ಸರ್ಕಾರಿ ಶಾಲೆಗಳಿಗೆ ಸ್ವಚ್ಛ ಶೌಚಾಲಯ ಕಿಟ್ ವಿತರಣೆ
ಮೈಸೂರು

ಸರ್ಕಾರಿ ಶಾಲೆಗಳಿಗೆ ಸ್ವಚ್ಛ ಶೌಚಾಲಯ ಕಿಟ್ ವಿತರಣೆ

August 25, 2019

ಮೈಸೂರು, ಆ.24(ಎಂಕೆ)- ಮೈಸೂರಿನ ನಂಜುಮಳಿಗೆಯಲ್ಲಿರುವ ಗೋಪಾಲ ಸ್ವಾಮಿ ಶಿಶುವಿಹಾರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರುಗಳ ಸಂಘ ಹಾಗೂ ಕ್ಯಾರಿ ಬ್ಯಾಗ್ ಫೌಂಡೇ ಷನ್ ಆಫ್ ಬೆಂಗಳೂರು ವತಿ ಯಿಂದ ಮೈಸೂರು ನಗರ ದಕ್ಷಿಣ ವಲಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸ್ವಚ್ಛ ಶೌಚಾಲಯ ಕಿಟ್ ವಿತರಣಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಿಟ್ ವಿತರಿಸಿದ ಬಳಿಕ ಮೈಸೂರು ತಾಲೂಕು ಕೇತ್ರ ಶಿಕ್ಷಣಾಧಿಕಾರಿ ಕೃಷ್ಣ ಮಾತನಾಡಿ, ಒಂದು ಪರಿಪೂರ್ಣ ಮಾದರಿ  ಶಾಲೆಯಾಗಲು ಸ್ವಚ್ಛ ಗುಣಾತ್ಮಕ ಶೌಚಾಲಯ ಅತ್ಯಗತ್ಯವಾಗಿದೆ. ಶೌಚಾಲಯ ಸ್ವಚ್ಛತೆಗೆ ಮಕ್ಕಳನ್ನು ಬಳಸದೇ ಸ್ಥಳೀಯ ಪಂಚಾಯಿತಿ, ಮಹಾನಗರ ಪಾಲಿಕೆ ಸ್ವಚ್ಛತಾ ಸಿಬ್ಬಂದಿಗಳನ್ನು ಬಳಸಿಕೊಳ್ಳಬೇಕು. ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಮೈಸೂರು ನಗರ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್, ಕ್ಯಾರಿ ಬ್ಯಾಗ್ ಫೌಂಡೇಷನ್ ಆಫ್ ಬೆಂಗಳೂರು ನಿರ್ದೇಶಕ ಪ್ರಸನ್ನ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ದುಂಡಯ್ಯ, ಶಿವಲಿಂಗಯ್ಯ, ರೇವಣ್ಣ ಇನ್ನಿತರರು ಉಪಸ್ಥಿತರಿದ್ದರು.

Translate »