`ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ’ ಬರೆಯುವ   ಕುರಿತು ಮೂರು ದಿನಗಳ ತರಬೇತಿಗೆ ಚಾಲನೆ
ಮೈಸೂರು

`ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ’ ಬರೆಯುವ ಕುರಿತು ಮೂರು ದಿನಗಳ ತರಬೇತಿಗೆ ಚಾಲನೆ

January 16, 2019

ಮೈಸೂರು: ಮೈಸೂರು ವಿಭಾಗದ ಜಿಲ್ಲೆಗಳಿಂದ ಆಯ್ದ ಸರ್ಕಾರಿ ಮತ್ತು ಖಾಸಗಿ ವೈದ್ಯರಿಗಾಗಿ ಬುಧವಾರ ಮೈಸೂರು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿ ಕಾರಿಗಳ ಕಚೇರಿ ವತಿಯಿಂದ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ `ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ’ ಬರೆಯುವ ಸಂಬಂಧಿತ ತರಬೇತಿಗೆ ಚಾಲನೆ ದೊರೆಯಿತು.

ಮೂರು ದಿನಗಳ ತರಬೇತಿಗೆ ಚಾಲನೆ ನೀಡಿದ ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭು ಸ್ವಾಮಿ ಮಾತನಾಡಿ, ಮರಣ ಕಾರಣ ವೈದ್ಯ ಕೀಯ ಪ್ರಮಾಣಪತ್ರದಲ್ಲಿ ನಿಖರವಾದ ವರದಿ ನೀಡಬೇಕು. ನಿಮ್ಮ ಅನುಭವದಡಿ ನೀವು ನೀಡುವ ನಿಖರ ವರದಿ ಇಡೀ ರಾಜ್ಯ ಮತ್ತು ರಾಷ್ಟ್ರದ ಸಂಖ್ಯಾ ದಾಖ ಲಾತಿಯಾಗುತ್ತದೆ. ಆದ್ದರಿಂದ ವೈದ್ಯರು ತಮ್ಮ ಅನುಭವವನ್ನು ಇಂತಹ ಕಾರ್ಯಾ ಗಾರದಲ್ಲಿ ಪರಸ್ಪರ ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು. ತರಬೇತಿಯ ಮೊದಲನೇ ದಿನ ಮೈಸೂರು, ಮಂಡ್ಯ, ಚಿಕ್ಕಮಗ ಳೂರು ಜಿಲ್ಲೆಗಳ 80ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ವೈದ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ಶಿವಮ್ಮ, ಮೂರು ದಿನಗಳ ತರಬೇತಿಯಲ್ಲಿ ಮೈಸೂರು ವಿಭಾ ಗದ 8 ಜಿಲ್ಲೆಗಳ 320 ವೈದ್ಯರು ಭಾಗವಹಿ ಸಲಿದ್ದಾರೆ. ರಾಷ್ಟ್ರದಲ್ಲಿ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರವು ಮರಣ ಕಾರಣಗಳ ಬಗ್ಗೆ ವೈಜ್ಞಾನಿವಾಗಿ ಸಂಗ್ರಹಿ ಸುವ ಮಾಹಿತಿಯಾಗಿರುತ್ತದೆ. ರಾಜ್ಯದಲ್ಲಿ 1967ರಲ್ಲಿ ಪ್ರಾರಂಭಿಸಿದ್ದು, 1969ರ ಜನನ ಮರಣ ನೋಂದಣಿ ಅಧಿನಿಯ ಮದಡಿ ರೋಗಿಗೆ ಶುಶ್ರೂಷೆ ನೀಡಿದ ವೈದ್ಯರು ರೋಗಿಯ ಮರಣದ ನಂತರ ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ ನೀಡು ವುದು ಕಡ್ಡಾಯವಾಗಿದೆ. ಮರಣ ಕಾರಣ ಅಂಕಿಅಂಶಗಳನ್ನು ಅಧಿನಿಯಮ ಪ್ರಕಾರ ವಾರ್ಷಿಕವಾಗಿ ಸಂಗ್ರಹಿಸಲಾಗುತ್ತದೆ. ಈ ಅಂಕಿ ಅಂಶಗಳು ಆರೋಗ್ಯ ಕಾರ್ಯ ಕ್ರಮಗಳ ಪರಿಣಾಮಕಾರಿ ಅನುಷ್ಠಾನ, ನಾಗರಿಕ ಮೂಲ ಭೂತ ಸೌಕರ್ಯಗಳ ವಸತಿ, ಆರೋಗ್ಯ, ಶಿಕ್ಷಣ ಮತ್ತಿತರ ಯೋಜನಾ ಕಾರ್ಯಕ್ರಮ ಗಳನ್ನು ನಿರೂಪಿಸಲು ಉಪಯುಕ್ತವಾಗುತ್ತವೆ. ಆರೋಗ್ಯ ಸಂಶೋಧನಾ ಕಾರ್ಯದಲ್ಲಿ ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದರು.

ಈ ಹಿನ್ನೆಲೆಯಲ್ಲಿ ಮರಣ ಕಾರಣ ಗಳನ್ನು ನಮೂದಿಸುವಲ್ಲಿ ವೈದ್ಯಾಧಿಕಾರಿ ಗಳ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿ ಸುವ ನಿಟ್ಟಿನಲ್ಲಿ ಈ ತರಬೇತಿ ಶಿಬಿರವನ್ನು ಆಯೋಜಿಸಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಕೆಪಿಎಂಇ ನೋಡಲ್ ಅಧಿಕಾರಿ ಡಾ.ಉಮೇಶ್, ಕೆ.ಆರ್.ಆಸ್ಪತ್ರೆಯ ಡಾ.ಮುದಸ್ಸಿರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಸಹಾಯಕ ನಿರ್ದೇಶಕ ಎಂ.ಪ್ರಕಾಶ್ ಇನ್ನಿ ತರರು ಉಪಸ್ಥಿತರಿದ್ದರು.

Translate »