ತಿಹಾರ್ ಜೈಲು ಪಾಲಾದ ಡಿಕೆಶಿ
ಮೈಸೂರು

ತಿಹಾರ್ ಜೈಲು ಪಾಲಾದ ಡಿಕೆಶಿ

September 20, 2019

ಬೆಂಗಳೂರು, ಸೆ.19(ಕೆಎಂಶಿ)- ಅಕ್ರಮ ಹಣದ ವಹಿವಾಟು ಆರೋಪದ ಮೇಲೆ ಕರ್ನಾಟಕದ ಮಾಜಿ ಸಚಿವ ಹಾಗೂ ಕಾಂಗ್ರೆಸ್‍ನ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್ ಕೊನೆಗೂ ತಿಹಾರ್ ಜೈಲು ಪಾಲಾಗಿದ್ದಾರೆ.

ನವದೆಹಲಿಯ ತಿಹಾರ್ ಜೈಲ್ ಪಾಲಾದ ಕರ್ನಾಟಕದ ಮೊಟ್ಟಮೊದಲ ರಾಜ ಕಾರಣಿ ಡಿ.ಕೆ.ಶಿವಕುಮಾರ್ ಆಗಿದ್ದಾರೆ. ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಅನಾರೋಗ್ಯ ಸಮಸ್ಯೆಯಿಂದ ಕಳೆದೆರಡು ದಿನಗಳಿಂದ ನವದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿ.ಕೆ. ಶಿವಕುಮಾರ್ ಆರೋಗ್ಯ ಸ್ಥಿತಿ ಸ್ಥಿರವಾ ಗಿದೆ ಎಂದು ವೈದ್ಯರು ದೃಢಪಡಿಸಿದ್ದರಿಂದ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಇಂದು ಬೆಳಗ್ಗೆ 11 ಗಂಟೆಗೆ ತಿಹಾರ್ ಜೈಲಿಗೆ ರವಾನೆ ಮಾಡಲಾಯಿತು.

ಸದ್ಯ ತಿಹಾರ್ ಜೈಲಿನಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಗಣ್ಯ ವ್ಯಕ್ತಿಗಳಿಗೆ ನೀಡುವ ಸೆಲ್ ನಂಬರ್ 7ರಲ್ಲಿ ಇರಿಸಲಾಗಿದೆ. ವಿಶೇಷ ವೆಂದರೆ ಈಗಾಗಲೇ ಜೈಲು ಪಾಲಾಗಿ ರುವ ಮಾಜಿ ಸಚಿವ ಪಿ.ಚಿದಂಬರಂ ಪಕ್ಕದ ಸೆಲ್‍ನಲ್ಲೇ ಡಿಕೆಶಿ ಇದ್ದಾರೆ.

ಸಾಮಾನ್ಯವಾಗಿ ಕೆಳ ಹಂತದ ನ್ಯಾಯಾ ಲಯಗಳು ಹೈಪೆÇ್ರಫೈಲ್ ಕೇಸ್‍ಗಳಲ್ಲಿ ಜಾಮೀನು ನೀಡಲು ಹಿಂದೇಟು ಹಾಕು ತ್ತವೆ. ಕೆಳಹಂತದ ನ್ಯಾಯಾಲಯದಲ್ಲಿ ಅರ್ಜಿ ವಜಾಗೊಂಡರೆ ಹೈಕೋರ್ಟ್ ಮೆಟ್ಟಿಲೇ ರುವ ಅನಿವಾರ್ಯತೆ ಎದುರಾಗುತ್ತದೆ. ಈಗಾಗಲೇ ಇಡಿ ಪರ ವಕೀಲರಾದ ಕೆ.ಎಂ.ನಟರಾಜು ಅವರು ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ನೀಡುವುದಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಆರೋಪಿಯು ಸಾಕಷ್ಟು ಪ್ರಭಾವಶಾಲಿಯಾಗಿರುವುದರಿಂದ ಸಾಕ್ಷಿದಾರರ ಮೇಲೆ ಒತ್ತಡ ಹೇರುವ ಹಾಗೂ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆ ಇದೆ. ಅಲ್ಲದೆ ಈವರೆಗೂ ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಸಮರ್ಪಕ ಉತ್ತರ ನೀಡಿಲ್ಲ. ಹೀಗಾಗಿ ಅವರನ್ನು ಇನ್ನಷ್ಟು ವಿಚಾರಣೆಗೊಳಪಡಿಸಬೇಕಿದೆ ಎಂದು ನಟರಾಜ್ ವಾದಿಸಿದ್ದರು. ಸೆ.3ರಂದು ಇಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದರು. ಮೊದಲ ಹಂತದಲ್ಲಿ 10 ದಿನ ಆನಂತರ 4 ದಿನ ಸೇರಿ ಒಟ್ಟು 14 ದಿನಗಳ ಕಾಲ ನ್ಯಾಯಾಲಯ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿತ್ತು. ಸೆ.17ಕ್ಕೆ ಜಾರಿ ನಿರ್ದೇಶನಾಲಯದ ಅಧೀನ ವಿಚಾರಣೆ ಮುಕ್ತಾಯಗೊಂಡಿದೆ. ನಿನ್ನೆ ನಡೆದ ಜಾಮೀನು ಅರ್ಜಿಯ ವಿಚಾರಣೆ ಯಲ್ಲಿ ಡಿ.ಕೆ.ಶಿವಕುಮಾರ್ ಪರ ಅಭಿಷೇಕ್ ಮನುಸಿಂಘ್ವಿ ಮತ್ತು ಮುಕುಲ್ ರೋಹ್ಟಗಿ ವಾದ ಮಂಡಿಸಿ ಜಾಮೀನು ನೀಡುವಂತೆ ಮನವಿ ಮಾಡಿದರು.

ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ
ನವದೆಹಲಿ, ಸೆ.19-ಅಕ್ರಮ ಹಣ ವರ್ಗಾ ವಣೆ ತಡೆ ಕಾಯ್ದೆ ಅಡಿ ಬಂಧನಕ್ಕೊಳಗಾ ಗಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ವಿಶೇಷ ಕೋರ್ಟ್ ಶನಿವಾರಕ್ಕೆ ಮುಂದೂಡಿದೆ.

ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ವಿಚಾರಣೆಯನ್ನು ಶನಿವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು. ಇಂದು ಮಧ್ಯಾಹ್ನ 3.30ಕ್ಕೆ ವಿಚಾರಣೆ ಆರಂಭವಾ ದಾಗ, ಮೊದಲಿಗೆ ಇಡಿ ಪರ ವಕೀಲರಾದ ಕೆ.ಎಂ. ನಟರಾಜ್ ಅವರು ವಾದ ಮಂಡಿಸಿ, ಡಿಕೆಶಿ ಅವರ ಕೆಲವು ಹಣಕಾಸಿನ ವ್ಯವಹಾರದ ಬಗ್ಗೆ ತನಿಖೆಯಾಗಬೇಕಿದೆ. ಮುಖ್ಯವಾಗಿ ಹಣ ವರ್ಗಾವಣೆ ಬಗ್ಗೆ ತನಿಖೆ ಆಗಬೇಕಿದೆ. ಕೇವಲ ಐಟಿ ಕಾಯ್ದೆಯಡಿ ಬರುವುದಿಲ್ಲ. ಪರೋಕ್ಷ ವಾಗಿ ಪಿಎಂಎಲ್‍ಎ ಅಡಿ ಬರುತ್ತದೆ ಎಂದು ಹೇಳಿದರು. ಡಿಕೆಶಿ ಅವರ ಆದಾಯ ಮೂಲ ಯಾವುದು ಅದನ್ನು ಪತ್ತೆಹಚ್ಚಬೇಕಲ್ಲವೇ? ಹಫ್ತಾ ನೀಡಿ ಕೊಲೆ ಮಾಡಿಸಿದರೆ ಎಷ್ಟು ಹಫ್ತಾ ನೀಡಿ ದ್ದಾರೆ ಎಂಬುದು ಮುಖ್ಯವಾಗುವುದಿಲ್ಲ. ಕೊಲೆ ಮಾಡಿಸಲು ಹಫ್ತಾ ನೀಡಿದ್ದಾರೆ ಎನ್ನುವುದಷ್ಟೇ ಮುಖ್ಯ. ಡಿಕೆಶಿ ಪ್ರಕರಣದಲ್ಲಿ ಹಣದ ಮೌಲ್ಯಕ್ಕಿಂತ ಅವರು ಮನಿ ಲಾಂಡ್ರಿಂಗ್ (ಅಕ್ರಮ ಹಣ ಸಾಗಾಣೆ) ಮಾಡಿದ್ದಾರೆ ಎಂಬುದು ಮುಖ್ಯ ಎಂದು ನಟರಾಜ್ ವಾದಿಸಿದರು. ಇನ್ನು ಡಿಕೆಶಿ ಪರ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದರು. ವಾದ – ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಇಂದೂ ಸಹ ಅರ್ಜಿ ಸಂಬಂಧ ಯಾವುದೇ ನಿರ್ಣಯ ತೆಗೆದುಕೊಳ್ಳಲಿಲ್ಲ. ಬದಲಿಗೆ ವಿಚಾರಣೆಯನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದೆ.

ಡಿಕೆ ಶಿವಕುಮಾರ್ ಅವರ ಇಡಿ ಕಸ್ಟಡಿ ಅವಧಿ ನಿನ್ನೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್ ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಡಿಕೆ ಶಿವಕುಮಾರ್ ಅವರನ್ನು ನಿನ್ನೆ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮಧ್ಯಾಹ್ನ ಅವರನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ. ಡಿಕೆಶಿ ಆರೋಗ್ಯ ಯಥಾಸ್ಥಿತಿಗೆ ಬಂದಿರುವುದಾಗಿ ವೈದ್ಯರು ವರದಿ ನೀಡಿದ್ದರಿಂದ ಪೆÇಲೀಸರು ತಿಹಾರ್ ಜೈಲಿಗೆ ಕರೆದೊಯ್ದಿದ್ದಾರೆ. ತಿಹಾರ್ ಜೈಲಿನ ಸೆಲ್ ನಂ.7ರಲ್ಲಿ ಡಿಕೆಶಿಯನ್ನು ಇಡಲಾಗಿದೆ.

Translate »