ಕೈಗಾರಿಕಾ ನೀತಿ ಕರಡು ಸಿದ್ಧತೆ: ನಾಳೆ ಸಂವಾದ
ಮೈಸೂರು

ಕೈಗಾರಿಕಾ ನೀತಿ ಕರಡು ಸಿದ್ಧತೆ: ನಾಳೆ ಸಂವಾದ

May 15, 2019

ಮೈಸೂರು,ಮೇ 14- ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ರಿಯಾಯಿತಿ ನೀತಿ ರೂಪಿಸುವ ಕರಡು ಕರ್ನಾಟಕ ಕೈಗಾರಿಕಾ ನೀತಿ 2019-24ರ ಸಂಬಂಧ ಸಂವಾದ ಕಾರ್ಯಕ್ರವನ್ನು ಮೇ 16ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಇಲಾಖೆಯ ಹಿರಿಯ ಅಧಿಕಾರಿಗಳು, ಮೈಸೂರು ವಿಭಾಗ ಮಟ್ಟದ ಪ್ರಸಿದ್ಧ ರಫ್ತುದಾರರು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಕೈಗಾರಿಕಾ ಸಂಘದ ಪದಾಧಿಕಾರಿಗಳು ಭಾಗವಹಿಸುವರು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »