ಸಂತ್ರಸ್ತರಿಗಾಗಿ ಹರಿದು ಬರುತ್ತಿದೆ ನೆರವಿನ ಮಹಾಪೂರ
ಮೈಸೂರು

ಸಂತ್ರಸ್ತರಿಗಾಗಿ ಹರಿದು ಬರುತ್ತಿದೆ ನೆರವಿನ ಮಹಾಪೂರ

August 12, 2019

ಮೈಸೂರು,ಆ.11(ಎಂಟಿವೈ)-ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ನೆರೆ ಪೀಡಿತ ಜಿಲ್ಲೆಗಳ ಸಂತ್ರಸ್ತರಿಗೆ ನೆರವಾಗಲು ಮೈಸೂರಿನ ಜನತೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದು, ಜಿಲ್ಲಾಡ ಳಿತ ಮೈಸೂರಿನ ಪುರಭವನದಲ್ಲಿ ತೆರೆದಿ ರುವ ಅಗತ್ಯ ವಸ್ತುಗಳ ಸಂಗ್ರಹ ಕೇಂದ್ರಕ್ಕೆ ತಮ್ಮ ಶಕ್ತ್ಯಾನುಸಾರ ಧಾನ್ಯ ಸೇರಿದಂತೆ ವಿವಿಧ ವಸ್ತುಗಳನ್ನು ನೀಡುವ ಮೂಲಕ ಉದಾರತೆ ಪ್ರದರ್ಶಿಸುತ್ತಿದ್ದಾರೆ.

ಉತ್ತರ ಕರ್ನಾಟಕ ಹಾಗೂ ಕೊಡಗು ಹಲವು ನದಿಗಳು ಉಕ್ಕಿ ಹರಿಯುತ್ತಿರುವು ದರಿಂದ ಮೈಸೂರು, ಕೊಡಗು, ಹಾಸನ, ಮಂಡ್ಯ ಸೇರಿದಂತೆ ರಾಜ್ಯದ 18 ಜಿಲ್ಲೆ ಗಳಲ್ಲಿ ನೆರೆ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಸಾವಿರಾರು ಕುಟುಂಬಗಳು ತೊಂದರೆಗೀ ಡಾಗಿವೆ. ಮನೆ-ಮಠ, ಆಸ್ತಿ-ಪಾಸ್ತಿ, ಜಾನು ವಾರುಗಳನ್ನು ಕಳೆದುಕೊಂಡಿರುವ ಜನರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಮಿತಿ ಮೀರಿದ ಪ್ರಮಾಣದಲ್ಲಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿರುವುದರಿಂದ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಜನರು ಸಂಕಷ್ಟದಲ್ಲಿ ಸಿಲುಕಿರುವ ವರ ದುಖಃದಲ್ಲಿ ಭಾಗಿಯಾಗುವುದ ರೊಂದಿಗೆ ಆತ್ಮಸ್ಥೈರ್ಯ ನೀಡಲು ಮುಂದಾಗಿದ್ದಾರೆ. ಮೈಸೂರಿನಲ್ಲಿ ವಿವಿಧ ಖಾಸಗಿ ಸಂಸ್ಥೆಗಳು ನೆರೆ ಸಂತ್ರಸ್ತರ ನೆರವಿ ಗಾಗಿ ಸಾರ್ವಜನಿಕರಿಂದ ಅಗತ್ಯ ವಸ್ತು ಹಾಗೂ ಚಂದಾ ಸಂಗ್ರಹಿಸುತ್ತಿವೆ. ಇದರೊಂದಿಗೆ ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕ ರಿಂದ ಅಗತ್ಯ ವಸ್ತು, ಧಾನ್ಯ, ಉಡುಪು ಸೇರಿ ದಂತೆ ಇನ್ನಿತರ ವಸ್ತುಗಳನ್ನು ಸಂಗ್ರಹಿಸಲು ಪುರಭವನದಲ್ಲಿ ಕೇಂದ್ರವನ್ನು ತೆರೆದಿದೆ.

ನೆರೆ ಸಂತ್ರಸ್ತರಿಗೆ ನೆರವಾಗುವಂತೆ ಜಿಲ್ಲಾಡಳಿತ ನೀಡಿದ ಕರೆಗೆ ಮೈಸೂರಿನ ಜನತೆ ಸಕಾರಾತ್ಮಕವಾಗಿ ಸ್ಪಂಧಿಸುತ್ತಿದ್ದಾರೆ. ಮೊದಲ ದಿನವೇ(ಶನಿವಾರ) ಮೂರು ಲಾರಿಗಳಷ್ಟು ಅಗತ್ಯ ವಸ್ತುಗಳನ್ನು ಉತ್ತರ ಕರ್ನಾಟಕಕ್ಕೆ ಕಳುಹಿಸಿಕೊಡಲಾಗಿತ್ತು. ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ತಹ ಶೀಲ್ದಾರ್ ಟಿ.ರಮೇಶ್ ಬಾಬು, ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ. ನಾಗರಾಜು ಹಾಗೂ ಇನ್ನಿತರರು ಮೂರು ಲಾರಿ ಗಳನ್ನು ಬೀಳ್ಕೊಟ್ಟಿದ್ದರು.

ಭಾನುವಾರವೂ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಪುರಭವನಕ್ಕೆ ತಂದು ಕೊಡುವ ಮೂಲಕ ಮಾನವೀಯತೆ ಮೆರೆದರು. ಕನಕ ವೈದ್ಯರ ಬಳಗದ ಮೈಸೂರು ಘಟಕದ ಸದಸ್ಯರು ಬಳಗದ ರಾಜ್ಯ ಕಾರ್ಯದರ್ಶಿ ಡಾ.ಭರತ್ ಕುಮಾರ್, ಡಾ.ನರೇಂದ್ರ, ಡಾ.ರವಿಶಂಕರ್, ಡಾ. ರಾಮು ಹಾಗೂ ಇನ್ನಿತರರ ನೇತೃತ್ವದಲ್ಲಿ ಅಗತ್ಯ ಔಷಧಿ, ಅಕ್ಕಿ, ಬೆಡ್‍ಶೀಟ್, ಅಡುಗೆ ಎಣ್ಣೆ, ಬಕೆಟ್, ಟವಲ್, ಲುಂಗಿ, ನೈಟಿ, ಸೀರೆ ಹಾಗೂ ಇನ್ನಿತರ ವಸ್ತುಗಳನ್ನು ದಾನ ನೀಡುವ ಮೂಲಕ ಗಮನ ಸೆಳೆದರು.

ಬಿ.ಎಂ.ಶ್ರೀ ನಗರದ ಸ್ನೇಹ ಜೀವಿ ಗ್ರೂಪ್ ಸದಸ್ಯರು ಬಿಸ್ಕೆಟ್, ಪೇಸ್ಟ್, ಬ್ರೆಷ್, ಡೆಟಾಯಲ್ ಸೋಪ್, ಅಕ್ಕಿ, ಪ್ಲಾಸ್ಟಿಕ್ ಬಕೆಟ್, ಜಗ್ಗು ಹಾಗೂ ಇನ್ನಿತರ ವಸ್ತು ಗಳನ್ನು ನೀಡಿದರು. ಇದಲ್ಲದೆ ಮಧ್ಯಮ ವರ್ಗದ ಜನರು ತಮ್ಮ ಶಕ್ತಿಯಾನುಸಾರ ಬೆಟ್‍ಶೀಟ್, ಶಾಲು, ಪ್ಲಾಸ್ಟಿಕ್ ಚಾಪೆ, ಅಕ್ಕಿ, ತೊಗರಿ ಬೇಳೆ, ಸಾಂಬಾರ್ ಪುಡಿ, ಪೆಪರ್‍ಮೆಂಟ್, ಚಾಕಲೇಟ್, ಮಕ್ಕಳ ಉಡುಪು, ಸಾಕ್ಸ್, ಗ್ಲೌಸ್, ಸ್ವೆಟರ್, ಸೀರೆ, ಲಂಗ, ಜಾಕೆಟ್ ಸೇರಿದಂತೆ ಅಗತ್ಯ ವಸ್ತು ಗಳನ್ನು ನೀಡುತ್ತಿದ್ದಾರೆ. ಭಾನುವಾರ ದಿನ ವಿಡೀ ಸುಮಾರು ಒಂದು ಲಾರಿಯಷ್ಟು ವಸ್ತುಗಳು ಸಂಗ್ರಹವಾಗಿವೆ. ಸಂತ್ರಸ್ತ ಜಿಲ್ಲೆಗಳ ಅಧಿಕಾರಿಗಳಿಂದ ಬಂದ ಬೇಡಿಕೆ ಅನು ಸಾರವಾಗಿ ನಾಳೆ ಬೆಳಿಗ್ಗೆ ಮೈಸೂರಿನಿಂದ ವಸ್ತುಗಳನ್ನು ರವಾನಿಸಲಾಗುತ್ತದೆ.

ಈ ಬಾರಿ ಮೈಸೂರಿನ ಜನತೆ ಹಳೆ ಬಟ್ಟೆ ನೀಡದೆ ಹೊಸ ಹೊಸ ಬಟ್ಟೆಯನ್ನೇ ನೀಡುವ ಮೂಲಕ ಕಷ್ಟದಲ್ಲಿರುವ ಜನರ ನೋವಿ ನಲ್ಲಿ ಭಾಗಿಯಾಗುತ್ತಿದ್ದಾರೆ. ನೀರಿನ ಬಾಟಲ್ ಗಳ ಸಂಖ್ಯೆಯೂ ಹೆಚ್ಚಾಗಿದ್ದು, ಸಂತ್ರಸ್ತರಿಗೆ ನೆರವಾಗಲು ಮೈಸೂರಿನ ಜನತೆ ಹೃದಯ ವೈಶಾಲ್ಯತೆ ಪ್ರದರ್ಶಿಸುತ್ತಿದ್ದಾರೆ. ಪುರಭವನದಲ್ಲಿ ಪಾಲಿಕೆಯ 8 ಮಂದಿ ಸಿಬ್ಬಂದಿಗಳು ಆರೋ ಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ನೇತೃತ್ವ ದಲ್ಲಿ ಅಗತ್ಯ ವಸ್ತುಗಳನ್ನು ಸಾರ್ವಜನಿ ಕರಿಂದ ಸಂಗ್ರಹಿಸುತ್ತಿದ್ದು, ಎಲ್ಲರಿಗೂ ಸ್ವೀಕೃತಿ ಪತ್ರ ನೀಡಲಾಗುತ್ತಿದೆ. ಅಲ್ಲದೆ ದಾನಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಸ್ತು ಗಳ ವಿವರವನ್ನು ಸಂಗ್ರಹಿಸಲಾಗುತ್ತಿದೆ.

Translate »