರೆ ಹಾವಳಿ ಹಿನ್ನೆಲೆಯಲ್ಲಿ ಜೀವ ಸಂಕುಲ ನಲುಗುವಂತಾಗಿದೆ. ಇಂತಹ ಸಂದರ್ಭದಲ್ಲಿ ಸಹಾಯ ಹಸ್ತ ಚಾಚು ವುದು ನಮ್ಮೆಲ್ಲರ ಕರ್ತವ್ಯ. ಮಾನವೀ ಯತೆ ಮೆರೆಯುವುದೇ ನಿಜವಾದ ಧರ್ಮ. ಸಾಮಾಜಿಕ ಕಳಕಳಿಯ ನಿಟ್ಟಿನಲ್ಲಿ ನಮ್ಮ ಬ್ರಾಹ್ಮಣ ಸಮುದಾಯ ಉದಾರವಾಗಿ ನೆರವು ನೀಡಿದೆ ಎಂದರು.

ಪಾಲಿಕೆ ಸದಸ್ಯ ಮಾ.ವಿ.ರಾಮ್‍ಪ್ರಸಾದ್, ಸಂಘದ ಗ್ರಾಮಾಂತರ ಅಧ್ಯಕ್ಷ ಗೋಪಾಲ್‍ರಾವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಕಾರ್ಯ ದರ್ಶಿ ವಿ.ಹರೀಶ್, ಬ್ರಾಹ್ಮಣ ಯುವ ಮುಖಂಡ ವಿಕ್ರಂ ಅಯ್ಯಂಗಾರ್, ಮುಖಂಡರಾದ ಕಡಕೊಳ ಜಗದೀಶ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಅಪೂರ್ವ ಸುರೇಶ್, ಚಕ್ರಪಾಣಿ, ನಾಗಶ್ರೀ, ಸುಚೀಂದ್ರ, ಗಣೇಶ್ ಪ್ರಸಾದ್, ಉತ್ತರಾದಿ ಮಠದ ಅನಿರುದ್ಧ ಆಚಾರ್ಯ, ಕೃಷ್ಣ ಮತ್ತಿತರರು ಹಾಜರಿದ್ದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ನೆರವು: ರಾಜ್ಯದ ವಿವಿಧೆಡೆ ತಲೆದೋರಿರುವ ಭೀಕರ ಪ್ರವಾಹದ ಹಿನ್ನೆಲೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ವೈಯಕ್ತಿಕ 2 ಲಕ್ಷ ರೂ. ಜತೆಗೆ ವಿವಿಧ ದಾನಿಗಳಿಂದ ಆಹಾರ ಧಾನ್ಯಗಳು, ಮೂಲಭೂತ ವಸ್ತುಗಳ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಬಂಡಿ ಪಾಳ್ಯದ ಎಪಿಎಂಸಿ ಮಾರುಕಟ್ಟೆಯಲ್ಲಿ ಚಾಲನೆ ನೀಡಲಾಯಿತು.

ಉದ್ಯಮಿಗಳಾದ ರಂಜನ್, ಪವನ್, ಕಾಂಗ್ರೆಸ್ ಮುಖಂಡರಾದ ವಸಂತ್, ಸಂತೋಷ್, ಗುಣಶೇಖರ್, ಪುನೀತ್, ಎನ್.ಹೆಚ್.ಪಾಳ್ಯ, ಮಹೇಂದ್ರ ಮತ್ತಿ ತರರು ಉಪಸ್ಥಿತರಿದ್ದರು.

ಪ್ರಮೀಳಾ ಭರತ್ ನೇತೃತ್ವದಲ್ಲಿ ನೆರವು: ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ತಮ್ಮ ಒಂದು ತಿಂಗಳ ಗೌರವಧನವನ್ನು ಪ್ರವಾಹ ಸಂತ್ರಸ್ತರ ನೆರವಿಗೆ ನೀಡುವುದಾಗಿ ಪ್ರಕಟಿಸಿದ್ದು, ಜೊತೆಗೆ ತಮ್ಮ ವಾರ್ಡಿನ ವ್ಯಾಪ್ತಿಯ ಹಳೆ ಸಂತೆಪೇಟೆಯಲ್ಲಿ ವರ್ತಕ ರಿಂದ ನೆರೆ ಪ್ರದೇಶಗಳಿಗೆ ತಲುಪಿಸಲು ಅಗತ್ಯ ವಸ್ತುಗಳನ್ನು ಭಾನುವಾರ ಸಂಗ್ರಹಿಸಿದರು.

ವಾರ್ಡಿನ ಸಾರ್ವಜನಿಕರ ಜೊತೆ ಗೂಡಿ ವರ್ತಕರಿಂದ ಚಾಪೆ, ನೀರಿನ ಬಾಟಲಿಗಳು, ಬೆಟ್‍ಶೀಟ್‍ಗಳು, ಬಿಸ್ಕತ್ ಪೊಟ್ಟಣ, ಲೋಟ, ಅಕ್ಕಿ, ಗೋಧಿಹಿಟ್ಟು ಸೇರಿದಂತೆ ಅಗತ್ಯ ವಸ್ತು ಹಾಗೂ ದಾನ್ಯ ಗಳನ್ನು ಸಂಗ್ರಹಿಸಲಾಯಿತು. ಮೈಸೂರಿನ ಪುರಭವನದಲ್ಲಿ ಜಿಲ್ಲಾಡಳಿತದಿಂದ ತೆರೆದಿರುವ ಸಾಮಗ್ರಿ ಸಂಗ್ರಹ ಕೇಂದ್ರಕ್ಕೆ ತಲುಪಿಸುವುದಾಗಿ ಅವರು ತಿಳಿಸಿದರು.

ಪ್ರಮೀಳಾ ಭರತ್ ಅವರ ಪತಿ ಭರತ್, ಮುಖಂಡರಾದ ಸುರೇಂದ್ರ, ಸುದರ್ಶನ್, ವಿಘ್ನೇಶ್ವರ್, ಶ್ರೀನಿವಾಸ್, ಪುರು ಷೋತ್ತಮ್, ಚರಣ್, ಗೋಪಿ, ವಿಷ್ಣುಕುಮಾರ್, ಸಚಿನ್, ನವೀನ್, ರಚನಾ, ರೇಣುಕಾ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಜೊತೆಗೆ ಅನೇಕ ಸಂಘ-ಸಂಸ್ಥೆಗಳು ಸಂತ್ರಸ್ತರ ನೆರವಿಗೆ ಮುಂದಾಗಿವೆ.

Translate »