ಸ್ತ್ರೀಧ್ವನಿ ಗಟ್ಟಿಗೊಳಿಸುವ ಜನಪದ ಸಾಹಿತ್ಯ: ಪ್ರೊ.ಕೃಷ್ಣಮೂರ್ತಿ
ಮೈಸೂರು

ಸ್ತ್ರೀಧ್ವನಿ ಗಟ್ಟಿಗೊಳಿಸುವ ಜನಪದ ಸಾಹಿತ್ಯ: ಪ್ರೊ.ಕೃಷ್ಣಮೂರ್ತಿ

January 16, 2019

ಮೈಸೂರು: ಜನಪದ ಸಾಹಿತ್ಯ ಎಂದಿಗೂ ಹೆಣ್ಣಿನ ಬಾಯಿ ಮುಚ್ಚಿಸಿ, ಮೂಕಿಯರ ನ್ನಾಗಿಸಿಲ್ಲ. ಬದಲಾಗಿ ಆಕೆಯ ಧ್ವನಿಯನ್ನು ಗಟ್ಟಿ ಗೊಳಿಸಿದೆ ಎಂದು ಮಹಾರಾಣಿ ವಾಣಿಜ್ಯ ಕಾಲೇ ಜಿನ ಸಹ ಪ್ರಾಧ್ಯಾಪಕ ಪ್ರೊ. ಮೈಸೂರು ಕೃಷ್ಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಮಹಾರಾಣಿ ಕಲಾ ಕಾಲೇಜು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಜಿ.ಎನ್.ಗುಂಡಪ್ಪಯ್ಯ ದತ್ತಿ ಉಪ ನ್ಯಾಸ ಕಾರ್ಯಕ್ರಮದಲ್ಲಿ `ಜನಪದ ಸಾಹಿತ್ಯದಲ್ಲಿ ಮಹಿಳೆ’ ವಿಷಯ ಕುರಿತು ಮಾತನಾಡಿದ ಅವರು, ಜನಪದ ಸಾಹಿತ್ಯದಲ್ಲಿ ಮಹಿಳೆಯರನ್ನು ಎರಡು ದೃಷ್ಟಿಕೋನದಲ್ಲಿ ನೋಡಬಹುದಾಗಿದೆ. ಸಾಂಪ್ರ ದಾಯಿಕ ಮತ್ತು ಅಸಂಪ್ರದಾಯಿಕ ವಿಚಾರಗಳು ನಮ್ಮ ಮುಂದೆ ಬರುತ್ತವೆ. ಹೆಣ್ಣು ಎಂದರೆ ಹೇಗಿರ ಬೇಕೆಂಬ ಪಾರಂಪರಿಕ ಗ್ರಹಿಕೆ ಸಾಂಪ್ರದಾಯಿಕ ವಿಧಾನವಾಗಿದ್ದರೆ, ಹೆಣ್ಣಿಗೂ ಒಂದು ಅನನ್ಯವಾದ ಅಸ್ಥಿತ್ವವಿದೆ. ಅದನ್ನು ಎತ್ತಿ ಹಿಡಿಯಬೇಕೆಂಬುದು ಅಸಂಪ್ರದಾಯಿಕ ವಿಧಾನವಾಗಿದೆ ಎಂದರು.

ಜನಪದ ಸಾಹಿತ್ಯವನ್ನು ಸಮೂಹದ ಸೃಷ್ಟಿ ಎನ್ನುತ್ತೇವೆ. ಗುಂಪು ಗುಂಪುಗಳಿಂದ ಈ ಸಾಹಿತ್ಯ ಜನ್ಮ ತಾಳಿದೆ. ಜಾತಿ ವರ್ಗ ಭೇದ ನಿರಪೇಕ್ಷಣದಡೆ ಯಲ್ಲಿ ಜನಪದ ಸಾಹಿತ್ಯ ಸೃಷ್ಟಿಯಾಗುತ್ತದೆ. ಇದರಲ್ಲಿ ಮಹಿಳೆಯರ ಪಾತ್ರವಿದೆ ಎಂಬ ಅಂಶವನ್ನು ಗಮನಿ ಸಬೇಕು. ಸೃಷ್ಟಿಗೊಳ್ಳುವ ಪ್ರಕ್ರಿಯೆಯಲ್ಲಿಯೇ ಮಹಿಳೆ ಯರಿದ್ದಾಳೆ. ಹೆಣ್ಣಿನ ಧ್ವನಿಯನ್ನು ಅಡಗಿಸದೆ, ಅದಕ್ಕೆ ಪುಷ್ಟಿ ನೀಡಲಾಗಿದೆ. ಆಕೆಯ ಧ್ವನಿಗೆ ನೆಲೆ ದೊರೆತಿದೆ. ಈ ಸಾಹಿತ್ಯದಲ್ಲಿ ಆಕೆಯ ಧ್ವನಿ ಪಿಸು ಹಾಗೂ ಮೆಲುವಾಗಿಲ್ಲ. ಧ್ವನಿಯೆತ್ತಿ ಹಾಡಿದ ಪದಗಳು ಹೆಣ್ಣಿನ ಬಗ್ಗೆ ಇದ್ದ ಅಂಧಕಾರವನ್ನು ತೊಡೆದು ಹಾಕುವ ಪ್ರಯತ್ನ ಮಾಡಿವೆ ಎಂದು ಹೇಳಿದರು.

ಜನಪದ ಸಾಹಿತ್ಯದೊಳಗೆ ಗಟ್ಟಿ ನಾರಿಯರು ಸಿಕ್ಕುತ್ತಾರೆ. ಸಂಪ್ರದಾಯದ ವಿಚಾರವನ್ನು ಅವಲೋ ಕಿಸಿದಾಗ ಹೆಣ್ಣನ್ನು ಕಟ್ಟಿ ಹಾಕುವುದನ್ನು ಕಾಣುತ್ತೇವೆ. ಮದುವೆಯಾದ ನಂತರ ಮಗಳನ್ನು ಗಂಡನ ಮನೆಗೆ ಕಳುಹಿಸುವ ವಿಚಾರದಲ್ಲಿ ಹಾಗೂ ಗಂಡನ ಮನೆಯ ಮುಳ್ಳಿನ ಹಾದಿ ಸೇರಿದಂತೆ ಎದುರಾಗುವ ವಿವಿಧ ಸಮಸ್ಯೆಗಳ ಕುರಿತು ಜಾನಪದದ ಅನೇಕ ಸಾಹಿತ್ಯ, ಕಾವ್ಯ, ತ್ರಿಪದಿ ಸೇರಿದಂತೆ ವಿವಿಧ ಕಾವ್ಯಗಳಲ್ಲಿ ಭಿತ್ತರಿ ಸಲಾಗಿದೆ. ಆದರೂ ಅನೇಕ ಗಟ್ಟಿ ಧ್ವನಿಯ ನಾರಿಯ ರನ್ನು ಕಾಣಬಹುದಾಗಿದೆ. ಗಂಡನ ಮನೆ `ಗಂಡು ಗಾರೆ ಮುಳ್ಳ’ನ್ನು ತೀಕ್ಷ್ಣವಾಗಿ ಪ್ರತಿಭಟಿಸುವವರನ್ನು ಕಂಡಿದ್ದೇವೆ ಎಂದರು.

ಇದಕ್ಕೂ ಮುನ್ನ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಅನೇಕ ಮಹನೀಯರು ಗಟ್ಟಿಗೊಳಿಸಿದ್ದಾರೆ. ಜಾನಪದ ಕ್ಷೇತ್ರ ಉಳಿವಿಗೆ ಸಾಕಷ್ಟು ಹಿರಿಯರು ಶ್ರಮಿಸಿದ್ದಾರೆ. ಈ ಹಿಂದೆ ಜಾನ ಪದದ ಅನೇಕ ಉಪನ್ಯಾಸಕರು ಭಾವನಾತ್ಮಕವಾಗಿ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳ ಮನಸೂರೆಗೊಳ್ಳುತ್ತಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಹೆಚ್.ಪ್ರಕಾಶ್ ಉದ್ಘಾಟಿಸಿ ದರು. ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ವಿ.ವಸಂತ್‍ಕುಮಾರ್, ಕಸಾಪ ಸಂಚಾಲಕ ದೇವರಾಜು ಉಪಸ್ಥಿತರಿದ್ದರು.

Translate »