ಇಂದಿನಿಂದ ಡಾ. ಎಲ್.ಬಸವರಾಜು ಶತಮಾನೋತ್ಸವ ಕಾರ್ಯಕ್ರಮ ಸಮಾರೋಪ, ರಾಷ್ಟ್ರೀಯ ವಿಚಾರ ಸಂಕಿರಣ
ಮೈಸೂರು

ಇಂದಿನಿಂದ ಡಾ. ಎಲ್.ಬಸವರಾಜು ಶತಮಾನೋತ್ಸವ ಕಾರ್ಯಕ್ರಮ ಸಮಾರೋಪ, ರಾಷ್ಟ್ರೀಯ ವಿಚಾರ ಸಂಕಿರಣ

October 18, 2019

ಮೈಸೂರು, ಅ.17(ಆರ್‍ಕೆಬಿ)- ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಡಾ.ಎಲ್. ಬಸವರಾಜು ಜನ್ಮ ಶತಮಾನೋತ್ಸವ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಅ.18 ಮತ್ತು 19ರಂದು ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅ.19ರ ಮಧ್ಯಾಹ್ನ 3 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಹಿರಿಯ ವಿದ್ವಾಂಸ ಪ್ರೊ.ಎನ್.ಬೋರಲಿಂಗಯ್ಯ `ಮುತ್ತುಮುಳುಗ’ ಪುಸ್ತಕ ಬಿಡುಗಡೆ ಮಾಡುವರು. ಕುಲಸಚಿವ ಪ್ರೊ.ಆರ್.ಶಿವಪ್ಪ ಅಧ್ಯಕ್ಷತೆ ವಹಿಸುವರು. ಪುಸ್ತಕ ಪ್ರಕಾಶಕ ಯು.ಎಸ್.ಮಹೇಶ್ ಭಾಗ ವಹಿಸುವರು. ನಂತರ ವಿವಿಧ ವಿಷಯಗಳ ಕುರಿತಂತೆ ವಿಚಾರಗೋಷ್ಠಿ ನಡೆಯಲಿದೆ ಎಂದರು.

ಡಾ.ಎಲ್.ಬಸವರಾಜು ಅವರ ಸಾಹಿತ್ಯಕ ಸಾಧನೆಯನ್ನು ಕುರಿತು ಹೊಸ ತಲೆÀಮಾರು ಅರಿತು, ಅವರು ಬಿತ್ತಿದ ಸಾಂಸ್ಕøತಿಕ ಬೆಳಕಿನಲ್ಲಿ ನಡೆಯಬೇಕಾಗಿದೆ. ಹೀಗಾಗಿ ಮೈಸೂರಿ ನಲ್ಲಿ ಡಾ.ಎಲ್.ಬಸವರಾಜು ಅವರ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ರೂಪು ಗೊಂಡು ಆಯೋಜಿಸಿದ್ದ ವಿವಿಧ ಕಾರ್ಯಕ್ರಮ ಈಗ ಸಮಾರೋಪಗೊಳ್ಳುತ್ತಿದೆ ಎಂದರು. ಗೋಷ್ಠಿಯಲ್ಲಿ ಡಾ.ಚಿಕ್ಕಮಗಳೂರು ಗಣೇಶ್, ಡಾ.ಭೈರಪ್ಪ, ಜಯಪ್ರಕಾಶ್ ಇದ್ದರು.

 

Translate »