ಮೈಸೂರು ದಸರಾ ನಿಲ್ಲಿಸುವಂತೆ ಮಹಿಷ ದಸರಾ ಆಚರಣಾ ಸಮಿತಿ ಆಗ್ರಹ
ಮೈಸೂರು

ಮೈಸೂರು ದಸರಾ ನಿಲ್ಲಿಸುವಂತೆ ಮಹಿಷ ದಸರಾ ಆಚರಣಾ ಸಮಿತಿ ಆಗ್ರಹ

October 1, 2019

ಮೈಸೂರು, ಸೆ.30(ಪಿಎಂ)-ಸ್ಥಳೀಯರ ವಿರೋಧವಿದೆ ಎಂಬ ಕಾರಣ ನೀಡಿ ಮಹಿಷ ದಸರಾಕ್ಕೆ ತಡೆಯೊಡ್ಡಿದ್ದು, ಇದೇ ಮಾನದಂಡದ ಆಧಾರದಲ್ಲಿ ಮೈಸೂರು ದಸರಾ ನಿಲ್ಲಿಸಬೇಕು ಎಂದು ಮಹಿಷ ದಸರಾ ಆಚರಣಾ ಸಮಿತಿ ಮುಖಂಡರು ಆಗ್ರಹಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಮೈಸೂರು ದಸರಾವನ್ನೂ ನಿಲ್ಲಿಸಬೇಕೆಂ ಬುದು ಸ್ಥಳೀಯರಾದ ನಮ್ಮ ಒತ್ತಾಯವಾಗಿದೆ. ನಾವೂ ಸಾವಿರಾರು ಸಂಖ್ಯೆಯಲ್ಲಿ ದಸರಾ ನಿಲ್ಲಿಸಬೇಕು ಎಂದು ಪತ್ರ ಚಳವಳಿ ನಡೆಸುತ್ತೇವೆ ಎಂದು ತಿಳಿಸಿದರು.

ಒಂದು ವೇಳೆ ದಸರಾ ನಿಲ್ಲಿಸದಿದ್ದರೆ, ನಮ್ಮನ್ನು ಚರ್ಚೆಗೆ ಕರೆಯದಿದ್ದರೆ ನಿತ್ಯ ಪ್ರತಿ ಭಟನೆ ನಡೆಸಲಾಗುವುದು. ಜಂಬೂ ಸವಾರಿಯ ದಿನವೂ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು. ಮೈಸೂರಿನಲ್ಲಿ ಅಸ್ಪøಶ್ಯತೆ ಆಚರಣೆ ನಡೆಯುತ್ತಿದೆ ಎಂದು ವಿದೇಶಿ ಪ್ರವಾಸಿಗರಿಗೆ ಇಂಗ್ಲಿಷ್ ಕರಪತ್ರ ವಿತರಿಸಲಾಗುವುದು ಎಂದು ªಎಚ್ಚರಿಕೆ ನೀಡಿದರು.

ದಸರಾ ಉದ್ಘಾಟನೆಯ ದಿನ ಚಾಮುಂಡಿಬೆಟ್ಟದಲ್ಲಿ ಸಮಾರಂಭ ವೀಕ್ಷಿಸಲು ಬಂದಿ ದ್ದವರನ್ನು ವಿನಾಕಾರಣ ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಇದು ಸರಿಯಲ್ಲ. ಸಚಿವ ವಿ.ಸೋಮಣ್ಣ ಅವರೊಂದಿಗೆ ಚರ್ಚೆ ಮಾಡಬೇಕು ಎಂದರೆ, ಅವರು ನಿಮ್ಮ ಜತೆ ಚರ್ಚೆ ನಡೆಸಲು ಸಾಧ್ಯವಿಲ್ಲ ಎನ್ನುತ್ತಾರೆ. ನಾವೇನೂ ಅವರೊಂದಿಗೆ ಹರಟೆ ಹೊಡೆಯಲು ಕೇಳಿಲ್ಲ ಎಂದು ಹರಿಹಾಯ್ದರು. ಇತಿಹಾಸ ಅರಿಯದ ಸಿ.ಟಿ.ರವಿ ನಮ್ಮನ್ನು ಮಾನಸಿಕ ಅಸ್ವಸ್ಥರು. ಇವರಿಗೆ ಸರ್ಕಾರದಿಂದ ಬೇಕಿದ್ದರೆ ಚಿಕಿತ್ಸೆ ಕೊಡಿಸುತ್ತೇವೆ ಎಂದಿದ್ದಾರೆ. ನಿಜವಾದ ಮಾನಸಿಕ ಅಸ್ವಸ್ಥರು ಅವರೇ. ಅವರಿಗೆ ನಮ್ಮ ವತಿಯಿಂದಲೇ ಉಚಿತ ಚಿಕಿತ್ಸೆ ನೀಡಲಾಗು ವುದು ಎಂದು ಲೇವಡಿ ಮಾಡಿದರು. ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಸೋಸಲೆ ಸಿದ್ದರಾಜು, ಪುನೀತ್, ಅಶೋಕ, ಕಾಂತರಾಜು ಗೋಷ್ಠಿಯಲ್ಲಿದ್ದರು.

Translate »