ದಸರಾ ವೇಳೆ ಡ್ರೋಣ್ ಕ್ಯಾಮರಾ ಬಳಕೆ ನಿಷೇಧ
ಮೈಸೂರು

ದಸರಾ ವೇಳೆ ಡ್ರೋಣ್ ಕ್ಯಾಮರಾ ಬಳಕೆ ನಿಷೇಧ

October 1, 2019

ಮೈಸೂರು,ಸೆ.30(ಆರ್‍ಕೆ)-ಸೆಪ್ಟೆಂ ಬರ್ 29ರಿಂದ ಅಕ್ಟೋಬರ್ 8ರವರೆಗೆ ನಡೆಯುವ ದಸರಾ ಕಾರ್ಯಕ್ರಮ ಗಳಲ್ಲಿ ದಸರಾ ಕ್ಯಾಮರಾ ಬಳಸಿ ದೃಶ್ಯ ಸೆರೆ ಹಿಡಿಯುವುದನ್ನು ನಿಷೇಧಿಸ ಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಆದೇಶ ಉಲ್ಲಂಘಿಸಿದರೆ, ಏರ್‍ಕ್ರಾಫ್ಟ್ ಕಾಯ್ದೆ ಮತ್ತು ನಿಯಮದ ಪ್ರಕಾರ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರಿಗೆ ಸೂಚನೆಗಳು: ಅರಮನೆ ಆವರಣ ಮತ್ತು ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನಕ್ಕೆ ನಿಗದಿತ ದ್ವಾರಗಳಿಂದಲೇ ಆಗಮಿಸಬೇಕು. ಸಾರ್ವಜನಿಕರು ಸಿಬ್ಬಂದಿಗಳ ತಪಾಸಣೆಗೆ ಸಹಕರಿಸ ಬೇಕು, ಸುರಕ್ಷತೆ ದೃಷ್ಟಿಯಿಂದ ಆಯುಧ ಗಳು, ಚಾಕು, ಗಾಜಿನ ಬಾಟಲ್‍ಗಳು, ಬೆಂಕಿ ಪೊಟ್ಟಣ, ಆಟಿಕೆ ಸಾಮಾನು ಗಳು ಹಾಗೂ ಇನ್ನಿತರೆ ಸ್ಫೋಟಕ ವಸ್ತುಗಳನ್ನು ತರಬಾರದೆಂದು ಆಯು ಕ್ತರು ಸೂಚಿಸಿದ್ದಾರೆ. ನಿಗದಿತ ಸ್ಥಳ ದಲ್ಲೇ ವಾಹನಗಳನ್ನು ನಿಲ್ಲಿಸಿ ತಮಗೆ ಮೀಸಲಿರುವ ಆಸನ ಗಳಲ್ಲೇ ಕುಳಿತು ಕೊಳ್ಳಬೇಕು ಹಾಗೂ ಎರಡೂ ಕಡೆಯ ಕಾರ್ಯಕ್ರಮಕ್ಕೆ ಬೆಲೆಬಾಳುವ ವಸ್ತು ಗಳು ಹಾಗೂ ಆಭರಣಗಳನ್ನು ತರಬಾರ ದೆಂದು ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

Translate »