ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಸಚಿವ ಸಾರಾ ಕೆಂಡಾಮಂಡಲ
ಮೈಸೂರು

ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಸಚಿವ ಸಾರಾ ಕೆಂಡಾಮಂಡಲ

November 8, 2018

ಮೈಸೂರು:  ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಭವನ ಆವರಣದಲ್ಲಿ ನಿರ್ಮಿಸಲಾಗಿರುವ ಮಹಾತ್ಮ ಗಾಂಧೀಜಿ ಅವರ ವಿವಿಧ ಕಲಾಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಹಾಗೂ ಕೈಪಿಡಿಯಲ್ಲಿ ಹೆಸರು ನಮೂದಿಸದೆ ಇರುವುದನ್ನು ಆಕ್ಷೇಪಿಸಿದ ಸಚಿವ ಸಾ.ರಾ.ಮಹೇಶ್ ಅವರು ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡು ಕಾರ್ಯ ಕ್ರಮದಿಂದ ನಿರ್ಗಮಿಸಿದರು.

ಗಾಂಧಿ ಭವನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಮೈಸೂರು ವಿವಿ, ರಂಗಾಯಣ ಸಹಯೋಗದಲ್ಲಿ ಗಾಂಧೀಜಿ ಅವರ ಸಿಮೆಂಟ್ ಶಿಲ್ಪಗಳನ್ನು ನಿರ್ಮಿಸ ಲಾಗಿದ್ದು, ಇದರ ಲೋಕಾರ್ಪಣೆಗೆ ಸಚಿವ ಜಿ.ಟಿ.ದೇವೇಗೌಡ ಅವರೊಂದಿಗೆ ಬಂದಿದ್ದ ಸಾ.ರಾ. ಮಹೇಶ್, ಆಹ್ವಾನ ಪತ್ರಿಕೆ ಹಾಗೂ ಕೈಪಿಡಿಯಲ್ಲಿ ತಮ್ಮ ಹೆಸರಿಲ್ಲದನ್ನು ಕಂಡು ಸಿಟ್ಟಾದರು. ವಿವಿ ಕುಲಸಚಿವ ಪೆÇ್ರ.ಆರ್.ರಾಜಣ್ಣ ಅವರನ್ನು ತರಾಟೆ ತೆಗೆದುಕೊಂಡರು. ಬೇರೆ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ ಅರ್ಧಕ್ಕೇ ತೆರಳುತ್ತಿz್ದÉೀನೆ ಎಂದು ತಮ್ಮ ಬೆಂಬಲಿಗರಿಗೆ ತಿಳಿಸಿ ನಿರ್ಗಮಿಸಿದರು.

ಗಾಂಧೀಜಿ ಅವರ ಸಿಮೆಂಟ್ ಶಿಲ್ಪಗಳನ್ನು ಲೋಕಾರ್ಪಣೆಗೊಳಿಸುವ ಸಂದರ್ಭದಲ್ಲಿ ಎಲ್ಲಾ ಶಿಲ್ಪಗಳನ್ನು ಇಬ್ಬರು ಸಚಿವರು ವೀಕ್ಷಣೆ ಮಾಡುತ್ತಿದ್ದರು. ಅದೇ ವೇಳೆ ಆಹ್ವಾನ ಪತ್ರಿಕೆ ಹಾಗೂ ಕೈಪಿಡಿಯತ್ತ ಕಣ್ಣು ಹಾಯಿಸಿದ ಸಚಿವ ಸಾ.ರಾ.ಮಹೇಶ್, ಕೈಪಿಡಿಯಲ್ಲಿ ಅಧಿಕಾರಿಗಳ ಭಾವಚಿತ್ರವೇ ರಾರಾಜಿಸುತ್ತಿದ್ದದ್ದನ್ನು ಕಂಡರು. ಜತೆಗೆ ತಮ್ಮ ಹೆಸರು ಇಲ್ಲದಿರುವುದನ್ನು ಆಕ್ಷೇಪಿಸಿ ಕುಲ ಸಚಿವ ಪೆÇ್ರ.ಆರ್. ರಾಜಣ್ಣ ವಿರುದ್ಧ ಕೆಂಡಾಮಂಡಲವಾದರು. ಗಾಂಧೀಜಿ ಅವರ ಕಲಾಕೃತಿ ನಿರ್ಮಿಸುವುದಕ್ಕೆ ಸರ್ಕಾರ ಅನುದಾನ ನೀಡಿದೆ. ಅಧಿಕಾರಿಗಳು ಕೈಯಿಂದ ಹಣ ಹಾಕಿಲ್ಲ. ಸೌಜನ್ಯಕ್ಕಾದರೂ ನನ್ನ ಹೆಸರು ಹಾಕಿಲ್ಲ. ನೀವೇನು ರಾಜಕೀಯ ಮಾಡುವುದಕ್ಕೆ ಬಂದಿದ್ದೀರಾ? ರಾಜ ಕೀಯ ಮಾಡುವ ಆಸೆ ಇದ್ದರೆ ನಿಮ್ಮ ಸ್ಥಾನ ಗಳಿಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬನ್ನಿ. ಈ ಸ್ಥಾನ ಏಕೆ ಬೇಕು? ನಿಮ್ಮ ಸ್ವಂತ ಹಣ ಹಾಕಿಕೊಂಡು ರಾಜಕೀಯ ಮಾಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಗಮನಿಸಿದ ಜಿಲ್ಲಾ ಉಸ್ತು ವಾರಿ ಜಿ.ಟಿ.ದೇವೇಗೌಡ ಕೋಪಗೊಂಡಿದ್ದ ಸಾ.ರಾ.ಮಹೇಶ್ ಅವರನ್ನು ಮಹೇಶ ಬಾರೋ ಎಂದು ಜೋರಾಗಿ ಕೂಗಿ ಕರೆದರು. ಅದಕ್ಕೆ ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್, “ಅಣ್ಣ ನೀವು ಕಾರ್ಯಕ್ರಮ ಮುಗಿಸಿಕೊಂಡು ಬನ್ನಿ, ನನಗೆ ಬೇರೆ ಕೆಲಸ ಇದೆ. ನಂತರ ಇಲ್ಲೇ ಬಂದು ಸಿಗುತ್ತೇನೆ” ಎಂದು ಹೊರಟು ಹೋದರು. ಈ ಘಟನೆ ಅಧಿಕಾರಿಗಳಿಗೆ ಇರಿಸು ಮುರಿಸು ಉಂಟು ಮಾಡಿತು.

Translate »