ಶಾಸಕ ಎಲ್.ನಾಗೇಂದ್ರರಿಂದ ಮಣ್ಣಿನ ದೀಪಗಳ ವಿತರಣೆ
ಮೈಸೂರು

ಶಾಸಕ ಎಲ್.ನಾಗೇಂದ್ರರಿಂದ ಮಣ್ಣಿನ ದೀಪಗಳ ವಿತರಣೆ

November 8, 2018

ಮೈಸೂರು:  ಪಟಾಕಿಗೆ ಆದ್ಯತೆ ನೀಡದೇ ದೀಪಾವಳಿ ಹಬ್ಬವನ್ನು ದೀಪ ಬೆಳಗುವ ಮೂಲಕ ಸುರಕ್ಷಿತವಾಗಿ ಆಚರಿಸುವಂತೆ ಅರಿವು ಸಂಸ್ಥೆ ವತಿಯಿಂದ ಮಂಗಳವಾರ ಸಾರ್ವಜನಿಕರಿಗೆ ಉಚಿತವಾಗಿ ಮಣ್ಣಿನ ದೀಪಗಳನ್ನು ವಿತರಿಸಲಾಯಿತು.

ಮೈಸೂರಿನ ಚಿಕ್ಕಗಡಿಯಾರದ ಆವರಣದಲ್ಲಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ ಅತಿಥಿಯಾಗಿ ಪಾಲ್ಗೊಂಡು ಸಾರ್ವಜನಿಕರಿಗೆ ಮಣ್ಣಿನ ಹಣತೆಗಳನ್ನು ನೀಡಿ ದೀಪದಿಂದ ದೀಪ ಹಚ್ಚಿ ದೀಪಾ ವಳಿ ಆಚರಿಸಿ ಎಂಬ ಸಂದೇಶ ಸಾರಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ಗಳನ್ನು ತ್ಯಜಿಸಿ ದೀಪಗಳನ್ನು ಬೆಳಗುವ ಮೂಲಕ ದೀಪಾ ವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಮೈಸೂರು ಪ್ರಜ್ಞಾವಂತ ಜನತೆ ಮುಂದಾಗಬೇಕು. ಮೈಸೂರು ಒಳ್ಳೆಯ ಪರಿಸರ ಹಾಗೂ ಪ್ರಾಕೃತಿಕ ಸೌಂದರ್ಯ ಹೊಂದಿದ್ದು, ಇದನ್ನು ಉಳಿಸುವ ನಿಟ್ಟಿನಲ್ಲಿ ಪಟಾಕಿಯಿಂದ ಮಾಲಿನ್ಯಕ್ಕೆ ಆಸ್ಪದ ಮಾಡಿಕೊಡಬಾರದು ಎಂದು ಮನವಿ ಮಾಡಿದರು.

ನೆರೆ ಜಿಲ್ಲೆ ಕೊಡಗು ಇತ್ತೀಚೆಗಷ್ಟೇ ನೆರೆ ಹಾವಳಿಯಿಂದ ತತ್ತರಿಸಿದ್ದು, ಪಟಾಕಿಗೆ ವೆಚ್ಚ ಮಾಡುವ ಹಣವನ್ನು ಕೊಡಗು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿದರೆ ಸಾರ್ಥಕವಾಗ ಲಿದೆ. ಈ ನಿಟ್ಟಿನಲ್ಲಿ ನಮ್ಮ ಜನತೆ ಯೋಚನೆ ಮಾಡಬೇಕು. ಪಟಾಕಿಯಿಂದ ಪರಿಸರ ಮಾಲಿನ್ಯ ಮಾತ್ರವಲ್ಲ ಶಬ್ದ ಮಾಲಿ ನ್ಯವೂ ಉಂಟಾಗಲಿದೆ. ಮಕ್ಕಳು, ವೃದ್ಧರು ಹಾಗೂ ಅನಾ ರೋಗ್ಯ ಪೀಡಿತರಿಗೆ ಸಮಸ್ಯೆಯಾಗಲಿದೆ. ದೀಪ ಬೆಳಗಿ ಹಬ್ಬ ಆಚರಿಸಲು ಜನತೆ ಮುಂದಾಗಬೇಕೆಂದು ಕರೆ ನೀಡಿದರು.

ಹಿರಿಯ ಸಮಾಜ ಸೇವಕ ರಘುರಾಮ್ ವಾಜಪೇಯಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ ದಿಂದ ದೆಹಲಿ ಸೇರಿದಂತೆ ವಿವಿಧ ಮಹಾನಗರಗಳಲ್ಲಿ ಜನರಿಗೆ ಉಸಿರಾಟ, ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ ಗಳು ವ್ಯಾಪಕವಾಗುತ್ತಿವೆ. ಕೇವಲ ದೀಪಾವಳಿಯಲ್ಲಿ ಮಾತ್ರ ವಲ್ಲದೆ, ವಿವಿಧ ಖಾಸಗಿ ಸಂಭ್ರಮಾಚರಣೆಗಳಿಗೂ ಪಟಾಕಿ ಸಿಡಿಸುವ ಪರಿಪಾಠ ಬೆಳೆದು ಬರುತ್ತಿದೆ. ಇದಕ್ಕೆ ಸರ್ಕಾರ ನಿರ್ಬಂಧ ವಿಧಿಸಬೇಕು. ಅಲ್ಲದೇ ದೀಪಾವಳಿ ಬೆಳಕಿನ ಹಬ್ಬ ವಾಗಿದ್ದು, ದೀಪಗಳನ್ನು ಬೆಳಗಿಸುವ ಮೂಲಕ ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿ ದರು. ಇದೇ ವೇಳೆ ಉಚಿತ ಮಣ್ಣಿನ ಹಣತೆಗಳೊಂದಿಗೆ ಪಟಾಕಿಯ ದುಷ್ಪರಿಣಾಮಗಳ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು. ಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು, ಜನ ಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನಗೌಡ, ಪಾಲಿಕೆ ಮಾಜಿ ಸದಸ್ಯ ಪಾರ್ಥಸಾರಥಿ, ಬಿಎಸ್‍ಪಿ ನಗರಾಧ್ಯಕ್ಷ ಡಾ.ಎಂ.ಬಸವರಾಜು, ಅರಿವು ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಬ್ರಾಹ್ಮಣ ಸಮು ದಾಯ ಯುವ ಮುಖಂಡ ವಿಕ್ರಂ ಅಯ್ಯಂಗಾರ್ ಇದ್ದರು.

Translate »