ಡಾ.ರಾಜೀವ್ ತಾರಾನಾಥ್ `ಮೆಲುಕು’ ಸಾಕ್ಷ್ಯಚಿತ್ರ ಬಿಡುಗಡೆ
ಮೈಸೂರು

ಡಾ.ರಾಜೀವ್ ತಾರಾನಾಥ್ `ಮೆಲುಕು’ ಸಾಕ್ಷ್ಯಚಿತ್ರ ಬಿಡುಗಡೆ

February 2, 2020

ಮೈಸೂರು, ಫೆ.1 (ವೈಡಿಎಸ್)-ರಂಗಾ ಯಣದ ಭೂಮಿಗೀತದಲ್ಲಿ ಖ್ಯಾತ ಸರೋದ್ ವಾದಕ ಡಾ.ರಾಜೀವ್ ತಾರಾನಾಥ್ ಮೆಲುಕು ಸಾಕ್ಷ್ಯಚಿತ್ರ ಬಿಡುಗಡೆಗೊಂಡಿತು.

ನಗುವನ ಕ್ರಿಯೇಷನ್ಸ್, ಮೈಸೂರು ರಂಗಾ ಯಣ ಸಂಯುಕ್ತಾಶ್ರಯದಲ್ಲಿ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ವಿಜಯ ಅವರು ಸಾಕ್ಷ್ಯಚಿತ್ರ ಬಿಡುಗಡೆ ಗೊಳಿಸಿದರು. ನಂತರ ಮಾತನಾಡಿದ ಅವರು, ನನ್ನ ಅತ್ಯಂತ ಕಷ್ಟದ ದಿನಗಳಲ್ಲಿ ರಾಜೀವ್ ತಾರಾನಾಥ್ ಅವರ ಪರಿಚಯವಾಯಿತು. ನಂತರದಲ್ಲಿ ಬದುಕನ್ನು ಹೇಗೆ ಕಟ್ಟಿಕೊಳ್ಳ ಬೇಕು, ಮಕ್ಕಳನ್ನು ಹೇಗೆ ಬೆಳೆಸಬೇಕೆಂಬು ದನ್ನು ತಿಳಿಸಿಕೊಟ್ಟರು. ಇಂದು ನನ್ನ ಮಕ್ಕಳು ಒಳ್ಳೆಯ ಪ್ರಜೆಗಳಾಗಿದ್ದರೆ ತಾರಾನಾಥ್‍ರ ಪ್ರೇರಣೆಯಿಂದ ಎಂದು ಸ್ಮರಿಸಿದರು.

ರಾಜೀವ್ ತಾರಾನಾಥ್‍ರವರು ತಮಿಳು ನಾಡಿನಲ್ಲಿದ್ದರು. ಈ ವೇಳೆ ನಾನು, ಅಂದಿನ ಮುಖ್ಯಮಂತ್ರಿ ರಾಮಕೃಷ್ಣಹೆಗಡೆ ಅವರ ಬಳಿ ಹೋಗಿ, ರಾಜೀವ್ ಅವರಂಥ ಪ್ರತಿಭಾವಂತ ತಮಿಳುನಾಡಿನಲ್ಲಿರುವುದು ನಮಗೆ ನಾಚಿಕೆಯಾಗುತ್ತದೆ. ಅವರನ್ನು ರಾಜ್ಯಕ್ಕೆ ಕರೆಸುವಂತೆ ಮನವಿ ಮಾಡಿದೆ. ಆಗ, ಹೆಗಡೆಯವರು ಸಂಸ್ಕøತಿ ಇಲಾಖೆ ಯಲ್ಲಿ ಎಲ್ಲದಕ್ಕೂ ಮೀರಿದ ರಿಜಿಸ್ಟ್ರಾರ್ ಹುದ್ದೆ ಸೃಷ್ಟಿಸಿ, ರಾಜೀವ್ ಅವರನ್ನು ಬೆಂಗಳೂ ರಿಗೆ ಕರೆಸಿದರು. ಈ ವೇಳೆ ಮೈಸೂರಿನಲ್ಲಿ ನಡೆದ ವಿಶ್ವ ಸಂಗೀತ ಸಮ್ಮೇಳನದಲ್ಲಿ ಕುವೆಂಪು, ಶಿವರಾಮಕಾರಂತರನ್ನು ಒಂದೇ ವೇದಿಕೆಯಲ್ಲಿ ನೋಡಲು ಸಾಧ್ಯವಾಗಿದ್ದು ರಾಜೀವ್ ಅವರ ಆಲೋಚನಾ ಶಕ್ತಿ ಯಿಂದ ಎಂದು ತಿಳಿಸಿದರು.

ತಾರಾನಾಥ್ ಅವರ ಮನಸ್ಸು ಪುಟ್ಟ ಮಗುವಿನಂತೆ. ಅವರು ಹಲವು ಸಿನಿಮಾ ಗಳಿಗೆ ಸಂಗೀತ ನೀಡಿದ್ದಾರೆ. ಮನುಷ್ಯನ ಒತ್ತಡ, ದುಃಖವನ್ನು ದೂರ ಮಾಡಿ ಮನ ಸ್ಸಿಗೆ ಸಂತೋಷ ನೀಡುವ ಶಕ್ತಿ ಸಂಗೀತ ಕ್ಕಿದೆ. ರಸಿಕತೆ ಇದ್ದ ಕಡೆ ಕಲಾವಿದರು ಇರು ತ್ತಾರೆ ಎಂದರು. ಇದೇ ಸಂದರ್ಭದಲ್ಲಿ ಡಾ.ರಾಜೀವ್ ತಾರಾನಾಥ್ ಅವರನ್ನು ಸನ್ಮಾನಿಸಲಾಯಿತು.

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ನಗುವನ ಕ್ರಿಯೇ ಷನ್ಸ್ ನಿರ್ಮಾಪಕಿ ಹೆಚ್.ಆರ್.ಸುಜಾತ, ಕೃಷ್ಣ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕೋಲ್ಕತ್ತದ ಖ್ಯಾತ ಸರೋದ್ ಗಾಯಕ ಸೌಗತ್ ರಾಯ್ ಅವರು ಸರೋದ್ ವಾದನ ನಡೆಸಿಕೊಟ್ಟರು.

Translate »